ETV Bharat / state

ಈ ಬಾರಿ ಕಠಿಣ ಲಾಕ್​​ಡೌನ್​ ಜಾರಿ: ಅನಗತ್ಯವಾಗಿ ಓಡಾಡಿದ್ರೆ ಕೇಸ್​ ಪಕ್ಕಾ!​

author img

By

Published : Jul 14, 2020, 10:33 AM IST

ಎಲ್ಲಾ ರಸ್ತೆಗಳಲ್ಲಿ ಬ್ಯಾರಿಕೇಡ್​ಗಳನ್ನು ಹಾಕಲಾಗಿದ್ದು, ಯಾವುದೇ ವಾಹನ ಸವಾರರು ಬಂದರೂ ಪೊಲೀಸರು‌ ತಪಾಸಣೆ ನಡೆಸಲಿದ್ದಾರೆ. ಒಂದು ವೇಳೆ ವಿನಾ ಕಾರಣ ಓಡಾಟ‌ ಮಾಡುವುದು ಕಂಡು ಬಂದರೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ‌ ( ಎನ್.ಡಿ.ಎಂ.ಎ.) ಪ್ರಕರಣ ದಾಖಲಿಸಿಕೊಂಡು ವಾಹನ ಜಪ್ತಿ ಮಾಡಲಿದ್ದಾರೆ.

ಅನಗತ್ಯ ಓಡಾಡಿದ್ರೆ ಕೇಸ್​ ಫಿಕ್ಸ್​
ಅನಗತ್ಯ ಓಡಾಡಿದ್ರೆ ಕೇಸ್​ ಫಿಕ್ಸ್​

ಬೆಂಗಳೂರು: ಕೊರೊನಾ ಮಹಾಮಾರಿ‌ ಹೆಚ್ಚುತ್ತಿರುವ ಹಿನ್ನೆಲೆ ಕಠಿಣ ಲಾಕ್​​ಡೌನ್ ಹೇರಿರುವ ಕಾರಣ ಬೇಕಾಬಿಟ್ಟಿ ವಾಹನದಲ್ಲಿ ರಸ್ತೆಗೆ ಇಳಿದರೆ ನಿಮ್ಮ ವಾಹನ ಜಪ್ತಿಯಾಗುವುದು ಗ್ಯಾರಂಟಿ. ಈ ಹಿಂದೆ ಲಾಕ್​​ಡೌನ್ ಇದ್ದಾಗ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಲ್ಲಿ ಕೆಲವೊಂದು ವಿಚಾರಗಳಲ್ಲಿ ವಿಫಲರಾಗಿದ್ದರು. ಹೀಗಾಗಿ ಸಿಎಂ ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ‌‌ ಕಟ್ಟುನಿಟ್ಟಿನ ಲಾಕ್​ಡೌನ್​ ಜಾರಿ ಮಾಡಲು ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ಪ್ರಮುಖವಾಗಿ ನಾಳೆ ಎಲ್ಲಾ ರಸ್ತೆಗಳಲ್ಲಿ ಬ್ಯಾರಿಕೇಡ್​ಗಳನ್ನು ಹಾಕಲಾಗುತ್ತೆ. ಯಾವುದೇ ವಾಹನ ಸವಾರರು ಬಂದರೂ ಪೊಲೀಸರು ‌ ತಪಾಸಣೆ ನಡೆಸಲಿದ್ದಾರೆ. ಒಂದು ವೇಳೆ ವಿನಾ ಕಾರಣ ಓಡಾಟ‌ ಮಾಡುವುದು ಕಂಡು ಬಂದರೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ‌ ( ಎನ್.ಡಿ.ಎಂ.ಎ.) ಪ್ರಕರಣ ದಾಖಲಿಸಿಕೊಂಡು ವಾಹನ ಜಪ್ತಿ ಮಾಡಲಿದ್ದಾರೆ. ಈ ಹಿಂದೆ‌ ಕೂಡ ಲಕ್ಷಾಂತರ ವಾಹನಗಳನ್ನ ಪೊಲೀಸರು ಜಪ್ತಿ ಮಾಡಿ ತದ ನಂತರ ನ್ಯಾಯಾಲಯದ ಅನುಮತಿ ‌ಮೇರೆಗೆ ದಂಡ ವಿಧಿಸಿ ಮಾಲೀಕರಿಗೆ ಹಸ್ತಾಂತರ ಮಾಡಿದ್ದರು.

ಈ ಹಿಂದೆ ಲಾಕ್​​ಡೌನ್ ಸಂದರ್ಭದಲ್ಲಿ ಅಗತ್ಯ ಸೇವೆಗೆ ತೆರಳುವವರಿಗೆ ಪೊಲೀಸರು ಪಾಸ್ ನೀಡಿದ್ದರು. ಆದರೆ ಈ ಬಾರಿ ತುರ್ತು ಸಂದರ್ಭದಲ್ಲಿ ರಾಜ್ಯದ ಒಳಗೆ ಅಥವಾ ಹೊರಗೆ ಪ್ರಯಾಣ ಮಾಡುವವರಿದ್ದರೆ ಸೇವಾ ಸಿಂಧು ಪೋರ್ಟಲ್ ಮುಖಾಂತರ ಪಾಸ್ ಪಡೆದು ತದ ನಂತರ ಓಡಾಡಬೇಕಾಗಿದೆ.

ಹಾಗೆಯೇ ಅಗತ್ಯ ಸೇವೆ ಸಲ್ಲಿಸುವ ವೈದ್ಯರು,‌ ನರ್ಸ್, ಪೊಲೀಸರು, ಸರ್ಕಾರಿ‌ ನೌಕರರು, ಪತ್ರಕರ್ತರು ಐಡಿ ತೋರಿಸಿ ಓಡಾಟ ನಡೆಸಬಹುದು. ಸದ್ಯ ಈ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕೆಂದು ನಗರ ಪೊಲೀಸ್​ ಆಯುಕ್ತ ಭಾಸ್ಕರ್ ರಾವ್, ಟ್ರಾಫಿಕ್ ಜಂಟಿ ಆಯುಕ್ತ ರವಿಕಾಂತೇಗೌಡ ಪೊಲೀಸ್ ಸಿಬ್ಬಂದಿಗೆ ಸೂಚಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.