ಬೆಂಗಳೂರು: ಲಾಕ್ಡೌನ್ ವೇಳೆ ಒಂಟಿಯಾಗಿ ಓಡಾಡುವ ವೃದ್ಧರನ್ನೇ ಟಾರ್ಗೆಟ್ ಮಾಡಿಕೊಂಡ ಖದೀಮ ನಡೆದುಕೊಂಡು ಹೋಗುತ್ತಿದ್ದ ಅಜ್ಜಿಯ ಚಿನ್ನದ ಸರಕ್ಕೆ ಕೈ ಹಾಕಿ ವಿಫಲವಾಗಿರುವ ಘಟನೆ ನಡೆದಿದೆ.
ಚಾಮರಾಜಪೇಟೆಯ ಸಿಸಿಬಿ ಕಚೇರಿ ಬಳಿ ವೃದ್ಧೆ ನಡೆದುಕೊಂಡು ಹೋಗುವಾಗ ಕಳ್ಳನೊಬ್ಬ ಅಜ್ಜಿಯನ್ನು ಹಿಂಬಾಲಿಸಿ ಕುತ್ತಿಗೆಗೆ ಕೈ ಹಾಕಿ ಸರ ಕಸಿದಿದ್ದಾನೆ. ಇದರಿಂದ ಗಾಬರಿಗೊಂಡು ಅಜ್ಜಿ ಕಿರುಚಾಡಿದ್ದಾರೆ. ಓಡುವ ಪ್ರಯತ್ನದಲ್ಲಿದ್ದ ಖದೀಮ ಸ್ಥಳೀಯರ ಕೈಗೆ ಸಿಕ್ಕರೆ ತನ್ನ ಕಥೆ ಮುಗಿಯಿತು ಎಂದು ತಿಳಿದು ಸರವನ್ನು ಅಲ್ಲೇ ಬಿಸಾಡಿ ಕ್ಷರ್ಣಾರ್ಧದಲ್ಲಿ ಮಾಯವಾಗಿದ್ದಾನೆ.
ಇತ್ತ ಅಜ್ಜಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.
ಓದಿ: ಕೆಎಸ್ಆರ್ಟಿಸಿ ಲೋಗೋ ಸಂಬಂಧ ಅನಗತ್ಯವಾಗಿ ಗೊಂದಲ ಸೃಷ್ಟಿಯಾಗಿದೆ: ಡಿಸಿಎಂ ಸವದಿ