ಬೆಂಗಳೂರು: ನೂತನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಂಡಿಸಲಿರುವ ಧನ ವಿನಿಯೋಗ ಮಸೂದೆಯನ್ನು ವಿರೋಧಿಸದಿರಲು ಜೆಡಿಎಸ್ ನಿರ್ಧರಿಸಿದೆ.
ವಿಶ್ವಾಸ ಮತಯಾಚನೆ ಬಳಿಕ ಸಿಎಂ ಯಡಿಯೂರಪ್ಪ ಹಣಕಾಸು ವಿಧೇಯಕ ಮಂಡನೆ ಮಾಡಲಿದ್ದಾರೆ. ಹಿಂದಿನ ಕುಮಾರಸ್ವಾಮಿ ದೋಸ್ತಿ ಸರ್ಕಾರದ ಧನವಿನಿಯೋಗ ಮಸೂದೆಯನ್ನೇ ಯಡಿಯೂರಪ್ಪ ಮಂಡಿಸಲಿದ್ದಾರೆ. ಧನ ವಿನಿಯೋಗ ಮಸೂದೆಯಲ್ಲಿ ಯಾವುದನ್ನೂ ಬದಲಾಯಿಸಿಲ್ಲ ಎಂದು ಈಗಾಗಲೇ ಸಿಎಂ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ತಾವೇ ಸಿದ್ಧಪಡಿಸಿರುವ ಮಸೂಧೆಗೆ ವಿರೋಧ ಮಾಡದಿರುವುದಕ್ಕೆ ಜೆಡಿಎಸ್ ನಿರ್ಧರಿಸಿದೆ.
ಜೆಡಿಎಸ್ ವರಿಷ್ಠ ದೇವೇಗೌಡರೇ ಈ ಬಗ್ಗೆ ತೀರ್ಮಾನ ಕೈಗೊಂಡಿದ್ದು, ರಾಜ್ಯದ ಜನರು ಹಾಗೂ ಆಡಳಿತ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಹೀಗಾಗಿ ಬಿಎಸ್ ವೈ ಬಿಲ್ ಮಂಡಿಸುವಾಗ ಜೆಡಿಎಸ್ ಶಾಸಕರು ತಟಸ್ಥವಾಗಿರಲು ನಿರ್ಧಾರ ಮಾಡಿದ್ದಾರೆ.