ETV Bharat / state

ನಾಯಕತ್ವ ಬದಲಾವಣೆ ಸನ್ನಿವೇಶ ಇಲ್ಲ : ಬಿಎಸ್​ವೈ ಪರ ಕೇಂದ್ರ ಸಚಿವ ಅಠಾವಳೆ ಬ್ಯಾಟಿಂಗ್ - central Minister Ramadas Athavale talk about cm BS Yadiyurappa

ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ವಿಚಾರ ಸ್ವಾಗತಾರ್ಹ. ಹಿಂದೂ ಧರ್ಮದಲ್ಲಿ ಗೋವುಗಳನ್ನ ದೇವರು ಎಂದು ಪೂಜಿಸಲಾಗುತ್ತದೆ. ಗೋ ಹತ್ಯೆಗಳು ನಡೆಯಬಾರದು‌. ಗೋವುಗಳನ್ನು ಉಳಿಸಲು ಎಲ್ಲಾ ಕಡೆ ಗೋಶಾಲೆಗಳು ತೆರೆಯಬೇಕಿದೆ..

Ramadas Athavale
ಕೇಂದ್ರ ಸಚಿವ ರಾಮದಾಸ್ ಅಠಾವಳೆ
author img

By

Published : Dec 20, 2020, 8:00 PM IST

ಬೆಂಗಳೂರು : ಯಡಿಯೂರಪ್ಪ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಅವರನ್ನು ಬದಲಿಸುವ ಸನ್ನಿವೇಶ ಇಲ್ಲ. ಒಂದು ವೇಳೆ ಅಂತಹ ಚರ್ಚೆ ಹೈಕಮಾಂಡ್ ಮಟ್ಟದಲ್ಲಿ ನಡೆದರೆ ಬಿಎಸ್‌ವೈ ಒಳ್ಳೆಯ ಆಡಳಿತ ನೀಡುತ್ತಿದ್ದಾರೆ ಎಂದು ಹೈಕಮಾಂಡ್​ಗೆ ತಿಳಿಸುತ್ತೇನೆ ಎಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ತಿಳಿಸಿದ್ದಾರೆ.

ನಗರದ ಕುಮಾರಕೃಪಾ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಎಸ್​ವೈ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಸನ್ನಿವೇಶವೇ ಇಲ್ಲ. ಅಂತಹ ಯೋಚನೆಯೂ ಹೈಕಮಾಂಡ್ ಗೆ ಇಲ್ಲ. ಯಡಿಯೂರಪ್ಪನವರು ದಲಿತ, ಆದಿವಾಸಿ ಸೇರಿದಂತೆ ಎಲ್ಲ ಹಿಂದುಳಿದ ವರ್ಗದವರಿಗೂ ತಮ್ಮ ಯೋಜನೆಗಳನ್ನ ಕೊಟ್ಟಿದ್ದಾರೆ. ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡುತ್ತಿದ್ದಾರೆ. ಹಾಗಾಗಿ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದರು.

ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಸ್ವಾಗತಾರ್ಹ: ಕರ್ನಾಟಕದಲ್ಲಿ ಮರಾಠಾ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸುತ್ತಿರುವುದನ್ನ ನಾನು ಸ್ವಾಗತಿಸುತ್ತೇನೆ. ಬೆಳಗಾವಿ ಸೇರಿದಂತೆ ಇತರ ಜಿಲ್ಲೆಗಳ ಗಡಿ‌ ಸೇರಿದಂತೆ ಕರ್ನಾಟಕದಲ್ಲೂ ಸಾಕಷ್ಟು ಮರಾಠಿಗರಿದ್ದಾರೆ.ಅವರಿಗಾಗಿ ಮರಾಠಾ ಪ್ರಾಧಿಕಾರ ಸ್ಥಾಪಿಸಿರುವುದಕ್ಕೆ ಸಿಎಂ ಬಿಎಸ್ ವೈ ಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಪ್ರತಿಷ್ಠೆಯಿಂದ ಸಮಸ್ಯೆ ಪರಿಹಾರವಾಗಲ್ಲ: ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯಿಂದ ರೈತರಿಗೆ ಸಮಸ್ಯೆ ಇಲ್ಲ. ಪಂಜಾಬ್ ಸೇರಿದಂತೆ ದೆಹಲಿ ಸಮೀಪದ ರೈತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ಇದು ರೈತರಿಗೆ ಮಾರಕವಾದ ತಿದ್ದುಪಡಿ ಕಾಯ್ದೆಯಲ್ಲ.ರೈತರ ಜತೆ ಚರ್ಚೆಗೆ ಕೇಂದ್ರ ಸಿದ್ಧವಿದೆ. ಮೋದಿ ಸರ್ಕಾರ ಸಮಸ್ಯೆ ಬಗೆಹರಿಸಲು ಸರ್ವ ರೀತಿಯಲ್ಲೂ ಪ್ರಯತ್ನ ಮಾಡುತ್ತಿದೆ. ಪ್ರತಿಷ್ಠೆಯಾಗಿ ತೆಗೆದುಕೊಳ್ಳುವುದರಿಂದ ಸಮಸ್ಯೆ ಬಗೆಹರಿಯಲ್ಲ ಎಂದರು.

ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ: ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಬರಲಿದೆ. ಮಮತಾ ದೀದಿ‌ ಸರ್ಕಾರ ಕೊನೆಗೊಂಡು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಇದು ಮಮತಾ ಬ್ಯಾನರ್ಜಿಯವರಿಗೂ ಗೊತ್ತಾಗಿದೆ. ಹೀಗಾಗಿ ಅವರು ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ನಡೆಸುತ್ತಿದ್ದಾರೆ. ಆದರೆ ಬಿಜೆಪಿ ಗೆಲುವು ಶತಃಸಿದ್ದ. ದೀದಿ ಬಂಗಾಳವನ್ನು ಕಂಗಾಲು ಮಾಡಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಬಂಗಾಳವನ್ನು ಬಂಗಾರ ರಾಜ್ಯವನ್ನಾಗಿ ಮಾಡುತ್ತೇವೆ ಎಂದರು.

ಗೋಹತ್ಯೆ ನಿಷೇಧಕ್ಕೆ ಸ್ವಾಗತ: ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ವಿಚಾರ ಸ್ವಾಗತಾರ್ಹ. ಹಿಂದೂ ಧರ್ಮದಲ್ಲಿ ಗೋವುಗಳನ್ನ ದೇವರು ಎಂದು ಪೂಜಿಸಲಾಗುತ್ತದೆ. ಗೋ ಹತ್ಯೆಗಳು ನಡೆಯಬಾರದು‌. ಗೋವುಗಳನ್ನು ಉಳಿಸಲು ಎಲ್ಲಾ ಕಡೆ ಗೋಶಾಲೆಗಳು ತೆರೆಯಬೇಕಿದೆ ಎಂದು ರಾಜ್ಯದಲ್ಲಿನ ಗೋ ಹತ್ಯೆ ಮಸೂದೆಯನ್ನ ಸರ್ಮಥಿಸಿಕೊಂಡರು.

ಓದಿ: ಜ.1ಕ್ಕೆ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ದಿನಾಚರಣೆ ಆಚರಿಸುವಂತೆ ಸರ್ಕಾರದ ಆದೇಶ

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಸಿದ್ದ: ಮಹಾರಾಷ್ಟ್ರದಲ್ಲಿ ಶಿವಸೇನೆ ಪಕ್ಷವು ಕಾಂಗ್ರೆಸ್ ಎನ್ ಸಿ‌ಪಿ ಜೊತೆ ಮೈತ್ರಿ ಸರ್ಕಾರ ರಚನೆ ಮಾಡಿದೆ. ಹಿಂದೆ ಶಿವಸೇನೆ ನಮ್ಮ ಜೊತೆ ಮೈತ್ರಿ ಮಾಡಿಕೊಂಡಿತ್ತು. ಸದ್ಯ ಕಾಂಗ್ರೆಸ್ ದೋಸ್ತಿ ಮಾಡಿ ಸರ್ಕಾರ ಮಾಡಿದೆ. ನಾವು ಈ ಮೈತ್ರಿ ಸರ್ಕಾರ ಉರುಳಿಸುವ ಪ್ರಯತ್ನ ಮಾಡುತ್ತಿಲ್ಲ. ಆದರೆ ಅವರ ಒಳಜಗದಿಂದ ಸರ್ಕಾರ ಉರುಳಿದರೆ ನಾವು ಸರ್ಕಾರ ರಚನೆಗೆ ಸಿದ್ಧವಿದ್ದೇವೆ ಎಂದರು.

ಬಿಬಿಎಂಪಿಯಲ್ಲಿ ಬೆಂಬಲ ಚರ್ಚಿಸಿ ನಿರ್ಧಾರ: ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿಗೆ ಆರ್.ಪಿ.ಐ.ಬೆಂಬಲ ವಿಚಾರದ ಬಗ್ಗೆ ಪಕ್ಷದ ಸ್ಥಳೀಯ ನಾಯಕರ ಜೊತೆಗೆ ಚರ್ಚೆ ಮಾಡುತ್ತೇವೆ. ಬಿಜೆಪಿಗೆ ಬೆಂಬಲ‌ ನೀಡಬೇಕಾ? ಅಥವಾ ಬೇಡವಾ? ಅನ್ನುವುದರ ಬಗ್ಗೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.