ETV Bharat / state

ಸಂಪುಟ ವಿಸ್ತರಣೆಗೂ ಅಮಿತ್ ಶಾ ರಾಜ್ಯ ಭೇಟಿಗೂ ಸಂಬಂಧವಿಲ್ಲ: ಪ್ರಹ್ಲಾದ್ ಜೋಷಿ - central minister Prahlad Joshi lastest news

ರಾಜ್ಯಕ್ಕೆ ಅಮಿತ್ ಶಾ ಬರುವ ದಿನಾಂಕ ನಿಗದಿಯಾಗಿದೆ. ಎರಡು ದಿನಗಳ ರಾಜ್ಯ ಪ್ರವಾಸಕ್ಕಾಗಿ ಅವರು ಇದೇ ತಿಂಗಳು 16 ಮತ್ತು 17 ರಂದು ಆಗಮಿಸಲಿದ್ದಾರೆ. ಆದರೆ ಶಾ ಅವರ ರಾಜ್ಯ ಭೇಟಿಗೂ ಸಂಪುಟ ವಿಸ್ತರಣೆಗೆ ಯಾವುದೇ ಸಂಬಂಧವಿಲ್ಲ ಅಂತಿದ್ದಾರೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ.

ಪ್ರಹ್ಲಾದ್ ಜೋಷಿ
ಪ್ರಹ್ಲಾದ್ ಜೋಷಿ
author img

By

Published : Jan 8, 2021, 9:06 PM IST

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಗೂ, ಅಮಿತ್ ಶಾ ರಾಜ್ಯ ಭೇಟಿಗೂ ಯಾವುದೇ ಸಂಬಂಧವಿಲ್ಲ. ಸಿಎಂ ಯಡಿಯೂರಪ್ಪ ಹಾಗೂ ರಾಷ್ಟ್ರೀಯ ನಾಯಕರು ಚರ್ಚಿಸಿ, ಸೂಕ್ತ ಸಮಯದಲ್ಲಿ ಈ ಬಗ್ಗೆ ತೀರ್ಮಾನ ಮಾಡಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಪ್ರವಾಸದ ಹಿನ್ನೆಲೆ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ನಗರದ ಕುಮಾರಕೃಪಾ ಅತಿಥಿ ಗೃಹದಲ್ಲಿ ಸಭೆ ನಡೆಸಿದರು. ಈ ವೇಳೆ ಅಮಿತ್ ಶಾ ಕಾರ್ಯಕ್ರಮದ ಭದ್ರತೆ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಅಮಿತ್ ಶಾ ಬರುವ ದಿನಾಂಕ ನಿಗದಿಯಾಗಿದೆ. ಎರಡು ದಿನಗಳ ರಾಜ್ಯ ಪ್ರವಾಸಕ್ಕಾಗಿ ಇದೇ ತಿಂಗಳು 16 ಮತ್ತು 17 ರಂದು ಆಗಮಿಸಲಿದ್ದಾರೆ. ಮೊದಲು ಬೆಂಗಳೂರಿನಲ್ಲಿ ಗೃಹ ಇಲಾಖೆಯ ಕಾರ್ಯಕ್ರಮದಲ್ಲಿ ಅವರು ಭಾಗವಹಿಸುತ್ತಾರೆ. ನಂತರ ಭದ್ರಾವತಿಯಲ್ಲಿ ಸೆಂಟ್ರಲ್ ರಿಸರ್ವ್ ಫೋರ್ಸ್​ನ‌ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. 17 ರಂದು ಬೆಳಗಾವಿಯಲ್ಲಿ ಜನಸೇವಕ್ ಸಮಾವೇಶದಲ್ಲಿ ಭಾಗವಹಿಸಿ ದೆಹಲಿಗೆ ಮರಳಲಿದ್ದಾರೆ ಎಂದರು.

ಇದನ್ನೂ ಓದಿ: ಸಿದ್ದರಾಮಯ್ಯ ಅವರು ನೀಡಿದ ಯೋಜನೆಗಳೇ ಚುನಾವಣೆ ಗೆಲ್ಲೋಕೆ ಸಾಕಿತ್ತು.. ಸಂಕಟ ತೋಡಿಕೊಂಡ ಕೈ ಮುಖಂಡರು

ಜನವರಿ 17 ರಂದು ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯ ಪ್ರಮುಖರ ಸಭೆ ರದ್ದುಗೊಳಿಸಲಾಗಿದೆ. ಅಮಿತ್ ಶಾ ಸಮಯಾವಕಾಶ ಸಿಗದ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದಕ್ಕೂ ಮುನ್ನ ಜನಸೇವಕ್ ಸಮಾರೋಪ ಸಮಾರಂಭವನ್ನು ಬೆಂಗಳೂರಿನಲ್ಲಿ ಆಯೋಜಿಸಲು ಪ್ಲಾನ್ ಮಾಡಲಾಗಿತ್ತು.

ವಂಚಕ‌ ಯುವರಾಜ್​ಗೂ ಕೆಲ ರಾಜಕಾರಣಿಗಳಿಗೂ ಲಿಂಕ್ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವರು, ವಂಚನೆ ಪ್ರಕರಣದಲ್ಲಿ ಆತನ ಬಂಧನವಾಗಿದೆ. ಆತನಿಗೂ ಕೆಲ ರಾಜಕಾರಣಿಗಳಿಗೂ ಸಂಬಂಧ ಇದ್ದರೆ ತನಿಖೆ ಆಗಲಿ. ತನಿಖೆಯಲ್ಲಿ ಯಾರೆಲ್ಲ ಸಂಪರ್ಕದಲ್ಲಿದ್ದರು, ಯಾರೆಲ್ಲ ಸಂಬಂಧ ಇಟ್ಕೊಂಡಿದ್ದರು ಅಂತ ಬಹಿರಂಗ ಆಗುತ್ತದೆ. ವಂಚಕನ ಜೊತೆ ರಾಜಕಾರಣಿಗಳ ಸಂಪರ್ಕ ಸಾಬೀತಾದರೆ ಅವರೂ ಶಿಕ್ಷೆ ಅನುಭವಿಸುತ್ತಾರೆ. ರಾಜಕಾರಣದಲ್ಲಿರೋರು, ಸಾರ್ವಜನಿಕ ಜೀವನದಲ್ಲಿರೋರು ಶುದ್ಧವಾಗಿರಬೇಕು ಅನ್ನೋದು ನನ್ನ ವೈಯುಕ್ತಿಕ ಹಾಗೂ ಪಕ್ಷದ ಅಭಿಪ್ರಾಯ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.