ಬೆಂಗಳೂರು: ಗರುಡಾಚಾರ್ ಪಾಳ್ಯದಲ್ಲಿ ಸಚಿವ ಎಂಟಿಬಿ ಒಡೆತನದ ಕಟ್ಟಡದಲ್ಲಿರುವ ಸಾಯಿ ಪೇಯಿಂಗ್ ಗೆಸ್ಟ್ (ಪಿ.ಜಿ) ಹೇಳೋರಿಲ್ಲ, ಕೇಳೋರಿಲ್ಲ ಎನ್ನುವ ಪರಿಸ್ಥಿತಿ ಉಂಟಾಗಿದೆ. ರಾತ್ರೋರಾತ್ರಿ ಈ ಕಟ್ಟಡದೊಳಗೆ ನುಗ್ಗಿದ ಕಳ್ಳನೊಬ್ಬ ಮೊಬೈಲ್ ಕದ್ದು ಪರಾರಿಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನಗರದಲ್ಲಿ ದಿನೇ ದಿನೆ ಕಳ್ಳರ ಹಾವಳಿ ಹೆಚ್ಚಾಗುತ್ತಿದೆ. ಮೊಬೈಲ್, ಲ್ಯಾಪ್ ಟಾಪ್ಗಳಿಗೆ ಕಣ್ಣು ಹಾಕುವ ಕಳ್ಳರು ಪಿಜಿಗಳನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ.
ಕಳೆದ ತಿಂಗಳ 25 ರಂದು ಮಧ್ಯರಾತ್ರಿ 3 ಗಂಟೆಗೆ ನಡೆದ ಘಟನೆ ಸಂಬಂಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.