ETV Bharat / state

ರಾಜಧಾನಿಯಲ್ಲಿನ ಡಕಾಯಿತಿ, ಕಳ್ಳತನ ಪ್ರಕರಣಗಳಿಗೆ ಮಾಲೀಕರ ನಿರ್ಲಕ್ಷ್ಯವೇ ಕಾರಣ.. ಅದ್ಹೇಗೆ ಅಂತೀರಾ..

ಹೊರ ರಾಜ್ಯಗಳಿಂದ ಉದ್ಯೋಗ ಅರಸಿ ಬೆಂಗಳೂರಿಗೆ ಅನೇಕ ಮಂದಿ ಬರುತ್ತಾರೆ. ಇಲ್ಲಿ ಮನೆಗೆಲಸ,ಸೆಕ್ಯೂರಿಟಿ ಆಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಆದರೆ ಮನೆ ಅಥವಾ ಕಚೇರಿಯ ಮಾಲೀಕರು ಯಾವುದೇ ಪೂರ್ವಪರ ವಿಚಾರಿಸದೆ ಕೆಲಸ ನೀಡುತ್ತಿದ್ದಾರೆ. ಮಾಲೀಕರು ನಿರ್ಲಕ್ಷ್ಯದಿಂದ ಸಿಲಿಕಾನ್​ ಸಿಟಿಯಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ..

Theft cases increasing in Bangalore due to owner negligence
ರಾಜಧಾನಿಯಲ್ಲಿ ನಡೆಯುವ ಡಕಾಯಿತಿ, ಕಳ್ಳತನ ಪ್ರಕರಣಗಳಿಗೆ ಮಾಲೀಕರ ನಿರ್ಲಕ್ಷ್ಯವೇ ಕಾರಣ
author img

By

Published : Feb 27, 2022, 4:02 PM IST

ಬೆಂಗಳೂರು :‌ ಹೊರ ರಾಜ್ಯಗಳಿಂದ ಕೆಲಸ ಅರಸಿ ನಗರಕ್ಕೆ ಬರುವ ಅದೆಷ್ಟು ಜನರು ಸೆಕ್ಯೂರಿಟಿ, ಹೌಸ್ ಕೀಪಿಂಗ್ ಸೇರಿ ವಿವಿಧ ಕೆಲಸ ಮಾಡುತ್ತಿದ್ದಾರೆ. ಮನೆ-ಕಚೇರಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಪೂರ್ವಾಪರ ತಿಳಿದುಕೊಳ್ಳದೆ ಮಾಲೀಕರು ಕೆಲಸ ನೀಡುತ್ತಾರೆ.

ಆದರೆ, ಹೊರ ರಾಜ್ಯದವರ ಬಗ್ಗೆ ಪೂರ್ವಾಪರ ವಿಚಾರಿಸಿ ಚಾರಿತ್ರ್ಯ ಸರ್ಟಿಫಿಕೇಟ್ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದಿದ್ದರೆ ಮಾತ್ರ ಹೊರಗಿನವರಿಗೆ ಕೆಲಸ‌ ಕೊಡಬೇಕೆಂದು ನಿಯಮವಿದೆ. ಬಹುತೇಕ ಮಾಲೀಕರು ಕಾನೂನನ್ನು ಗಾಳಿಗೆ ತೂರುತ್ತಿದ್ದಾರೆ‌.‌‌ ಪರಿಣಾಮ ನಗರದಲ್ಲಿ ಡಕಾಯಿತಿ,ಕಳ್ಳತನ ಪ್ರಕರಣ ಹೆಚ್ಚಾಗುತ್ತಿವೆ.

ಮಾಲೀಕರ ನಿರ್ಲಕ್ಷ್ಯತೆಯನ್ನು ದುರುಪಯೋಗಪಡಿಸಿಕೊಳ್ಳುವ ವಲಸೆ ಕಾರ್ಮಿಕರು ಆರಂಭದಲ್ಲಿ ಮಾಲೀಕರಲ್ಲಿ ವಿಶ್ವಾಸ ಮೂಡಿಸಿ ತದನಂತರ ಸಮಯ ನೋಡಿ ಕಳ್ಳತನ, ಡಕಾಯಿತಿ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದಾರೆ.

ಇತ್ತೀಚೆಗೆ ಬಸವೇಶ್ವರನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗೃಹಲಕ್ಷ್ಮಿಲೇಔಟ್​​ನ ಅಪಾರ್ಟ್​​​​ಮೆಂಟ್​​​ವೊಂದರಲ್ಲಿ ಮನೆ ಕೆಲಸ ಮಾಡುತ್ತಿದ್ದ ಅನು ಹಾಗೂ ಆಕೆಯ ನೇಪಾಳಿ ಗ್ಯಾಂಗ್ 88 ಲಕ್ಷದ ಮೌಲ್ಯದ ನಗದು, ನಾಣ್ಯ ದೋಚಿ ಪರಾರಿಯಾಗಿರುವುದು ತಾಜಾ ಉದಾಹರಣೆ. ಪೊಲೀಸ್ ತನಿಖೆಯಲ್ಲಿ ಕೆಲಸದವಳ ಪೂರ್ವಾಪರ ಅರಿಯದೆ ಮನೆ ಮಾಲೀಕರು ನಿರ್ಲಕ್ಷ್ಯ ತೋರಿರುವುದು ಕಂಡು ಬಂದಿದೆ.

ನೇಪಾಳ ಹಾಗೂ ದೇಶದ ವಿವಿಧ ರಾಜ್ಯಗಳಿಂದ ಸಾವಿರಾರು ವಲಸೆ ಕಾರ್ಮಿಕರು‌ ನಗರದಲ್ಲಿ ಕೆಲಸ ಮಾಡುತ್ತಿದ್ದಾರೆ.‌‌ ಈ ಪೈಕಿ ಹೌಸ್ ಕೀಪಿಂಗ್,ಸೆಕ್ಯೂರಿಟಿ ಕೆಲಸಗಳಲ್ಲಿ ಹೆಚ್ಚಿನ ಕಾರ್ಮಿಕರು ತೊಡಗಿಸಿಕೊಂಡಿದ್ದಾರೆ. ಕಡಿಮೆ ಸಂಬಳಕ್ಕಾಗಿ ಕಾರ್ಮಿಕರು ಕೆಲಸಕ್ಕೆ ಬರುತ್ತಾರೆ.

ಕೆಲಸದವರ ಪೂರ್ವಾಪರ ತಿಳಿದುಕೊಳ್ಳದೆ ಸ್ಥಳೀಯ ಪೊಲೀಸರಿಗೂ ಮಾಹಿತಿ ನೀಡದೆ ಕೆಲಸಕ್ಕೆ ಸೇರಿಸಿಕೊಂಡು ಭವಿಷ್ಯದಲ್ಲಾಗುವ ಅಪಾಯಕ್ಕೆ ತಾವೇ ಆಹ್ವಾನಿಕೊಳ್ಳುತ್ತಿದ್ದಾರೆ. ತಮ್ಮ ಕೆಲಸಕ್ಕಾಗಿ ಸ್ಥಳೀಯರನ್ನು ಇಟ್ಟುಕೊಂಡರೆ ಅವರಿಗೆ ವೇತನ ಹೆಚ್ಚಳ ಸೇರಿದಂತೆ ಹಲವು ರೀತಿಯ ಡಿಮ್ಯಾಂಡ್ ಮಾಡುತ್ತಾರೆ ಎಂಬ ಮನೋಭಾವ ಬಹುತೇಕ ಮಾಲೀಕರಲ್ಲಿದೆ.

ಹೀಗಾಗಿ, ಹೊರ ರಾಜ್ಯದವರಿಗೆ ಕೆಲಸಕ್ಕೆ‌ ನೇಮಕಾತಿ ಮಾಡಿಕೊಂಡರೆ ಕಡಿಮೆ ಸಂಬಳಕ್ಕೂ ಬರುತ್ತಾರೆ. ಹೀಗಾಗಿಯೇ, ಹಲವು ಮಾಲೀಕರು ಊರು, ವಿಳಾಸ ತಿಳಿಯದೆ ಕೆಲಸ ಕೊಡುತ್ತಿದ್ದಾರೆ. ಇದನ್ನೇ ಬಳಕೆ ಮಾಡಿಕೊಳ್ಳುವ ಕೆಲವರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ.

642 ಅರ್ಜಿಗಳ ಪೈಕಿ 18‌ ರಿಜೆಕ್ಟ್​​ : ತಿಳುವಳಿಕೆ ಇರುವ ಕೆಲವರು ಪೊಲೀಸ್ ವೈರಿಫೀಕೇಷನ್ ಮಾಡಿಸಿಕೊಳ್ಳದೆ ಕೆಲಸಕ್ಕೆ‌ ಸೇರಿಸಿಕೊಳ್ಳದಿರುವುದು ನೋಡಬಹುದಾಗಿದೆ. ಹೌಸ್ ಕೀಪಿಂಗ್, ಸೆಕ್ಯೂರಿಟಿ ಗಾರ್ಡ್, ಬಾಡಿಗೆದಾರರು ಸೇರಿದಂತೆ ವಿವಿಧ ವೃತ್ತಿಗಳಿಗಾಗಿ ಕಾರ್ಮಿಕರು ನಗರ ಪೊಲೀಸ್ ಇಲಾಖೆಗೆ 2021ರಲ್ಲಿ ಸಲ್ಲಿಸಿದ್ದ 642 ಅರ್ಜಿಗಳ ಪೈಕಿ 614 ಅರ್ಜಿಗಳು ವೈರಿಫೀಕೇಷನ್ ಸರ್ಟಿಫಿಕೇಟ್ ಪಡೆದುಕೊಂಡರೆ ದಾಖಲಾತಿ ಸರಿಯಾದ ಸಲ್ಲಿಕೆಯಾಗದ ಕಾರಣ 28 ಅರ್ಜಿಗಳು ತಿರಸ್ಕೃತಗೊಂಡಿವೆ.

ಡಕಾಯಿತಿ ಪ್ರಕರಣ ಬೇಧಿಸುವಲ್ಲಿ ಖಾಕಿ ಸದಾ ಮುಂದು : ರಾಜಧಾನಿಯಲ್ಲಿ ಕಳೆದೆರಡು ವರ್ಷಗಳಲ್ಲಿ ನಡೆದಿದ್ದ ಡಕಾಯಿತಿ ಪ್ರಕರಣಗಳಲ್ಲಿ ಶೇ.97ರಷ್ಟು ಕೇಸ್​ಗಳನ್ನು ಪೊಲೀಸರು ಬೇಧಿಸಿದ್ದಾರೆ. 2020ರಲ್ಲಿ ವರದಿಯಾಗಿದ್ದ 30 ಕೇಸ್​​​ಗಳ ಪೈಕಿ,29 ಕೇಸ್​​​ಗಳನ್ನು ಪತ್ತೆ ಹಚ್ಚಿದರೆ, 2021ರಲ್ಲಿ ದಾಖಲಾದ 35 ಕೇಸ್​​​ಗಳಲ್ಲಿ 34 ಪ್ರಕರಣಗಳನ್ನು ಬೇಧಿಸಿದ್ದಾರೆ‌. ಅದೇ ರೀತಿ 2,176 ಸರ್ವೆಂಟ್ಸ್ ಥೆಪ್ಟ್ ಪ್ರಕರಣಗಳ ಪೈಕಿ 95ರಷ್ಟು ಕೇಸ್​​​​ಗಳನ್ನು ಪತ್ತೆ ಹಚ್ಚಿದ್ದಾರೆ.

ಪಕ್ಕಾ ಪ್ಲ್ಯಾನ್ ಮಾಡಿಕೊಂಡು ಪೂರ್ವಸಂಚು ರೂಪಿಸಿ ಡಕಾಯಿತಿ ಮಾಡುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತ್ವರಿತಗತಿಯಲ್ಲಿ ಕೇಸ್‌ಗಳನ್ನು ಪತ್ತೆ ಹಚ್ಚುತ್ತೇವೆ. ಯಾಕೆಂದರೆ, ಆರೋಪಿಗಳ ಕೈಯಲ್ಲಿ ಹರಿತವಾದ ಆಯುಧಗಳಿರಲಿದ್ದು, ಇಂತಹ ಪ್ರಕರಣಗಳಲ್ಲಿ ಸಾರ್ವಜನಿಕರಿಗೆ ಅಪಾಯ ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ, ನಿರಂತರವಾಗಿ ಕೇಸ್​​ಗಳ ಹಿಂದೆ ಬಿದ್ದು ಡಕಾಯಿತರ ಜಾಡು ಅರಿತು ಬಂಧಿಸುತ್ತೇವೆ ಎಂದು ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ತಿಳಿಸುತ್ತಾರೆ.

ಇದನ್ನೂ ಓದಿ: ಬಿಎಸ್​ವೈ ಮಾರ್ಗದರ್ಶನದಲ್ಲಿ ಮುಂದುವರಿಯುತ್ತೇವೆ: ಸಿಎಂ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.