ಬೆಂಗಳೂರು : ಕುಡಿದ ಮತ್ತಿನಲ್ಲಿ ನಡು ರಸ್ತೆಯಲ್ಲೇ ಮಹಿಳೆ ರಂಪಾಟ ಮಾಡಿರುವ ಘಟನೆ ಕಬ್ಬನ್ಪಾರ್ಕ್ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮದ್ಯ ಸೇವಿಸಿ ಬೈಕ್ ಚಲಾಯಿಸುತ್ತಿದ್ದ ಮಹಿಳೆಯನ್ನು ತಡೆದು ಪೊಲೀಸರು ಪ್ರಶ್ನಿಸಿದ್ದಾರೆ.
ಈ ವೇಳೆ ಮಹಿಳೆ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದ್ದು, ಸುಮಾರು 3 ಗಂಟೆಗಳ ಕಾಲ ನಡುರಸ್ತೆಯಲ್ಲೇ ರಂಪಾಟ ಮಾಡಿದ್ದಾಳೆ. ಸ್ಥಳಕ್ಕೆ ಎಸ್ಪಿ ಬರಬೇಕೆಂದು ಹಠ ಹಿಡಿದಿದ್ದು, ಬುದ್ಧಿ ಹೇಳಲು ಬಂದ ಪೊಲೀಸರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾಳೆ. ಹಾಗಾಗಿ, ಪೊಲೀಸರು, ಬೈಕ್ ಜಪ್ತಿ ಮಾಡಿ ಮಹಿಳೆಯನ್ನು ಆಟೋದಲ್ಲಿ ಕಳಿಸಿಕೊಟ್ಟಿದ್ದಾರೆ.