ETV Bharat / technology

ಕಂಪ್ಯೂಟರ್​​ಗಳಲ್ಲಿ ನಿಮ್ಮ ಕೆಲಸ ಮತ್ತಷ್ಟು ಸಲೀಸು: ಮೈಕ್ರೋಸಾಫ್ಟ್​​​ನಿಂದ 'AI ಏಜೆಂಟ್​' ನಿಯೋಜನೆ! - ARTIFICIAL INTELLIGENCE

ಐಟಿ ದೈತ್ಯ ಮೈಕ್ರೋಸಾಫ್ಟ್​​ ತನ್ನ AI ತಂತ್ರಾಂಶವನ್ನು ಮತ್ತಷ್ಟು ಸರಳೀಕರಿಸಲು ಏಜೆಂಟ್​ ನೀಡಲು ಮುಂದಾಗಿದೆ. ಏನಿದು AI ಏಜೆಂಟ್​​?, ಇದರಿಂದ ಏನು ಉಪಯೋಗ ಎಂಬುದು ಇಲ್ಲಿದೆ.

ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ
ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ (AP Photo)
author img

By ETV Bharat Karnataka Team

Published : Nov 20, 2024, 5:46 PM IST

ಚಿಕಾಗೋ: ಕೃತಕ ಬುದ್ಧಿಮತ್ತೆಯು (AI) ಇಂದು ಅತಿ ಮುಖ್ಯ ತಂತ್ರಜ್ಞಾನವಾಗಿದೆ. ನಮ್ಮ ಸಾಧನಗಳಲ್ಲಿ ಇದನ್ನು ಪ್ರಮುಖವಾಗಿ ಬಳಸುತ್ತೇವೆ. ಈ ತಂತ್ರಾಂಶವನ್ನು ಬಳಸಲು ಒಬ್ಬ ಏಜೆಂಟ್​​ ನೀಡಿದರೆ ಹೇಗಿರುತ್ತದೆ.?

ಹೌದು, ಐಟಿ ದೈತ್ಯ ಮೈಕ್ರೋಸಾಫ್ಟ್​​ AI ಏಜೆಂಟ್​​ ನೀಡಲು ಮುಂದಾಗಿದೆ. ಈ ಏಜೆಂಟ್​​ ಮೂಲಕ ಬಳಕೆದಾರರು ಸುಲಭವಾಗಿ ಮಾಹಿತಿಯನ್ನು ಪಡೆದುಕೊಳ್ಳಲು ಸಾಧ್ಯ. ಈ ಏಜೆಂಟ್​​ ಯಾವಾಗ ಬಳಕೆದಾರರಿಗೆ ಲಭ್ಯವಾಗುತ್ತದೆ ಎಂಬ ಬಗ್ಗೆ ಮೈಕ್ರೋಸಾಫ್ಟ್​ ಮಾಹಿತಿ ನೀಡಿಲ್ಲ.

ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಅವರು ಮಂಗಳವಾರ ಚಿಕಾಗೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಹಕರಿಗೆ ಇನ್ನಷ್ಟು ಅತ್ಯುತ್ತಮ ಸೇವೆ ನೀಡಲು ಸಂಸ್ಥೆಯು ಹೊಸ ವಿಧಾನ ಪರಿಚಯಿಸಲಿದೆ. ನಮ್ಮ ಕೆಲಸ ಮತ್ತು ಜೀವನದಲ್ಲಿ AI ಹೇಗೆ ವರ್ತಿಸಬೇಕು ಎಂಬುದನ್ನು ಈ ಸಾಧನ ಸೂಚಿಸುತ್ತದೆ ಎಂದು ಹೇಳಿದ್ದಾರೆ.

ಈಗಾಗಲೆ ಹಲವು AI ಡೆವಲಪರ್‌ಗಳು ಜನರ ಪರವಾಗಿ ಹೆಚ್ಚು ಉಪಯುಕ್ತವಾದ ಕೆಲಸಗಳನ್ನು ಮಾಡಬಹುದಾದ AI ಏಜೆಂಟ್‌ಗಳನ್ನು ಪರಿಚಯಿಸುತ್ತಿವೆ. ಜನರೇಟಿವ್ AI ಚಾಟ್‌ಬಾಟ್‌ಗಳ ಮುಂದಿನ ಹಂತವನ್ನು ನೀಡುತ್ತಿವೆ. ಮೈಕ್ರೋಸಾಫ್ಟ್​​ ಕೂಡ ಈ ಏಜೆಂಟ್​​ ಅನ್ನು ನೀಡಲಿದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಮೈಕ್ರೋಸಾಫ್ಟ್ ಸಂಸ್ಥೆಯು ಕಳೆದ ತಿಂಗಳು ಎಐ ಏಜೆಂಟ್​ ನೀಡುವ ಬಗ್ಗೆ ಘೋಷಿಸಿತ್ತು. ಪ್ರತಿ ಐಟಿ ಸಂಸ್ಥೆಗಳು ಏಜೆಂಟ್‌ಗಳನ್ನು ಹೊಂದುತ್ತಿವೆ. ಸರಳವಾದ ಪ್ರಾಂಪ್ಟ್ ಮತ್ತು ಪ್ರತಿಕ್ರಿಯೆಯಿಂದ ಸಂಪೂರ್ಣ ಸ್ವಾಯತ್ತತೆ ನೀಡಲು ನಮ್ಮ ಸಂಸ್ಥೆಯು ತಯಾರಿ ನಡೆಸುತ್ತಿದೆ ಎಂದು ಹೇಳಿತ್ತು.

ಏನಿದು ಎಐ ಏಜೆಂಟ್​?: ಎಐ ಏಜೆಂಟ್ ಎಂಬುದು ಆಪರೇಟರ್​​ ಆಗಿದ್ದು, ಅದು ಕಂಪ್ಯೂಟರ್​ನಲ್ಲಿ ಕಾರ್ಯ ನಿರ್ವಹಿಸಲಿದೆ. ಅದರ ಆಪರೇಟ್​​ ಗೊತ್ತಿರುವ ಬಳಕೆದಾರರು, ಅದಕ್ಕೆ ಸೂಚನೆ ನೀಡಿದಲ್ಲಿ ಅದು ತನ್ನಿಂದ ತಾನೇ ಕಾರ್ಯ ನಿರ್ವಹಿಸುತ್ತದೆ. ಇದೊಂದು ರೀತಿಯಲ್ಲಿ ಚಿಕ್ಕದಾದ AI ಎಂದು ಹೇಳಬಹುದು.

ಈ ಎಐ ಏಜೆಂಟ್ ಕೇವಲ ಬ್ರೌಸರ್​ ನಿಯಂತ್ರಿಸುವುದಲ್ಲದೇ, ನಿಮ್ಮ ಕಂಪ್ಯೂಟರ್​ ಅನ್ನು ಕೂಡ ಕಂಟ್ರೋಲ್​​ನಲ್ಲಿ ಇಟ್ಟುಕೊಳ್ಳಲಿದೆ. ನಿಮ್ಮ ಕಂಪ್ಯೂಟರ್​ನಲ್ಲಿ ನಿಮಗಾಗಿ ಆಪರೇಟ್​ ಮಾಬಹುದಾದ ಪೋಗ್ರಾಂ (ಏಜೆಂಟ್​) ಅನ್ನು ಮೈಕ್ರೋಸಾಫ್ಟ್​ ಅಭಿವೃದ್ಧಿಪಡಿಸುತ್ತಿದೆ.

ಇದು ಅಸ್ತಿತ್ವಕ್ಕೆ ಬಂದ ಬಳಿಕ ಕಂಪ್ಯೂಟರ್​ನಲ್ಲಿ ಎಲ್ಲಾ ಕೆಲಸದ ಅಪ್ಲಿಕೇಶನ್​ಗಳನ್ನ ತೆರೆಯುವುದು, ಅವುಗಳನ್ನು ಸ್ಕ್ರೀನ್​ ಮೇಲೆ ತೋರಿಸಿ ಕಂಪ್ಯೂಟರ್​ ಮತ್ತು ನಿಮ್ಮೊಂದಿಗೆ ಆ ಏಜೆಂಟ್​ ಸಂವಹನ ನಡೆಸುತ್ತದೆ. ನೀವು ನೀಡಿದ ಟಾಸ್ಕ್​ ಆಧಾರದ ಮೇಲೆ ನಿಮ್ಮೆಲ್ಲ ಕೆಲಸವನ್ನು ಕಂಪ್ಯೂಟರ್​ನಲ್ಲಿ AI ಏಜೆಂಟ್​ ಮಾಡುತ್ತದೆ.

ಆದರೆ, AI ಏಜೆಂಟ್​ ನಿರ್ಮಿಸುವ ಮತ್ತು ಅದನ್ನು ಜಾರಿಗೆ ತರುವ ಪ್ರಕ್ರಿಯೆ ವೆಚ್ಚದಾಯಕ ಎಂಬುದು ಹೂಡಿಕೆದಾರರ ಅಭಿಪ್ರಾಯ. ಇದು ತಂತ್ರಜ್ಞಾನದ ವಿಪರೀತ ಹೆಜ್ಜೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕ್ರೋಮ್​ಒಎಸ್​ ಅನ್ನು ಆಂಡ್ರಾಯ್ಡ್​ ಆಗಿ ಬದಲಾಯಿಸುತ್ತಿರುವ ಗೂಗಲ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.