ETV Bharat / state

ಎನ್​ಕೌಂಟರ್ ನಡೆದ ಸ್ಥಳಕ್ಕೆ ಶೀಘ್ರ ಭೇಟಿ ನೀಡಲಾಗುತ್ತದೆ; ಕೆ. ಪಿ. ಶ್ರೀಪಾಲ್

ನಕ್ಸಲ್ ಚಳವಳಿಯಲ್ಲಿ ಇರುವವರು ತಮ್ಮ ಈ ರಕ್ತಪಾತದ ಮಾರ್ಗದಿಂದ ಹೊರಬಂದು ಜಾಪ್ರಭುತ್ವದಡಿ ಚಳವಳಿ ನಡೆಸುವಂತೆ ನಕ್ಸಲ್ ಪುನರ್ ವಸತಿ ಹಾಗೂ ಶರಣಾಗತ ಸಮಿತಿ ಸದಸ್ಯ ಕೆ.ಪಿ. ಶ್ರೀಪಾಲ್ ಮನವಿ ಮಾಡಿದರು.

A quick visit to the place where the encounter took place; KP Shripal
ನಕ್ಸಲ್ ಪುನರ್ ವಸತಿ ಹಾಗೂ ಶರಣಾಗತ ಸಮಿತಿ ಸದಸ್ಯ ಕೆ.ಪಿ.ಶ್ರೀಪಾಲ್ (ETV Bharat)
author img

By ETV Bharat Karnataka Team

Published : 2 hours ago

ಶಿವಮೊಗ್ಗ: ನಕ್ಸಲ್ ವಿಕ್ರಂ ಗೌಡ ಅವರನ್ನು ಎನ್​ಕೌಂಟರ್ ಮಾಡಿದ ಸ್ಥಳಕ್ಕೆ ಶೀಘ್ರವಾಗಿ ಭೇಟಿ ನೀಡಿ, ಪರಿಶೀಲನೆ ನಡೆಸಲಾಗುತ್ತದೆ ಎಂದು ನಕ್ಸಲ್ ಪುನರ್ ವಸತಿ ಹಾಗೂ ಶರಣಾಗತ ಸಮಿತಿ ಸದಸ್ಯ ಕೆ. ಪಿ. ಶ್ರೀಪಾಲ್ ತಿಳಿಸಿದರು.

ನಗರದಲ್ಲಿ ಇಂದು ಈಟಿವಿ ಭಾರತ ಕನ್ನಡ ಪ್ರತಿನಿಧಿ ಕಿರಣ್ಅವರೊಂದಿಗೆ ಮಾತನಾಡಿದ ಅವರು, ''ವಿಕ್ರಂ ಗೌಡ ಅವರ ಹತ್ಯೆ ವಿಷಾದನೀಯ. ನಕ್ಸಲ್‌ ಪುನರ್ ವಸತಿ ಹಾಗೂ ಶರಣಾಗತ ಸಮಿತಿಯು ನಕ್ಸಲ್ ಚಟುವಟಿಕೆಯಲ್ಲಿ ಇರುವವರನ್ನು ಮುಖ್ಯ ವಾಹಿನಿಗೆ ಕರೆತರುವ ಪ್ರಯತ್ನ ಮಾಡುತ್ತದೆ. 2017 ರಿಂದ 2004ರ ವರೆಗೆ ಸುಮಾರು 13 ಜನ ನಕ್ಸಲರು ಸಮಾಜದ ಮುಖ್ಯ ವಾಹಿನಿಗೆ ಬಂದಿದ್ದಾರೆ. ಇನ್ನಷ್ಟು ನಕ್ಸಲ್ ಚಟುವಟಿಕೆಯಲ್ಲಿ ಇರುವವರನ್ನು ಸಹ ಮುಖ್ಯ ವಾಹಿನಿಗೆ ತರಬೇಕು. ಹಿಂಸೆ, ಪ್ರತಿ ಹಿಂಸೆ ರಕ್ತಪಾತಗಳಾಗಬಾರದು ಎಂಬ ಉದ್ದೇಶ ನಮ್ಮದಾಗಿದೆ'' ಎಂದರು.

ನಕ್ಸಲ್ ಪುನರ್ ವಸತಿ ಹಾಗೂ ಶರಣಾಗತ ಸಮಿತಿ ಸದಸ್ಯ ಕೆ.ಪಿ.ಶ್ರೀಪಾಲ್ (ETV Bharat)

ಆದರೆ, ಈ ರ್ದುಘಟನೆ ಆಗಬಾರದಿತ್ತು. ಎನ್​ಕೌಂಟರ್ ಏಕೆ ಆಯಿತು, ವಾಸ್ತವವಾಗಿ ಅಲ್ಲಿ ಏನು ನಡೆದಿದೆ ಎಂಬುದರ ಕುರಿತು ಇನ್ನೂ ನಮಗೆ ಮಾಹಿತಿ ಇಲ್ಲ. ಹಾಗಾಗಿ ನಾನು ಹಾಗೂ ಸಮಿತಿಯ ಸದಸ್ಯರಾದ ಪರ್ವತೀಶ್ ಹಾಗೂ ಡಾ. ಬಂಜಗೆರೆ ಜಯಪ್ರಕಾಶ್ ಅವರು ಎನ್​ಕೌಂಟರ್ ಸ್ಥಳಕ್ಕೆ ಭೇಟಿ ನೀಡಿ, ವಾಸ್ತಾವ ಅಂಶ ತಿಳಿಯುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

ನಕ್ಸಲ್ ಚಳವಳಿಯಲ್ಲಿ ಇರುವವರಿಗೆ ಸಮಿತಿಯು ಮತ್ತೊಮ್ಮೆ ಮನವಿ ಮಾಡುತ್ತದೆ. ದಯಮಾಡಿ, ತಾವು ಸಹ ತಮ್ಮ ಚಳವಳಿಯನ್ನು ಪ್ರಜಾಪ್ರಭುತ್ವದಡಿ ಬಂದು ನಡೆಸಬೇಕು. ತಾವು ಸಮಾಜದ ನಡುವೆ, ಜನರ ನಡುವೆ ಇದ್ದುಕೊಂಡು ಹೊಸ ಸಮಾಜ ಕಟ್ಟುವ ಪ್ರಯತ್ನ ನಡೆಸಬೇಕು. ತಾವು ಹಿಡಿದಿರುವ ದಾರಿ ಹಾಗೂ ಬಂದೂಕಿನ ಚಳವಳಿ ಎಂಬ ಅಪವಾದ ಇದೆ. ಇದನ್ನು ಬಿಟ್ಟು ಮುಖ್ಯವಾಹಿನಿಗೆ ಬರಬೇಕೆಂದು ಒತ್ತಾಯಿಸುತ್ತೇವೆ. ಮುಖ್ಯವಾಹಿನಿಗೆ ಬರಬೇಕೆಂದು ಬಯಸಿದರು ನಮ್ಮ ಸಮಿತಿಯನ್ನು ಅಥವಾ ಜಿಲ್ಲಾ ಮಟ್ಟದ ಸಮಿತಿಯವರಾದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ. ನಾವು ಅವರಿಗೆ ಯಾವುದೇ ಸಮಸ್ಯೆ ಆಗದಂತೆ ಮುಖ್ಯವಾಹಿನಿಗೆ ಕರೆತರುವ ಪ್ರಯತ್ನ ಮಾಡುತ್ತೇವೆ. ಅಲ್ಲದೆ ಶರಣಾಗತ ಆಗುವವರ ಜೀವಕ್ಕೆ ಹಾನಿಯಾಗದಂತೆ ಕ್ರಮ ಜರುಗಿಸುತ್ತೇವೆ. ನಕ್ಸಲರ ಹಾಗೂ ಪೊಲೀಸರ ಜೀವ ಪವಿತ್ರವಾದುದ್ದು. ಇಂದು ಮಾನವೀಯ ಮೌಲ್ಯವನ್ನು ಎತ್ತಿ ಹಿಡಿಯಬೇಕಾದ ನಾವು ಹಿಂಸಾಚಾರಕ್ಕೆ ಒತ್ತು ನೀಡದೇ ಶರಣಾಗತಿ ಆಗಬೇಕೆಂದು ಶ್ರೀಪಾಲ್ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ನಕ್ಸಲ್ ಚಟುವಟಿಕೆ ನಿಗ್ರಹಿಸಲು ವಿಕ್ರಂ ಗೌಡನ ಎನ್​ಕೌಂಟರ್; ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.