ETV Bharat / lifestyle

ಐದೇ ನಿಮಿಷದಲ್ಲಿ ಮಾಡಿ ಈ ರೆಸಿಪಿ: ಊಟ ಮತ್ತು ಉಪಹಾರದಲ್ಲೂ ಈ ಚಟ್ನಿ ಸೂಪರ್! - TOMATO CHUTNEY RECIPE IN KANNADA

Tomato Chutney Recipe: ತುಂಬಾ ರುಚಿಕರವಾದ ಟೊಮೆಟೊ ಚಟ್ನಿಯನ್ನು ಕೇವಲ ಐದೇ ನಿಮಿಷದಲ್ಲಿ ರೆಡಿ ಮಾಡಬಹುದಾಗಿದೆ. ಆದ್ರೆ, ಈ ಚಟ್ನಿಯನ್ನು 20 ದಿನಗಳವರೆಗೆ ಸಂಗ್ರಹಿಸಿ ಇಡಬಹುದು. ಟೊಮೆಟೊ ಚಟ್ನಿ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ.

TOMATO Chutney Recipe  SIMPLE TASTY TOMATO Chutney  TOMATO Chutney IN KANNADA  MAKING OF TOMATO Chutney
ಟೊಮೆಟೊ ಚಟ್ನಿ (ETV Bharat)
author img

By ETV Bharat Lifestyle Team

Published : Nov 20, 2024, 5:47 PM IST

Tomato Chutney Recipe in Kannada: ಚಟ್ನಿ ಎಂದ ತಕ್ಷಣವೇ ನಮಗೆ ನೆನಪು ಆಗುವುದು ಟೊಮೆಟೊದಿಂದ ಸಿದ್ಧಪಡಿಸಿದ ಚಟ್ನಿ. ಹಲವರು ಟೊಮೆಟೊದಿಂದಲೇ ವಿವಿಧ ರೀತಿಯ ಚಟ್ನಿಗಳನ್ನು ಸಿದ್ಧಪಡಿಸುತ್ತಾರೆ. ಟೊಮೆಟೊ ಕುದಿಸದೆ ಚಟ್ನಿ ತಯಾರಿಸಬಹುದು. ಇದರ ರುಚಿ ಮಾತ್ರ ಅದ್ಭುತ ಆಗಿರುತ್ತೆ. ಇದನ್ನು ತಯಾರಿಸುವುದು ಕೂಡ ಅತ್ಯಂತ ಸುಲಭ. ಅಡುಗೆ ಗೊತ್ತಿಲ್ಲದವರು ಕೂಡ ಇದನ್ನು ತುಂಬಾ ಸರಳವಾಗಿ ತಯಾರಿಸಬಹುದು. ಈ ಸೂಪರ್ ಟೇಸ್ಟಿ ಚಟ್ನಿ ಮಾಡಲು ಬೇಕಾಗುವ ಪದಾರ್ಥಗಳು ಯಾವುವು? ತಯಾರಿಸುವುದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ..

ಟೊಮೆಟೊ ಚಟ್ನಿ ಸಿದ್ಧಪಡಿಸಲು ಬೇಕಾಗುವ ಪದಾರ್ಥಗಳು

  • ಟೊಮೆಟೊ - ಅರ್ಧ ಕೆಜಿ
  • ಹುಣಸೆಹಣ್ಣು - ನಿಂಬೆಯಷ್ಟು
  • ಖಾರದ ಪುಡಿ - ಅಗತ್ಯಕ್ಕೆ ತಕ್ಕಷ್ಟು
  • ಬೆಳ್ಳುಳ್ಳಿ ಎಸಳು - 10 ರಿಂದ 12
  • ಹರಳು ಉಪ್ಪು - ರುಚಿಗೆ ತಕ್ಕಷ್ಟು
  • ಹುರಿದ ಮೆಂತ್ಯ ಪುಡಿ - ಕಾಲು(1/4) ಟೀಸ್ಪೂನ್
  • ಹುರಿದ ಸಾಸಿವೆ ಪುಡಿ - ಕಾಲು ಟೀಸ್ಪೂನ್

ಒಗ್ಗರಣಗೆ ಬೇಕಾಗುವ ಸಾಮಗ್ರಿ

  • ಎಣ್ಣೆ - 3/4 ಕಪ್
  • ಸಾಸಿವೆ - 1 ಟೀಸ್ಪೂನ್
  • ಜೀರಿಗೆ - 1 ಟೀಸ್ಪೂನ್
  • ಉದ್ದಿನ ಬೇಳೆ - 1 ಟೀಸ್ಪೂನ್
  • ಕಡಲೆಕಾಯಿ - 1 ಟೀಸ್ಪೂನ್
  • ಬೆಳ್ಳುಳ್ಳಿ ಎಸಳು - 10
  • ಒಣ ಮೆಣಸಿಕಾಯಿ - 6
  • ಕರಿಬೇವಿನ ಎಲೆಗಳು - 3
  • ಇಂಗು - ಕಾಲು ಟೀಸ್ಪೂನ್
  • ಅರಿಶಿನ - ಒಂದು ಟೀಸ್ಪೂನ್

ಟೊಮೆಟೊ ಚಟ್ನಿ ಸಿದ್ಧಪಡಿಸಿವುದು ಹೇಗೆ?

  • ಇದಕ್ಕಾಗಿ ಮೊದಲು ಟೊಮೆಟೊಗಳನ್ನು ಮಧ್ಯಮ ಗಾತ್ರದ ತುಂಡುಗಳಾಗಿ ಕತ್ತರಿಸಿ ಪಕ್ಕಕ್ಕೆ ಇಡಿ.
  • ಈಗ ಮಿಕ್ಸಿಂಗ್ ಜಾರ್ ತೆಗೆದುಕೊಂಡು ಅದರಲ್ಲಿ ಕತ್ತರಿಸಿದ ಟೊಮೆಟೊ ತುಂಡುಗಳನ್ನು ಹಾಕಿ. ಜೊತೆಗೆ ಹುಣಸೆಹಣ್ಣು, ಮೆಣಸಿನಕಾಯಿ, ಬೆಳ್ಳುಳ್ಳಿ ಎಸಳು ಮತ್ತು ಉಪ್ಪು ಸೇರಿಸಿ ಸ್ವಲ್ಪ ಒರಟಾಗಿ ರುಬ್ಬಿಕೊಂಡು ಪಕ್ಕಕ್ಕೆ ಇರಿಸಿ.
  • ಇದಾದ ನಂತರ ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ. ಎಣ್ಣೆ ಸ್ವಲ್ಪ ಬಿಸಿಯಾದಾಗ ಸಾಸಿವೆ, ಜೀರಿಗೆ, ಉದ್ದಿನಬೇಳೆ ಹಾಕಿ ಸ್ವಲ್ಪ ಹುರಿಯಿರಿ.
  • ಸಾಸಿವೆ ಕಂದು ಬಣ್ಣ ಬರುವವರೆಗೆ ಹುರಿದ ನಂತರ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ ಎಸಳು, ಒಣ ಮೆಣಸಿನಕಾಯಿ, ಕರಿಬೇವಿನ ಸೊಪ್ಪು, ಇಂಗು, ಅರಿಶಿನ ಸೇರಿಸಿ ಒಮ್ಮೆ ಚೆನ್ನಾಗಿ ಕಲಸಿ ಹುರಿಯಿರಿ.
  • ಒಗ್ಗರಣೆಯಲ್ಲಿ ರುಬ್ಬಿದ ಟೊಮೆಟೊ ಮಿಶ್ರಣಕ್ಕೆ ಹಾಕಿ ಒಮ್ಮೆ ಕಲಸಿ.
  • ಇದಾದ ನಂತರ ಸ್ಟವನ್ನು ಕಡಿಮೆ ಉರಿಯಲ್ಲಿ ಇಟ್ಟು ಮಧ್ಯೆ ಮಧ್ಯೆ ಈ ಮಿಶ್ರಣವನ್ನು ಒಂದು ಚಮಚದಿಂದ ಎಣ್ಣೆ ಮೇಲೆ ತೇಲುವವರೆಗೆ ಬೇಯಿಸಿ.
  • ಈ ರೀತಿ ಬೇಯಿಸುವಾಗ ಹುರಿದ ಮೆಂತ್ಯ ಪುಡಿ ಮತ್ತು ಸಾಸಿವೆ ಪುಡಿಯನ್ನು ಹಾಕಿ. ಇವುಗಳನ್ನು ಸೇರಿಸುವುದರಿಂದ, ಚಟ್ನಿ ಉತ್ತಮ ಸುವಾಸನೆ ಮತ್ತು ರುಚಿಯನ್ನು ಪಡೆಯುತ್ತದೆ. ಚಟ್ನಿ ಬೇಯಿಸುವಾಗ ಉಪ್ಪನ್ನು ಪರಿಶೀಲಿಸಿ ಮತ್ತು ಸಾಕಾಗದಿದ್ದರೆ ಸೇರಿಸಿ.
  • ಚಟ್ನಿಯಲ್ಲಿ ಎಣ್ಣೆ ಮೇಲೆ ತೇಲಿದಂತೆ ಕಾಣಿಸಿದ ನಂತರ ಸ್ಟವ್​ ಆಫ್ ಮಾಡಿ ತಣ್ಣಗಾಗಲು ಬಿಡಿ.
  • ಅದರ ನಂತರ ಯಾವುದೇ ಗಾಳಿಯಾಡದ ಗಾಜಿನ ಡಬ್ಬಿ ಅಥವಾ ಜಾರ್​ನಲ್ಲಿ ಸಂಗ್ರಹಿಸಿ ಇಡಿ. ತುಂಬಾ ರುಚಿಯಾದ 'ಟೊಮೆಟೊ ಚಟ್ನಿ' ಸಿದ್ಧ!
  • ಸಾಮಾನ್ಯವಾದ ರೀತಿಯಲ್ಲಿ ಸಂಗ್ರಹಿಸಿದರೆ, ಈ ಚಟ್ನಿ ತರಕಾರಿ ಕನಿಷ್ಠ ಒಂದು ವಾರದವರೆಗೆ ಬರುತ್ತದೆ. ಅದೇ ಫ್ರಿಡ್ಜ್​ನಲ್ಲಿಟ್ಟರೆ ಸುಮಾರು 20 ದಿನಗಳವರೆಗೆ ಬಳಸಬಹುದು.

ಇವುಗಳನ್ನು ಓದಿ:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.