ಬೆಂಗಳೂರು: ಕೋವಿಡ್ ಬಂದು ಆರು ತಿಂಗಳು ಕಳೆದರೂ ಬೆಂಗಳೂರಿನ ರಾಜಾಜಿನಗರದ ಇಎಸ್ಐ ಆಸ್ಪತ್ರೆ ಚಿತ್ರಣ ಮಾತ್ರ ಇನ್ನೂ ಬದಲಾಗಿಲ್ಲ.
ಈವರೆಗೂ ಈ ಆಸ್ಪತ್ರೆಯ 93 ಸಿಬ್ಬಂದಿಗೆ ಕೋವಿಡ್ ಸೋಂಕು ಹರಡಿದೆ. ಆಸ್ಪತ್ರೆಯ ವೈದ್ಯರು, ಸ್ಟಾಫ್ ನರ್ಸ್‌ಗಳಿಗೆ ಸೋಂಕು ಹರಡುವಿಕೆ ಇನ್ನೂ ಮುಂದುವರೆದಿದ್ರೂ ಆಸ್ಪತ್ರೆ ಆಡಳಿತ ಮಂಡಳಿ ಮಾತ್ರ ಎಚ್ಚೆತ್ತುಕೊಂಡಿಲ್ಲ.
ಮೊನ್ನೆ ಮೊನ್ನೆಯಷ್ಟೇ ಆಸ್ಪತ್ರೆಯ ಒಬ್ಬ ವೈದ್ಯರು ಕೂಡ ಕೊರೊನಾಗೆ ಬಲಿಯಾಗಿದ್ದರು. ಆದರೂ ಬುದ್ದಿ ಕಲಿಯದ ಆಡಳಿತ ವರ್ಗ, ಆರೋಗ್ಯ ಸಿಬ್ಬಂದಿಗೆ ಸರಿಯಾಗಿ ಪಿಪಿಯ ಕಿಟ್, ಕನಿಷ್ಠ ಪಕ್ಷ ಮಾಸ್ಕ್ ಅನ್ನೂ ಕೂಡ ಕೊಡುತ್ತಿಲ್ಲ.
ಇನ್ನೂ ಕೋವಿಡ್ ವಾರ್ಡ್ ಒಳಗೆ ಹೋಗೋರಿಗೆ ಮಾತ್ರ N95 ಮಾಸ್ಕ್ ಕೊಡುತ್ತೇವೆ. ನಾನ್ ಕೋವಿಡ್ ಡ್ಯೂಟಿ ಮಾಡುವವರು ವಾರಕ್ಕೊಂದು N95 ಬಳಸಿ ಅಂತಿದ್ದಾರೆ. ಇದರಿಂದಾಗಿ ಆಸ್ಪತ್ರೆ ಸಿಬ್ಬಂದಿಯಲ್ಲಿ ಸೋಂಕು ಹೆಚ್ಚಳವಾಗ್ತಿದೆ ಎಂದು ರಾಜಾಜಿನಗರ ಇಎಸ್ಐ ಆಸ್ಪತ್ರೆ ಡೀನ್ ಜಿತೇಂದ್ರ ಕುಮಾರ್ ವಿರುದ್ದ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.