ETV Bharat / state

ನಿವೃತ್ತಿಗೆ ಮೂರು ದಿನಗಳ ಮುನ್ನ ಡಿಜಿಪಿಯಾಗಿ ಬಡ್ತಿ ಪಡೆದ ಸುನೀಲ್ ಕುಮಾರ್

ಮೂರು ದಿನಗಳ ನಂತರ ನಿವೃತ್ತರಾಗಲಿರುವ ಭ್ರಷ್ಟಾಚಾರ ನಿಗ್ರಹ ಸಂಸ್ಥೆ (ಎಸಿಬಿ) ಎಡಿಜಿಪಿ ಸುನೀಲ್ ಕುಮಾರ್ ಅವರನ್ನು ಡಿಜಿಪಿಯಾಗಿ ಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

sunil kumar
ಐಪಿಎಸ್ ಅಧಿಕಾರಿ ಸುನೀಲ್ ಕುಮಾರ್
author img

By

Published : Oct 28, 2020, 8:44 PM IST

Updated : Oct 28, 2020, 8:52 PM IST

ಬೆಂಗಳೂರು: ಇಬ್ಬರು ಐಪಿಎಸ್ ಅಧಿಕಾರಿಗಳಿಗೆ ಬಡ್ತಿಯೊಂದಿಗೆ ವರ್ಗಾವಣೆ ನೀಡಲಾಗಿದ್ದರೆ, ಇನ್ನೊಬ್ಬರನ್ನ ಸಾಮಾನ್ಯ ವರ್ಗಾವಣೆ ಮಾಡಲಾಗಿದೆ. ಒಟ್ಟು ಮೂವರಿಗೆ ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.‌

order letter
ಆದೇಶ ಪ್ರತಿ

ಮೂರು ದಿನಗಳ ನಂತರ ನಿವೃತ್ತರಾಗಲಿರುವ ಭ್ರಷ್ಟಾಚಾರ ನಿಗ್ರಹ ಸಂಸ್ಥೆ (ಎಸಿಬಿ) ಎಡಿಜಿಪಿ ಸುನೀಲ್ ಕುಮಾರ್, ಸಿಐಡಿ ವಿಶೇಷ ಹಾಗೂ ಆರ್ಥಿಕ ಅಪರಾಧ ವಿಭಾಗದ ಡಿಜಿಪಿಯಾಗಿ ಬಡ್ತಿ ಪಡೆದರೆ, ರಾಜ್ಯ ಪೊಲೀಸ್ ಇಲಾಖೆಯ ಕಾನೂನು ಸುವ್ಯವಸ್ಥೆ ವಿಭಾಗದ ಡಿಜಿಪಿ ಅಮರ್ ಕುಮಾರ್ ಪೊಲೀಸ್ ತರಬೇತಿ ವಿಭಾಗದ ಡಿಜಿಪಿಯಾಗಿ ಬಡ್ತಿ ನೀಡಿ ವರ್ಗಾವಣೆಗೊಳಿಸಲಾಗಿದೆ.

ಸಿ.ಎಚ್.ಪ್ರತಾಪ್ ರೆಡ್ಡಿ ಅವರನ್ನು ರಾಜ್ಯ ಪೊಲೀಸ್ ಸಂಪರ್ಕ ಸಂವಹನ ಹಾಗೂ ಆಧುನೀಕರಣ ಜೊತೆಗೆ ಕಾನೂನು ಸುವ್ಯವಸ್ಥೆ ಹೊಣೆ ನೀಡಲಾಗಿದೆ. ಈ ನಡುವೆ, ಇದೇ ತಿಂಗಳು 31ರ ನಂತರ ಅಗ್ನಿಶಾಮಕ ಇಲಾಖೆಯ ಡಿಜಿಪಿ ಎ‌.ಎಂ‌.ಪ್ರಸಾದ್ ಸಹ ನಿವೃತ್ತಿ ಆಗಲಿದ್ದಾರೆ.

Last Updated : Oct 28, 2020, 8:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.