ಬೆಂಗಳೂರು: ಕೊರೊನಾ ಮಧ್ಯೆಯೂ ರಾಜ್ಯ ಪೊಲೀಸ್ ಇಲಾಖೆ ಪೊಲೀಸ್ ಇನ್ಸ್ಪೆಕ್ಟರ್ ವರ್ಗಾವಣೆ ಮುಂದುವರೆದಿದೆ. ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿದ್ದ 47 ಪೊಲೀಸ್ ಇನ್ಸ್ಪೆಕ್ಟರ್ಗಳ ವರ್ಗಾವಣೆ ಆದೇಶ ಹೊರಡಿಸಲಾಗಿದೆ.
ಇತ್ತೀಚೆಗೆ ಗಿರಿನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಿದ್ದರಾಜು ನಿವೃತ್ತಿ ಹಿನ್ನೆಲೆ ಹಾಗೂ ಹೊಸದಾಗಿ ರಚಿಸಲಾದ ನಗರ ಈಶಾನ್ಯ ವಲಯದ ಸಿಎಇಎನ್ ಠಾಣೆ ಸೇರಿದಂತೆ 47 ಪೊಲೀಸ್ ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆ ಮಾಡಲಾಗಿದೆ.
ವರ್ಗ ಆದೇಶ ಪತ್ರ ದೊರೆಯುತ್ತಿದ್ದಂತೆ ಕೂಡಲೇ ನಿಯೋಜಿಸಲಾದ ಸ್ಥಳಗಳಿಗೆ ತೆರಳಿ ವರದಿ ಒಪ್ಪಿಸಿ ಪಾಲನಾ ವರದಿ ಸಲ್ಲಿಸಬೇಕೆಂದು ರಾಜ್ಯ ಪೊಲೀಸ್ ಇಲಾಖೆಯ ಆಡಳಿತ ವಿಭಾಗದ ಎಡಿಜಿಪಿ ಡಾ.ಎಂ.ಎ. ಸಲೀಂ ಆದೇಶದಲ್ಲಿ ಸೂಚಿಸಿದ್ದಾರೆ.