ETV Bharat / state

ಕಾಂಗ್ರೆಸ್ ಶಾಸಕರು, ಉಸ್ತುವಾರಿ ಸಚಿವರೊಂದಿಗಿನ ಸರಣಿ ಸಭೆ ಮುಕ್ತಾಯ; ಅಸಮಾಧಾನ ಶಮನ ಕಸರತ್ತು ನಡೆಸಿದ ಸಿಎಂ ಸಿದ್ದರಾಮಯ್ಯ

ಅನುದಾನ ಬಿಡುಗಡೆ, ಸಚಿವರು ಹಾಗೂ ಶಾಸಕರ ಜೊತೆ ಸಮನ್ವಯತೆ ಮತ್ತು ಲೋಕಸಭೆ ಚುನಾವಣೆಗೆ ತಯಾರಿ ಬಗ್ಗೆ ಸಿಎಂ ಸಿದ್ದರಾಮಯ್ಯ ಎಲ್ಲಾ ಜಿಲ್ಲೆಗಳ ಕಾಂಗ್ರೆಸ್ ಶಾಸಕರು ಹಾಗೂ ಉಸ್ತುವಾರಿ ಸಚಿವರುಗಳ ಜೊತೆ ಕಳೆದ ಕೆಲ ದಿನಗಳಿಂದ ಸರಣಿ ಸಭೆ ನಡೆಸಿದ್ದು, ಮುಕ್ತಾಯಗೊಂಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ
author img

By

Published : Aug 17, 2023, 10:25 PM IST

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಎಲ್ಲಾ ಜಿಲ್ಲೆಗಳ ಕಾಂಗ್ರೆಸ್ ಶಾಸಕರು ಹಾಗೂ ಉಸ್ತುವಾರಿ ಸಚಿವರುಗಳ ಜೊತೆಗಿನ ಸರಣಿ ಸಭೆಗಳು ಇಂದಿಗೆ ಮುಕ್ತಾಯಗೊಂಡಿತು. 30 ಜಿಲ್ಲೆಗಳ ಶಾಸಕರ ಜೊತೆ ಪ್ರತ್ಯೇಕವಾಗಿ 5 ದಿನಗಳ ಕಾಲ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ಅಹವಾಲು ಸ್ವೀಕರಿಸಿದರು. ಪ್ರಮುಖವಾಗಿ ಅನುದಾನ ಬಿಡುಗಡೆ, ಸಚಿವರು ಹಾಗೂ ಶಾಸಕರ ಜೊತೆ ಸಮನ್ವಯತೆ ಮತ್ತು ಲೋಕಸಭೆ ಚುನಾವಣೆ ತಯಾರಿ ಬಗ್ಗೆ ಚರ್ಚೆ ನಡೆದಿದೆ.

ಇಂದು ಸಿಎಂ ಸಿದ್ದರಾಮಯ್ಯನವರ ಗೃಹ ಕಚೇರಿ ಕೃಷ್ಣಾದಲ್ಲಿ ಗದಗ, ಉತ್ತರ ಕನ್ನಡ ಹಾಗೂ ಶಿವಮೊಗ್ಗ, ಮೈಸೂರು, ಚಿಕ್ಕಮಗಳೂರು ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರು, ಸಂಬಂಧಪಟ್ಟ ಸಚಿವರು ಹಾಗೂ ಆಡಳಿತ ಪಕ್ಷದ ಶಾಸಕರ ಜೊತೆ ಸುದೀರ್ಘ ಸರಣಿ ಸಭೆ ನಡೆಸಿದರು.‌ ಸಿಎಂ, ಕೈ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅಸಮಾಧಾನಕ್ಕೆ ಮದ್ದರೆಯುವ ಕಸರತ್ತು ನಡೆಸಿದರು.

ಕಾಂಗ್ರೆಸ್ ಶಾಸಕರು ಬಹುತೇಕ ಅನುದಾನ ಬಿಡುಗಡೆ, ವರ್ಗಾವಣೆ ವಿಚಾರ, ಸಚಿವರ ಜೊತೆ ಸಮನ್ವಯತೆ ಸಾಧಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಉಳಿದಂತೆ ಕ್ಷೇತ್ರವಾರು ಅಭಿವೃದ್ಧಿ ಕೆಲಸ, ಲೋಕಸಭೆ ಚುನಾವಣೆ ತಯಾರಿ, ಪಾಲಿಕೆ ಚುನಾವಣೆ, ಸ್ಥಳೀಯ ಚುನಾವಣೆ ಸಿದ್ಧತೆ ಹಾಗೂ ಪಂಚ ಗ್ಯಾರಂಟಿಗಳ ಜಾರಿ ಬಗ್ಗೆ ಸಿಎಂ ಸಲಹೆ,ಸೂಚನೆಗಳನ್ನು ನೀಡಿದರು.

ಇಂದು ನಡೆದ ಸಭೆಯಲ್ಲೂ ಸರ್ಕಾರ ಮತ್ತು ಪಕ್ಷದೊಂದಿಗಿನ ಸಮನ್ವಯತೆ, ಐದು ಗ್ಯಾರಂಟಿ ಯೋಜನೆಗಳನ್ನು ಮಧ್ಯಮ ಮತ್ತು ಬಡ ವರ್ಗದ ಎಲ್ಲಾ ಜಾತಿ, ಸಮುದಾಯಗಳ ಮನೆ ಬಾಗಿಲಿಗೆ ತಲುಪಿಸುವುದು, ಶಾಸಕರು ಸಚಿವರೊಂದಿಗೆ ಹೊಂದಾಣಿಕೆ, ಸ್ಥಳೀಯ ಸಂಸ್ಥೆ ಚುನಾವಣೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸುವ ಮಾತುಕತೆ ನಡೆಯಿತು.

ಸಚಿವ ಮಧು ಬಂಗಾರಪ್ಪ ಹೇಳಿಕೆ

ಎಂಪಿಎಂ, ವಿಎಸ್ಐಎಲ್ ಕಾರ್ಖಾನೆ ಪುನಾರಂಭ ಚರ್ಚೆ: ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಶಾಸಕರು ಹಾಗೂ ಉಸ್ತುವಾರಿ ಸಚಿವರ ಸಭೆ ಬಳಿಕ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಕ್ಷೇತ್ರದ ಅಭಿವೃದ್ದಿಯ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಎಂಪಿಎಂ, ವಿಎಸ್ಐಎಲ್ ಕಾರ್ಖಾನೆ ಪುನರಾರಂಭದ ಬಗ್ಗೆಯೂ ಚರ್ಚೆ ಆಗಿದೆ. ವಿಎಸ್​ಐಎಲ್ ಕೇಂದ್ರ ಸರ್ಕಾರದ ಅಡಿಯಲ್ಲಿ ಬರುತ್ತೆ. ಎಂಪಿಎಂ ನಮಗೆ ಬರುತ್ತೆ. ಹೀಗಾಗಿ ಏನು ಪರಿಹಾರ ನೀಡಬಹುದೆಂಬ ಕುರಿತು ಚರ್ಚೆ ಆಯ್ತು. ಬಗರ್ ಹುಕುಂ ಸಮಸ್ಯೆಯನ್ನು ಒಂದು ಹಂತಕ್ಕೆ ತಂದಿದ್ದೇವೆ. ಎಲ್ಲ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇವೆ ಎಂದರು.

ರಾಜ್ಯಮಟ್ಟದಲ್ಲಿನ ಸಮಸ್ಯೆಯನ್ನು ನಾವು ಬಗೆಹರಿಸುತ್ತೇವೆ. ಕೇಂದ್ರದ ಸಮಸ್ಯೆಯನ್ನು ಅವರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುತ್ತೇವೆ. ಲೋಕಸಭೆಯಲ್ಲಿ ಚುನಾವಣೆ ಗೆಲ್ಲುವ ಬಗ್ಗೆ ಚರ್ಚೆ ಮಾಡಿದ್ದೇವೆ. ಗ್ಯಾರಂಟಿ ಯೋಜನೆ ನಮ್ಮ ಪರವಾಗಿದೆ. ಹೀಗಾಗಿ ಚುನಾವಣೆ ಗೆಲ್ಲಲು ಚರ್ಚೆ ನಡೆಸಿದ್ದೇವೆ. ವಿಐಎಸ್ಎಲ್ ಒಂದು ಯೂನಿಟ್ ಆರಂಭ ಮಾಡಿದ್ರೆ, ಇಡೀ ಕಾರ್ಖಾನೆ ಆರಂಭ ಮಾಡಿದ ಹಾಗೆ ಅಲ್ಲ. ದಾರಿ ತಪ್ಪಿಸುವ ಕೆಲಸ ಚುನಾವಣೆ ಸಮಯದಲ್ಲಿ ಮಾಡೊದು ತಪ್ಪಾಗುತ್ತೆ. ಅದು ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವುದರಿಂದ ಸಿಎಂ, ಡಿಸಿಎಂ ಈ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ಮಾಡುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಗೀತಾ ಶಿವ ರಾಜ್‌ಕುಮಾರ್ ಅವರು ಶಿವಮೊಗ್ಗ ಲೋಕಸಭೆಗೆ ಸ್ಪರ್ಧಿಸುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅದನ್ನು ಪಕ್ಷ ತೀರ್ಮಾನ ಮಾಡುತ್ತೆ. ಪಕ್ಷದ ತೀರ್ಮಾನಕ್ಕೆ ನಾವೆಲ್ಲ ಬದ್ಧ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಕೈ ಶಾಸಕರ ಅಸಮಾಧಾನ ತಗ್ಗಿಸಲು ಸಿಎಂ ಕಸರತ್ತು: ಮಂಗಳವಾರವೂ ಆರು ಜಿಲ್ಲೆ ಶಾಸಕರು, ಸಚಿವರ ಜೊತೆ ಸಭೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.