ETV Bharat / state

ಕದಿಯಲು ಬಂದು ಸಂಕಷ್ಟಕ್ಕೆ ಸಿಲುಕಿದ ಕಳ್ಳನನ್ನ ಆಸ್ಪತ್ರೆಗೆ ಸೇರಿಸಿದ ಮನೆ ಮಾಲೀಕ! - ಬೆಂಗಳೂರು ಕಳ್ಳತನ ಪ್ರಕರಣ

ಬಾಗಿಲಿಗೆ ಆಟೋಮೆಟಿಕ್ ಲಾಕ್ ಅಳವಡಿಸಿದ್ದರಿಂದ‌ ಕಳ್ಳತನ‌ ಮಾಡಲು ಹೋಗಿದ್ದ ವ್ಯಕ್ತಿ ಮನೆಯೊಳಗೆ ಸಿಲುಕಿಕೊಂಡಿರುವ ಘಟನೆ ಹೆಚ್​ಎಎಲ್ ಠಾಣಾ ವ್ಯಾಪ್ತಿಯ ವಿಭೂತಿಪುರದ ಮನೆಯೊಂದರಲ್ಲಿ ನಡೆದಿದೆ.

Banglore latest crime news
ಕದಿಯಲು ಬಂದಿದ್ದ ಕಳ್ಳನನ್ನ ಆಸ್ಪತ್ರೆಗೆ ಸೇರಿಸಿದ ಮನೆ ಮಾಲೀಕ
author img

By

Published : Jan 5, 2020, 5:24 PM IST

ಬೆಂಗಳೂರು: ಬಾಗಿಲಿಗೆ ಆಟೋಮೆಟಿಕ್ ಲಾಕ್ ಅಳವಡಿಸಿದ್ದರಿಂದ‌ ಕಳ್ಳತನ‌ ಮಾಡಲು ಹೋಗಿದ್ದ ವ್ಯಕ್ತಿ ಮನೆಗೆ ಒಳಗೆ ನುಗ್ಗಿ ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಘಟನೆ ಹೆಚ್​ಎಎಲ್ ಠಾಣಾ ವ್ಯಾಪ್ತಿಯ ವಿಭೂತಿಪುರದ ಮನೆಯೊಂದರಲ್ಲಿ ನಡೆದಿದೆ.

Banglore latest crime news
ಕದಿಯಲು ಬಂದಿದ್ದ ಕಳ್ಳನನ್ನ ಆಸ್ಪತ್ರೆಗೆ ಸೇರಿಸಿದ ಮನೆ ಮಾಲೀಕ

ಸ್ವಸ್ತಿಕ್ ಕಳ್ಳತನ‌ ಮಾಡಲು ಹೋಗಿ ಸಿಲುಕಿಕೊಂಡಿರುವ ಆರೋಪಿ. ಮನೆ ಮಾಲೀಕ ಮೋಹನ್ ಹಾಗೂ ಆತನ ಕುಟುಂಬಸ್ಥರು ದೇವಸ್ಥಾನಕ್ಕೆ ಹೋಗಿದ್ದರು‌. ಮನೆಯಲ್ಲಿ ಯಾರು ಇಲ್ಲದಿರುವುದನ್ನು ಅರಿತ ಸ್ವಸ್ತಿಕ್ ಮನೆಯೊಳಗೆ‌ ನುಗ್ಗಿದ್ದ ಎನ್ನಲಾಗ್ತಿದೆ. ಕಳ್ಳತನ ಮಾಡಿ ಮನೆಯ ಪ್ರವೇಶ ದ್ವಾರದಿಂದ ಹೊರ ಬರಲು ಮುಂದಾಗಿದ್ದ. ಆದ್ರೆ ಬಾಗಿಲಿಗೆ ಆಟೋಮೆಟಿಕ್ ಲಾಕ್ ಅಳವಡಿಸಿದ್ದರಿಂದ ಬಾಗಿಲು ಓಪನ್ ಆಗದೆ ಚಡಪಡಿಸಿದ್ದಾನೆ. ಕಳ್ಳತನದ ಬಳಿಕ ತಪ್ಪಿಸಿಕೊಳ್ಳಲಾಗದೆ ರೂಂಗೆ ಹೋಗಿ ಫ್ಯಾನ್​ಗೆ ಶಾಲ್ ಕಟ್ಟಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬಳಿಕ ಮನೆಯ ಸಿಲಿಂಡರ್ ಪೈಪ್ ತೆಗೆದು ಬೆಂಕಿ ಹಚ್ಚಿಕೊಂಡು ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾನೆ.

ಮನೆ ಮಾಲೀಕರು ದೇವಸ್ಥಾನದಿಂದ ವಾಪಸ್ ಬಂದಾಗ ಮನೆಗೆ ಬೆಂಕಿ ಬಿದ್ದಿರುವುದನ್ನು ಕಂಡು ಕೂಡಲೇ ನಂದಿಸಿದ್ದಾರೆ. ಮನೆಯೊಳಗೆ ಗಾಯಗೊಂಡು ಬಿದ್ದಿದ್ದ ಕಳ್ಳ ಸ್ವಸ್ತಿಕ್​ನನ್ನು ಮಾಲೀಕನೇ ಆಸ್ಪತ್ರೆಗೆ ಸೇರಿಸಿದ್ದಾರೆ. ಬಳಿಕ ಹೆಚ್​ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ‌.

Intro:Body:ಕದಿಯಲು ಬಂದಿದ್ದ ಕಳ್ಳನನ್ನ ಆಸ್ಪತ್ರೆಗೆ ಸೇರಿಸಿದ ಮನೆ ಮಾಲೀಕ

ಬೆಂಗಳೂರು: ಮನೆಯಲ್ಲಿ ಯಾರು ಇಲ್ಲದಿರುವುದನ್ನು‌ ಕಂಡು ಆತ ಕಳ್ಳತನ‌ ಮಾಡಲು ಮುಂದಾಗಿದ್ದ. ಆದರೆ ಆತನ ಗ್ರಹಚಾರ ಕೈಕೊಟ್ಟಿದೆ..‌ಅರ್ಥಾತ್ ಮನೆಗೆ ಆಟೊಮೇಟಿಕ್ ಲಾಕ್ ಅಳವಡಿಸಿದ್ದರಿಂದ‌ ಮನೆಗೆ ಒಳಗೆ ಲಾಕ್ ಆಗಿದ್ದಾನೆ. ಇಂಟೆರೆಸ್ಟಿಂಗ್ ವಿಷ್ಯ ಅಂದರೆ ಕಳ್ಳತನದಿಂದ ತಪ್ಪಿಸಿಕೊಳ್ಳಲು ಆತ ಮನೆಯ ಗ್ಯಾಸ್ ಪೈಪ್ ಗೆ ಬೆಂಕಿ ಹಚ್ಚಿದ್ದಾನೆ‌‌‌. ಬೆಂಕಿಯ ಕಿಡಿ ಕಳ್ಳನಿಗೂ ತಾಕಿ ಗಾಯಗೊಂಡಿದ್ದಾನೆ.
ಎಚ್.ಎಎಲ್ ಠಾಣಾ ವ್ಯಾಪ್ತಿಯ ವಿಭೂತಿಪುರದ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ಹೊಸ ವರ್ಷದ ದಿನದಂದು ಮನೆ ಮಾಲೀಕ ಮೋಹನ್ ಹಾಗೂ ಆತನ ಕುಟುಂಬಸ್ಥರು ದೇವಸ್ಥಾನಕ್ಕೆ ಹೊರಗೆ ಹೋಗಿದ್ದರು‌. ಮನೆಯಲ್ಲಿ ಯಾರು ಇಲ್ಲದಿರುವುದನ್ನು ಅರಿತ ಸ್ವಸ್ತಿಕ್ ಎಂಬ ಕಳ್ಳ ಮನೆಗೆ‌ ನುಗ್ಗಿದ್ದಾನೆ. ಕಳ್ಳತನ ಮಾಡಿ ಮನೆಯ ಪ್ರವೇಶದ್ವಾರದಿಂದ ಹೊರ ಬರಲು ಮುಂದಾಗಿದ್ದಾನೆ. ಡೋರ್ ಗೆ ಆಟೊಮೇಟಿಕ್ ಲಾಕ್ ಅಳವಡಿಸಿದ್ದರಿಂದ ಬಾಗಿಲು ಓಪನ್ ಆಗದೆ ಚಡಪಡಿಸಿದ್ದಾನೆ.. ಕಳ್ಳತನದ ಬಳಿಕ ತಪ್ಪಿಸಿಕೊಳ್ಳಲಾಗದೆ ರೂಂ ಗೆ ಹೋಗಿ ಫ್ಯಾನ್ ಗೆ ಶಾಲ್ ಕಟ್ಟಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬಳಿಕ ಮನೆಯ ಸಿಲಿಂಡರ್ ಪೈಪ್ ತೆಗೆದು ಬೆಂಕಿ ಹಚ್ಚಿಕೊಂಡು ಗಾಯ ಮಾಡಿಕೊಂಡು ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾನೆ..
ಮನೆ ಮಾಲೀಕರು ದೇವಸ್ಥಾನದಿಂದ ವಾಪಸ್ ಬಂದಾಗ ಮನೆಗೆ ಬೆಂಕಿ ಬಿದ್ದಿರುವುದನ್ನು ಕಂಡು ಕೂಡಲೇ ನಂದಿಸಿದ್ದಾರೆ. ಮನೆಯೊಳಗೆ ಗಾಯಗೊಂಡು ಬಿದ್ದಿದ್ದ ಸ್ವಸ್ತಿಕ್ ನನ್ನು ಆಸ್ಪತ್ರೆಗೆ ಸೇರಿಸಿದ ಮಾಲೀಕನೇ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ ಎ ಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ‌Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.