ETV Bharat / state

ವಿರೋಧದ ನಡುವೆಯೂ ಭೂ ಸುಧಾರಣೆ ಕಾಯ್ದೆ ತಿದ್ದುಪಡಿಗೆ ಸದನದಲ್ಲಿ ಅಂಗೀಕಾರ - ಭೂ ಸುಧಾರಣಾ ಕಾಯ್ದೆ ತಿದ್ದುಪಡಿ

ಸುಗ್ರೀವಾಜ್ಞೆ ರೂಪದಲ್ಲಿ ಈಗಾಗಲೇ ಜಾರಿಯಲ್ಲಿರುವ ಈ ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯ ಪ್ರಕಾರ, ಐದು ಜನರಿಗಿಂತ ಕಡಿಮೆ ಇರುವ ಕುಟುಂಬದವರು 108 ಎಕರೆವರೆಗೂ (20 ಯೂನಿಟ್) ಕೃಷಿ ಜಮೀನನ್ನು ಖರೀದಿಸಲು ಅವಕಾಶವಿತ್ತು..

The Land Reform Amendment Act was passed at the Assembly
ವಿರೋಧದ ನಡುವೆಯೂ ಭೂ ಸುಧಾರಣೆ ಕಾಯ್ದೆ ತಿದ್ದುಪಡಿಗೆ ಅಂಗೀಕಾರ
author img

By

Published : Sep 26, 2020, 4:27 PM IST

ಬೆಂಗಳೂರು : ಕರ್ನಾಟಕ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ರೈತ ಸಂಘಟನೆಗಳು, ವಿಪಕ್ಷಗಳು ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆ ಕೃಷಿ ಭೂಮಿಯ ಖರೀದಿ ಮಿತಿಯನ್ನು ದ್ವಿಗುಣಗೊಳಿಸಿದ್ದನ್ನು ಕೈಬಿಟ್ಟು ಈ ಹಿಂದಿನ ಕಾಯ್ದೆಯಲ್ಲಿ ಕೃಷಿ ಭೂಮಿ ಖರೀದಿಗೆ ಇದ್ದ ಮಿತಿಯನ್ನೇ ಉಳಿಸಿಕೊಳ್ಳುವ ತೀರ್ಮಾನವನ್ನ ಸರ್ಕಾರ ಮಾಡಿದೆ.

ಈ ಕಾಯ್ದೆ ಬಗೆಗಿನ ಸುದೀರ್ಘ ಚರ್ಚೆಯ ನಂತರ ಕಂದಾಯ ಸಚಿವ ಆರ್. ಅಶೋಕ್ ಮಾತನಾಡಿ, ರೈತ ಸಂಘದ ಅಧ್ಯಕ್ಷರಾಗಿ ದಿ. ಪ್ರೊ.ಎಂ ಡಿ ನಂಜುಂಡ ಸ್ವಾಮಿ ಅವರು ಸೇರಿದಂತೆ ಹಲವು ಶಾಸಕರು ಈ ಕಾಯ್ದೆಯ 79ಎ ಮತ್ತು 79ಬಿ ವಿನಾಯಿತಿ ನೀಡುವ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿದ್ದರು. 2014ರಲ್ಲೇ ತಿದ್ದುಪಡಿ ನಿರ್ಧಾರವಾಗಿತ್ತು. ಪ್ರತಿ ನಾಗರಿಕರಿಗೂ ತನ್ನ ಉದ್ಯೋಗ ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ.

ಹೊಸದಾಗಿ ಯುವಕರು ಕೃಷಿಗೆ ಬರಬೇಕು ಎಂಬ ಉದ್ದೇಶದಿಂದ 79ಎ ಮತ್ತು 79ಬಿ ತಿದ್ದುಪಡಿ ತರಲಾಗಿದೆ. ಯುನಿಟ್ ಪ್ರಮಾಣವನ್ನು ಹಳೆಯದನ್ನೇ ಮುಂದುವರಿಸಿ ಕಡಿಮೆ ಮಾಡಲಾಗಿದೆ. ರೈತರಿಗೆ ಅನುಕೂಲವಾಗಲಿದೆ ಎಂದು ವಿವರಿಸಿದರು. ನೀರಾವರಿ ಭೂಮಿಯನ್ನು ಕೃಷಿಗೆ ಬಳಸಬೇಕು. ಪರಿಶಿಷ್ಟಜಾತಿ ಮತ್ತು ಪಂಗಡ ಭೂಮಿ ಮುಟ್ಟಲು ಅವಕಾಶವಿಲ್ಲ ಎಂದು ಹೇಳಿ ತಿದ್ದುಪಡಿಯೊಂದಿಗೆ ವಿಧೇಯಕಕ್ಕೆ ಒಪ್ಪಿಗೆ ನೀಡಬೇಕು ಎಂದು ಕೋರಿದರು.

ಆಗ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ ಮಾತನಾಡಿ, ಕಾಯ್ದೆಯ 109 ಸೆಕ್ಷನ್ ಪ್ರಕಾರ ಕೈಗಾರಿಕೆ ಉದ್ದೇಶಕ್ಕೆ ನೀಡಲಾದ ಭೂಮಿ ಬಳಕೆಯಾಗದಿದ್ದರೆ ವಾಪಸ್ಸು ಪಡೆಯುವುದನ್ನು ಮುಂದುವರೆಸಬೇಕು ಎಂದು ಸಲಹೆ ಮಾಡಿದರು. ಆಗ ಸ್ಪೀಕರ್ ಅವರು, ಕುಮಾರಸ್ವಾಮಿ ಅವರ ಸಲಹೆ ಪರಿಶೀಲಿಸಿ ಎಂದು ಸಚಿವರಿಗೆ ಸೂಚಿಸಿದರು. ಈ ನಡುವೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು.

ಬಳಿಕ ಸ್ಪೀಕರ್ ಕಾಗೇರಿ ಅವರು, ಮತಕ್ಕೆ ಹಾಕಿದಾಗ ಧ್ವನಿ ಮತದ ಮೂಲಕ ವಿಧೇಯಕಕ್ಕೆ ಅನುಮೋದನೆ ದೊರೆಯಿತು. ಇದಕ್ಕೂ ಮುನ್ನ ಸಚಿವ ಆರ್‌. ಅಶೋಕ್ ಮಾತನಾಡಿ, ಸುಗ್ರೀವಾಜ್ಞೆ ರೂಪದಲ್ಲಿ ಈಗಾಗಲೇ ಜಾರಿಯಲ್ಲಿರುವ ಈ ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯ ಪ್ರಕಾರ, ಐದು ಜನರಿಗಿಂತ ಕಡಿಮೆ ಇರುವ ಕುಟುಂಬದವರು 108 ಎಕರೆವರೆಗೂ (20 ಯೂನಿಟ್) ಕೃಷಿ ಜಮೀನನ್ನು ಖರೀದಿಸಲು ಅವಕಾಶವಿತ್ತು. ಅದೇ ರೀತಿ ಐದು ಜನರಿಗಿಂತ ಹೆಚ್ಚಿರುವ ಕುಟುಂಬದವರು 216 (40 ಯೂನಿಟ್) ಎಕರೆವರೆಗೂ ಕೃಷಿ ಜಮೀನನ್ನು ಖರೀದಿಸಲು ತಿದ್ದುಪಡಿಯಲ್ಲಿ ಅವಕಾಶ ಕಲ್ಪಿಸಲಾಗಿತ್ತು.

ಈಗ ಈ ಅಂಶ ಕೈಬಿಟ್ಟು ಮೊದಲು ಕಾಯ್ದೆಯಲ್ಲಿದ್ದಂತೆ ಐದು ಜನರಿರುವ ಕೃಷಿಕರಲ್ಲದ ಕುಟುಂಬದವರು 54(10) ಎಕರೆವರೆಗೆ ಹಾಗೆಯೇ ಐದಕ್ಕಿಂತ ಹೆಚ್ಚು ಜನರನ್ನು ಹೊಂದಿರುವ ಕುಟುಂಬದವರು 108 (20 ಯೂನಿಟ್) ಎಕರೆವರೆಗೆ ಮಾತ್ರ ಕೃಷಿ ಜಮೀನನ್ನು ಖರೀದಿಸುವ ಷರತ್ತುಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗುವುದು ಎಂದರು. ಕೃಷಿ ಭೂಮಿಯ ಖರೀದಿ ಮಿತಿಯನ್ನು ಹಿಂದಿನ ಕಾಯ್ದೆಯಲ್ಲಿರುವಂತೆ ಉಳಿಸಿಕೊಳ್ಳುವ ತಿದ್ದುಪಡಿ ಮಾಡಲು ತೀರ್ಮಾನಿಸಲಾಗಿದೆ ಎಂದು ಪ್ರಕಟಿಸಿದರು.

ಅದರಂತೆ ಕೃಷಿಕರಲ್ಲದವರು ಕೃಷಿ ಭೂಮಿ ಖರೀದಿಗೆ 108 ಎಕರೆಗಷ್ಟೇ ಸೀಮಿತವಾಗಲಿದೆ. ಅದಕ್ಕಿಂತ ಹೆಚ್ಚಿನ ಕೃಷಿ ಜಮೀನನ್ನು ಯಾವುದೇ ಕುಟುಂಬ ಹೊಂದಲು ಈ ಕಾಯ್ದೆಯಲ್ಲಿ ಅವಕಾಶವಿಲ್ಲ. ಉಳಿದಂತೆ ಯಾರು ಬೇಕಾದ್ರೂ ಕೃಷಿ ಜಮೀನನ್ನು ಖರೀದಿಸುವ ಅಂಶ ಕಾಯ್ದೆಯಲ್ಲಿರಲಿದ್ದು, ಹಾಗೆಯೇ ಕೃಷಿ ಜಮೀನನ್ನು ಖರೀದಿಸಲು ಕೃಷಿಯೇತರ ಆದಾಯ ಮಿತಿ 25 ಲಕ್ಷದೊಳಗಿರಬೇಕು ಎಂಬ ಅಂಶವನ್ನು ಕೈಬಿಡಲಾಗಿದೆ. ಎಷ್ಟು ಬೇಕಾದ್ರೂ ಆದಾಯ ಇರುವವರು ಕೃಷಿ ಜಮೀನನ್ನು ಖರೀದಿಸಲು ಅವಕಾಶ ಮುಂದುವರೆಯಲಿದೆ.

ಹಾಗೆಯೇ ಕೃಷಿ ಜಮೀನಿಗಷ್ಟೇ ಬಳಸಬೇಕು ಎಂಬ ಷರತ್ತನ್ನು ಕೈಬಿಡಲಾಗಿದೆ. ನೀರಾವರಿ ಜಮೀನನ್ನು ಖರೀದಿಸಿದವರು ಮಾತ್ರ ಆ ಜಮೀನನ್ನು ಕೃಷಿ ಬಿಟ್ಟು ಬೇರೆ ಉದ್ದೇಶಗಳಿಗೆ ಬಳಸುವಂತಿಲ್ಲ ಎಂಬ ನಿಯಮಗಳು ಕಾಯ್ದೆಯಲ್ಲಿ ಇರಲಿವೆ ಎಂದು ಹೇಳಿದರು. ಉಳ್ಳವರು ಜಮೀನು ಖರೀದಿಸುತ್ತಾರೆ. ಇದರಿಂದ ಸಣ್ಣ ಹಿಡುವಳಿದಾರರಿಗೆ ತೊಂದರೆಯಾಗಲಿದೆ ಎಂದು ರೈತ ಸಂಘಟನೆಗಳು ಹಾಗೂ ವಿರೋಧ ಪಕ್ಷಗಳು ಈ ಭೂ ಸುಧಾರಣಾ ಕಾಯ್ದೆಗೆ ತಗಾದೆ ತೆಗೆದಿದ್ದವು. ಹಾಗಾಗಿ ಸರ್ಕಾರ ಈ ಒತ್ತಡಗಳಿಗೆ ಮಣಿದು ಕೃಷಿ ಭೂಮಿ ಖರೀದಿಯನ್ನು ದ್ವಿಗುಣ ಮಾಡಿದ್ದನ್ನು ಕೈಬಿಟ್ಟು ಮೊದಲಿದ್ದ ಕಾಯ್ದೆಯಂತೆಯೇ ಖರೀದಿ ಮಿತಿ ಉಳಿಸಿಕೊಂಡಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.