ETV Bharat / state

ಐಎಂಎ ಬಹುಕೋಟಿ ವಂಚನೆ ಪ್ರಕರಣ: ಜೈಲಲ್ಲೇ ರಾತ್ರಿ ಕಳೆದ ರೋಷನ್ ಬೇಗ್

ಸದ್ಯ ಅಡ್ಮಿನಿಸ್ಟ್ರೇಷನ್ ಬ್ಯಾರಕ್ ಕ್ವಾರಂಟೈನ್ ಕೇಂದ್ರದಲ್ಲಿರುವ ರೋಷನ್ ಬೇಗ್​ ಮುಂದಿನ 14 ದಿನಗಳ ಕಾಲ ಕ್ವಾರಂಟೈನ್​ನಲ್ಲಿ ಕಳೆಯಲಿದ್ದಾರೆ. ಜೈಲಿನ ಅಧಿಕಾರಿಗಳು ರೋಷನ್ ಬೇಗ್ ಅವರಿಗೆ ಒಂದು ಚಾದರ್, ದಿಂಬು, ಬೆಡ್ ಶೀಟ್ ನೀಡಿದ್ದಾರೆ.

roshan-beg
ರೋಷನ್ ಬೇಗ್
author img

By

Published : Nov 23, 2020, 7:46 AM IST

Updated : Nov 23, 2020, 9:18 AM IST

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ ರೋಷನ್ ಬೇಗ್​ ಅವರನ್ನು ಸಿಬಿಐ ಅಧಿಕಾರಿಗಳು ಭಾನುವಾರ ಬಂಧಿಸಿದ್ದು, ಸದ್ಯ ಅವರು ಬೇಗ್​ ನ್ಯಾಯಾಂಗ ಬಂಧನದಲ್ಲಿದ್ದಾರೆ. ಐಷಾರಾಮಿ ಜೀವನ ಸಾಗಿಸಿದ್ದ ಬೇಗ್​ ಮೊದಲ ರಾತ್ರಿಯನ್ನು ಪರಪ್ಪನ ಅಗ್ರಹಾರದಲ್ಲಿ ಸಾಮಾನ್ಯ ವಿಚಾರಣಾಧೀನ ಕೈದಿಯಂತೆ ಕಳೆದಿದ್ದಾರೆ.

ಸದ್ಯ ಅಡ್ಮಿನಿಸ್ಟ್ರೇಷನ್ ಬ್ಯಾರಕ್ ಕ್ವಾರಂಟೈನ್ ಕೇಂದ್ರದಲ್ಲಿರುವ ರೋಷನ್ ಬೇಗ್​ ಮುಂದಿನ 14 ದಿನಗಳ ಕಾಲ ಕ್ವಾರಂಟೈನ್​ನಲ್ಲಿ ಕಳೆಯಲಿದ್ದಾರೆ. ಜೈಲಿನ ಅಧಿಕಾರಿಗಳು ರೋಷನ್ ಬೇಗ್ ಅವರಿಗೆ ಒಂದು ಚಾದರ್, ದಿಂಬು, ಬೆಡ್ ಶೀಟ್ ನೀಡಿದ್ದಾರೆ. ಬೇಗ್ ಆರೋಗ್ಯ ಸಮಸ್ಯೆ ಹಿನ್ನೆಲೆ, ರಾತ್ರಿ ಕುಟುಂಬಸ್ಥರು ನೀಡಿದ್ದ ಬ್ರೆಡ್ ಹಾಗೂ ಕುಷ್ಕ ತಿಂದಿದ್ದಾರೆ.

ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ರೋಷನ್​​ ಬೇಗ್​ ಬಂಧನ

ಏನಿದು ಪ್ರಕರಣ?
ಐಎಂಎ ಪ್ರಕರಣದಲ್ಲಿ ರೋಷನ್ ಬೇಗ್ ಅವರು 400ಕೋಟಿ ರೂ. ಮನ್ಸೂರ್​ನಿಂದ ಪಡೆದಿರುವ ಆರೋಪ ಈತನ ಮೇಲಿದೆ. ಈ ಹಿಂದೆ ಐಎಂಎ ಮುಖ್ಯಸ್ಥ ಮನ್ಸೂರ್ ಕೂಡ ವಿಡಿಯೋ ಮೂಲಕ ರೋಷನ್ ಬೇಗ್ ಹೆಸರನ್ನು ಹೊರಹಾಕಿದ್ದರು.‌ ಈ ಸಂಬಂಧ ಬೇಗ್ ಬಂಧಿಯಾಗಿದ್ದು, ಸಿಬಿಐ ತನಿಖೆ ಮುಂದುವರೆದಿದೆ.

ಜೈಲಲ್ಲಿ ವಾಕಿಂಗ್ ಮಾಡಿದ ರೋಷನ್ ಬೇಗ್
ವಿಚಾರಣಾಧೀನ ಖೈದಿಯಾಗಿರುವ ರೋಷನ್ ಬೇಗ್ ಮೊದಲನೇ ಬಾರಿ ಜೈಲಿನ ಉಪ್ಪಿಟ್ಟನ್ನು ಸೇವಿಸಿದ್ದಾರೆ. ತಡ ರಾತ್ರಿ ಒಂದು ಗಂಟೆಗೆ ನಿದ್ದೆಗೆ ಜಾರಿರುವ ಬೇಗ್ ಮುಂಜಾನೆ 6 ಗಂಟೆಯ ಹೊತ್ತಿಗೆ ಎದ್ದು, ಕ್ವಾರಂಟೈನ್ ಸೆಲ್​ನ ಒಳಗೆ ವಾಕಿಂಗ್ ಮಾಡಿದರು.

ಕೊರೊನಾ ನಿಯಮದ ಪ್ರಕಾರ ಕ್ವಾರಂಟೈನ್ ಆಗಿರುವುದರಿಂದ ರೋಷನ್ ಬೇಗ್ ಹೊರ ಬರುವಂತಿಲ್ಲ. ಹೀಗಾಗಿ ಸೇಲ್​ನ ಒಳಗೆ ವಾಕಿಂಗ್ ಮಾಡುವುದು ಅನಿವಾರ್ಯವಾಗಿದೆ. ಇನ್ನು ಬೇಗ್ ಸುಮಾರು 60 ವರ್ಷ ವಯಸ್ಸಾಗಿರುವ ಕಾರಣ ಆರೋಗ್ಯದ ದೃಷ್ಟಿಯಿಂದ ಜೈಲಿನಲ್ಲಿರುವ ಆಸ್ಪತ್ರೆಯಲ್ಲಿ ತನ್ನ ಆರೋಗ್ಯದ ಬಗ್ಗೆ ತಪಾಸಣೆ ನಡೆಸಬಹುದು.

Last Updated : Nov 23, 2020, 9:18 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.