ETV Bharat / state

ಬೆಂಗಳೂರಲ್ಲಿ ಪತ್ನಿ ಹತ್ಯೆಗೈದಿದ್ದ ಆರೋಪಿ ಅಕ್ರಮ ಬಾಂಗ್ಲಾದೇಶದ ವಲಸಿಗ: ಪೊಲೀಸರಿಂದ ಮಾಹಿತಿ - ಈಟಿವಿ ಭಾರತ ಕನ್ನಡ

ಪತ್ನಿಯನ್ನು ಕೊಲೆಗೈದು ಪರಾರಿಯಾಗಿದ್ದ ಪತಿ - ಆರೋಪಿ ಬಾಂಗ್ಲಾ ವಲಸಿಗ ಎಂಬುದು ತನಿಖೆಯಲ್ಲಿ ಬಯಲು - ಸುದ್ದಗುಂಟೆ ಪೊಲೀಸರಿಂದ ಆರೋಪಿ ಬಂಧನ

the-husband-killed-his-wife-in-bengaluru-accused-illegal-bangladesh-immigrant
ಪತ್ನಿಯನ್ನು ಹತ್ಯೆಗೈದಿದ್ದ ಆರೋಪಿ ಅಕ್ರಮ ಬಾಂಗ್ಲಾ ವಲಸಿಗ
author img

By

Published : Jan 29, 2023, 4:33 PM IST

Updated : Jan 29, 2023, 5:22 PM IST

ಬೆಂಗಳೂರಲ್ಲಿ ಪತ್ನಿ ಹತ್ಯೆಗೈದಿದ್ದ ಆರೋಪಿ ಅಕ್ರಮ ಬಾಂಗ್ಲಾದೇಶದ ವಲಸಿಗ: ಪೊಲೀಸರಿಂದ ಮಾಹಿತಿ

ಬೆಂಗಳೂರು : ಸುದ್ದಗುಂಟೆ ಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ನಾಝ್ ಎಂಬ ಮಹಿಳೆ ಕೊಲೆ ಪ್ರಕರಣದ ಆರೋಪಿ ಅಕ್ರಮ ಬಾಂಗ್ಲಾ ವಲಸಿಗ ಎಂಬುದು ಪೊಲೀಸ್ ತನಿಖೆ ವೇಳೆ ಬಯಲಾಗಿದೆ. ಜನವರಿ 16ರಂದು ತಾವರೆಕೆರೆಯ ಸುಭಾಷ್ ನಗರದ ಮನೆಯಲ್ಲಿ ಪತ್ನಿ ನಾಝ್ ಎಂಬಾಕೆಯನ್ನು ಹತ್ಯೆಗೈದು ಪರಾರಿಯಾಗಿದ್ದ ಆರೋಪಿ ನಾಸೀರ್ ಹೊಸೈನ್ ನನ್ನು ಸುದ್ದಗುಂಟೆಪಾಳ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ತನಿಖೆ ವೇಳೆ ಆರೋಪಿ ಭಾರತೀಯನೇ ಅಲ್ಲ ಎಂಬ ಆತಂಕಕಾರಿ ಮಾಹಿತಿ ಬಹಿರಂಗವಾಗಿದೆ.

ಆರೋಪಿ ಅಕ್ರಮ ಬಾಂಗ್ಲಾ ವಲಸಿಗ : ಢಾಕಾದಲ್ಲಿ ಹಾರ್ಡ್​ವೇರ್ ಇಂಜಿನಿಯರಿಂಗ್ ತರಬೇತಿ ಪಡೆದಿದ್ದ ಆರೋಪಿ ಪದವಿ ಪೂರ್ಣಗೊಳಿಸಿರಲಿಲ್ಲ. ಆದರೆ ಲ್ಯಾಪ್​ಟಾಪ್, ಮೊಬೈಲ್ ರಿಪೇರಿಯಲ್ಲಿ ಪರಿಣಿತಿ ಹೊಂದಿದ್ದ. ಅದರಲ್ಲೂ ಆ್ಯಪಲ್ ಕಂಪನಿಯ ಕಂಪ್ಯೂಟರ್​, ಲ್ಯಾಪ್​ಟಾಪ್ ರಿಪೇರಿಯಲ್ಲಿ ಹೆಚ್ಚಿನ ಪರಿಣಿತಿ ಹೊಂದಿದ್ದ.

ಪತ್ನಿಯ ಶೀಲ ಶಂಕಿಸಿ ಉಸಿರುಗಟ್ಟಿಸಿ ಕೊಲೆಗೈದ ಆರೋಪಿ : ಸಿಲಿಗುರಿ ಮೂಲಕ ಕೋಲ್ಕತ್ತಾಗೆ ಆಗಮಿಸಿದ್ದ ಆರೋಪಿ ಸುಳ್ಳು ದಾಖಲಾತಿ ಸೃಷ್ಟಿಸಿಕೊಂಡು ಮುಂಬೈ, ದೆಹಲಿ ಸೇರಿದಂತೆ ಗುರ್​ಗಾಂವ್ ನಲ್ಲಿ ತನ್ನದೇ ಮೊಬೈಲ್ ರಿಪೇರಿ ಅಂಗಡಿ ತೆರೆದು ವ್ಯವಹಾರ ಆರಂಭಿಸಿದ್ದ. 2019ರಲ್ಲಿ ಬೆಂಗಳೂರಿಗೆ ಬಂದು ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸಕ್ಕೆ ಸೇರಿ ತಿಂಗಳಿಗೆ 75 ಸಾವಿರ ಸಂಬಳವನ್ನು ಪಡೆಯುತ್ತಿದ್ದ. ಭಾರತದ ದೆಹಲಿ ವಿಳಾಸದಲ್ಲಿ ಆಧಾರ್, ಪಾನ್ ಕಾರ್ಡ್, ಕೋಲ್ಕತ್ತಾದ ವಿಳಾಸದಲ್ಲಿ ಪಾನ್ ಕಾರ್ಡ್ ಹಾಗೂ ಬೆಂಗಳೂರು ವಿಳಾಸದಲ್ಲಿ ವೋಟರ್ ಐಡಿ ಹೊಂದಿರುವ ಆರೋಪಿ ತನ್ನ ಬಗ್ಗೆ ಯಾವುದೇ ಮಾಹಿತಿ ನೀಡದೇ ನಾಝ್ ಎಂಬಾಕೆಯನ್ನು ವಿವಾಹವಾಗಿದ್ದ. 6 ತಿಂಗಳ ದಾಂಪತ್ಯ ಜೀವನದ ಬಳಿಕ ಪತ್ನಿಯ ಶೀಲ ಶಂಕಿಸಿದ್ದ ಆರೋಪಿ ಆಕೆಯನ್ನು ಉಸಿರುಗಟ್ಟಿಸಿ ಕೊಲೆಗೈದು ಪರಾರಿಯಾಗಿದ್ದ ಎಂದು ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ ಬಾಬಾ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಮಂಡ್ಯ: ಜಾಯಿಂಟ್ ವೀಲರ್​​​ಗೆ ತಲೆಕೂದಲು ಸಿಲುಕಿ ಬಾಲಕಿಗೆ ಗಂಭೀರ ಗಾಯ

ಕೊಲೆ ಮಾಡಿ ಬಾಂಗ್ಲಾಗೆ ಪರಾರಿಯಾಗಲು ಯತ್ನ : ಪತ್ನಿಯ ಹತ್ಯೆಯ ಬಳಿಕ ಆರೋಪಿಯು ಬೆಂಗಳೂರಿಂದ ದೆಹಲಿ, ದೆಹಲಿಯಿಂದ ಸಿಲಿಗುರಿಗೆ ಹೊರಟಿದ್ದು, ಅಲ್ಲಿಂದ ಬಾಂಗ್ಲಾ ಸೇರಲು ಸಿದ್ಧತೆ ನಡೆಸಿದ್ದ. ಪೊಲೀಸರ ದಿಕ್ಕು ತಪ್ಪಿಸಲು ತನ್ನದೇ ಹೆಸರಿನಲ್ಲಿ ಎರಡೆರಡು ವಿಮಾನದ ಟಿಕೆಟ್ ಬುಕ್ ಮಾಡಿದ್ದ ಆರೋಪಿ ಎರಡೆರಡು ರೂಂ‌ ಬುಕ್ ಮಾಡಿ ಒಂದು ಕಡೆ ಚೆಕ್ ಇನ್ ಮಾಡಿ ಮತ್ತೊಂದು ಕಡೆ ವಾಸ್ತವ್ಯ ಹೂಡುತ್ತಿದ್ದ. ಆದರೆ ಪೊಲೀಸರ ಬುದ್ಧಿವಂತಿಕೆ ಮಧ್ಯೆ ಆರೋಪಿಯ ತಂತ್ರಗಳು ನಡೆಯಲಿಲ್ಲ. ಪಶ್ಚಿಮ ಬಂಗಾಳದ ಏಳು ಜನ ಎಸ್ಪಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದ ಆಗ್ನೇಯ ವಿಭಾಗದ ಪೊಲೀಸರು ಕೊನೆಗೂ ಪಶ್ಚಿಮ ಬಂಗಾಳದ ಇಸ್ಲಾಂಪುರ ಬಳಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಡಿಸಿಪಿ ಸಿ.ಕೆ ಬಾಬಾ ತಿಳಿಸಿದ್ದಾರೆ.

ಇದನ್ನೂ ಓದಿ : ಧಾರವಾಡ: ಕ್ಷುಲ್ಲಕ‌ ಕಾರಣಕ್ಕೆ ಕುಟುಂಬದ ಮೇಲೆ ಹಲ್ಲೆ, ದೂರು ದಾಖಲು

Last Updated : Jan 29, 2023, 5:22 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.