ಬೆಂಗಳೂರು: ಕೊರೊನಾ ಹೆಸರಿನಲ್ಲಿ ಆಸ್ಪತ್ರೆಗಳಲ್ಲಿ ಹಗಲು ದರೋಡೆ ನಡಿತಿದೆಯಾ ಎಂಬ ಅನುಮಾನ ಸೃಷ್ಟಿಯಾಗಿದೆ. ಶವ ಕೊಡಿ ಅಂದ್ರೆ ಬಾಕಿ ಹಣ ಪಾವತಿ ಮಾಡುವಂತೆ ಆಸ್ಪತ್ರೆಗಳು ಪಟ್ಟು ಹಿಡಿದಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ನಗರದ ಖಾಸಗಿ ಆಸ್ಪತ್ರೆಯವರು ಒಂದೇ ವಾರಕ್ಕೆ ಆರು ಲಕ್ಷ ಬಿಲ್ ಕೇಳ್ತಿದ್ದಾರೆ ಅಂತ ರೋಗಿಯ ಕುಟುಂಬಸ್ಥರು ಆರೋಪಿಸಿದ್ದಾರೆ. ಸ್ಯೂಟ್ ವಾರ್ಡ್ ಅಂತ ಜನರಲ್ ವಾರ್ಡ್‌ನಲ್ಲಿ ಟ್ರಿಟ್ಮೆಂಟ್ ಕೊಟ್ಟು, ಬಿಲ್ ಕೇಳಿದ್ರೆ ಹಣ ಪಾವತಿಸಿ ಅಂತ ಮೃತನ ಕುಟುಂಬಕ್ಕೆ ಬೇಡಿಕೆ ಇಟ್ಟಿದ್ದಾರೆಂದು ಆರೋಪಿಸಲಾಗಿದೆ.
ಕಳೆದ ಶನಿವಾರ ಕೊರೊನಾ ಎಂಬ ಕಾರಣಕ್ಕೆ ಆಸ್ಪತ್ರೆಗೆ 55 ವರ್ಷದ ರಸೂಲ್ ಖಾನ್ ಎಂಬ ವ್ಯಕ್ತಿಯನ್ನ ದಾಖಲಿಸಲಾಗಿತ್ತು. ಪ್ರೈವೇಟ್ ಅಡ್ಮಿಟ್ ಮಾತ್ರ ಇರೋದಾಗಿ ಹೇಳಿ ಆಸ್ಪತ್ರೆ ಸಿಬ್ಬಂದಿ ರೋಗಿಯನ್ನ ಅಡ್ಮಿಟ್ ಮಾಡಿಕೊಂಡಿದ್ದರು. ಅಡ್ಮಿಟ್ ಮಾಡಿಕೊಳ್ಳುವ ವೇಳೆ ಮುಂಗಡವಾಗಿ 2.5 ಲಕ್ಷ ರೂ. ಹಣ ಪಡೆದು ಚಿಕಿತ್ಸೆ ನೀಡುತ್ತಿದ್ದರು.
ಆದರೆ, ಚಿಕಿತ್ಸೆ ಫಲಿಸದೇ ನಿನ್ನೆ ರಾತ್ರಿ ವ್ಯಕ್ತಿ ಮೃತಪಟ್ಟಿದ್ದಾರೆ. ಬಾಕಿಯಿರುವ 6.3ಲಕ್ಷ ರೂ. ಬಿಲ್ ಪಾವತಿಸಿ, ಬಳಿಕ ಮೃತದೇಹ ಕೊಡುತ್ತೇವೆಂದು ಆಸ್ಪತ್ರೆಯವರು ಪಟ್ಟು ಹಿಡಿದ್ದಿದ್ದಾರೆ ಎಂದು ಆರೋಪಿಸಲಾಗಿದೆ.