ETV Bharat / state

ರಾಜ್ಯದಲ್ಲಿ ಆರ್​ಎಸ್​ಎಸ್​ ತತ್ವ ಸಿದ್ಧಾಂತವನ್ನು ಸರ್ಕಾರ ಜಾರಿಗೆ ತರುತ್ತಿದೆ: ಪ್ರಿಯಾಂಕ್ ಆರೋಪ

author img

By

Published : Jan 21, 2023, 6:30 PM IST

ಬೆಂಗಳೂರು ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಶಿಕ್ಷಣ ಸಚಿವ ಬಿ ಕೆ ಚಂದ್ರಶೇಖರ್ ಹಾಗೂ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಮಾಧ್ಯಮಗೋಷ್ಟಿ- ಬಿಜೆಪಿಯವರಿಗೆ ಸಂವಿಧಾನ ಗೊತ್ತಿಲ್ಲ, ಸಂವಿಧಾನ ಬದಲಾವಣೆ ಬಗ್ಗೆ ಹೇಳ್ತಾರೆ- ಕೇಂದ್ರದ ಕಂಟ್ರೋಲ್​ದಲ್ಲಿ ಸಿಬಿಐ ಇಡಿ ಚುನಾವಣೆ ಆಯೋಗ ಎಂದು ಆರೋಪ

Priyank Kharge, BK Chandrasekhar
ಮಾಜಿ ಸಚಿವ ಪ್ರಿಯಾಂಕ್ ಖರ್ಗೆ, ಮಾಜಿ ಶಿಕ್ಷಣ ಸಚಿವ ಬಿ ಕೆ ಚಂದ್ರಶೇಖರ್

ಬೆಂಗಳೂರು: ರಾಜ್ಯದಲ್ಲಿ ಸಂವಿಧಾನ‌ ವಿರೋಧಿ ಚಟುವಟಿಕೆ ನಡೆಯುತ್ತಿವೆ. ಆರ್ ಎಸ್ ಎಸ್ ತತ್ವ ಸಿದ್ಧಾಂತಗಳನ್ನು ಜಾರಿಗೆ ತರಲಾಗ್ತಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಶಿಕ್ಷಣ ಸಚಿವ ಬಿ ಕೆ ಚಂದ್ರಶೇಖರ್ ಜತೆ ಕರೆದ ಜಂಟಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಸದನದಲ್ಲಿ ನಾನು ಇದನ್ನೂ ಪ್ರಸ್ತಾಪಿಸಿದ್ದೆ. ಶಾಸಕ ಸಿ.ಟಿ.ರವಿ ಇದನ್ನು ತಳ್ಳಿ ಹಾಕಿದ್ರು. ಈಗ ಇವರು ಮಾಡ್ತಿರೋದೇನು? ಎಂದು ಪ್ರಶ್ನಿಸಿದರು.

ರಾಮಲೀಲಾ ಮೈದಾನದಲ್ಲಿ ಯಾರು ಎಷ್ಟು ಹೋರಾಟ ಮಾಡಿದ್ರು? ಈ ಸರ್ಕಾರ ನಡೆಸ್ತಿರೋದು ಬಿಜೆಪಿಯಲ್ಲ. ಸರ್ಕಾರ ನಡೆಸ್ತಿರೋದು ಕೇಶವಕೃಪಾ. ಎಲ್ಲೆಲ್ಲಿ ಬಿಜೆಪಿ ಸರ್ಕಾರಗಳಿವೆಯೋ ಅಲ್ಲಿ ಗವರ್ನರ್ ಬಿಜೆಪಿ ಅಣತಿಯಂತೆ ನಡೆದುಕೊಳ್ತಿದ್ದಾರೆ. ಸಂವಿಧಾನದ ಬಗ್ಗೆ ಹಿಂದೆಯೂ ಗೌರವ ಇರಲಿಲ್ಲ, ಈಗಲೂ ಬಿಜೆಪಿಯವರಿಗೆ ಗೌರವ ಇಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದರು.

ಕಟೀಲ್​ಗೆ ತಿರುಗೇಟು: ಕಾಂಗ್ರೆಸ್ ಸಭೆಯಲ್ಲಿ ಚಪ್ಪಲಿ ಎಸೆದಾಡ್ತಾರೆಂಬ ಕಟೀಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಯತ್ನಾಳರ ಬಗ್ಗೆ ಯಾಕೆ ಸುಮ್ಮನಿದ್ದಾರೆ. ಸಚಿವರೊಬ್ಬರನ್ನು ಪಿಂಪ್ ಅಂತ ಹೇಳ್ತಾರೆ. ಸಚಿವರು ಶಾಸಕರ ಡ್ರೈವರ್ ಮರ್ಡರ್ ಮಾಡಿದ್ರು ಅಂತಾರೆ. ಈಶ್ವರಪ್ಪ ಪಕ್ಷದ ವಿರುದ್ಧವೇ ಮಾತನಾಡ್ತಿದ್ರು. ಎಲ್ಲಿ ಹೋಗಿತ್ತು ಕಟೀಲರ ಶಿಸ್ತುಕ್ರಮ. ಬಿಎಸ್ ವೈ ಮುಕ್ತ ಬಿಜೆಪಿ ಅಂತ ಹೇಳಿದ್ರು. ನಿಮ್ಮ ಪಕ್ಷ ಒಡೆದು ಹೋಗ್ತಿದೆ. ರಾಜ್ಯ ಮಟ್ಟದಲ್ಲಿ ನಿಮ್ಮ ನಾಯಕತ್ವದ ಕೊರತೆಯಿದೆ. ಪಾಪ ಕೇಂದ್ರದವರು ಬಂದು ಹೋಗ್ತಿದ್ದಾರೆ. ಜನರಿಗೆ ಸರಿಯಾದ ಆಡಳಿತ ಕೊಡಿ. ಕಾಂಗ್ರೆಸ್ ಒಳಜಗಳ ನೀವೇಕೆ ಮಾತನಾಡ್ತೀರ ಎಂದು ಕೇಳಿದರು.

ಮಾಜಿ ಸಚಿವ ಬಿ.ಕೆ.ಚಂದ್ರಶೇಖರ್ ಮಾತನಾಡಿ, ಪಿಎಂ ಕೇರ್ ನಲ್ಲಿ ಪಾರದರ್ಶಕತೆ ಇದ್ಯಾ? ನೋಟ್ ಬ್ಯಾನ್ ಕತ್ತಲಲ್ಲಿ ಮಾಡ್ತಾರೆ. ಜಡ್ಜ್ ನೇಮಕ ಪಾರದರ್ಶಕವಾಗಿಲ್ಲವಂತೆ. ಕಿರಣ್ ರಿಜಿಜ್ ಇಂಥ ಆರೋಪ ಮಾಡ್ತಾರೆ, ನ್ಯಾಯಾಂಗವನ್ನೂ ಒಂದು ಇಲಾಖೆ ಮಾಡಿಬಿಡ್ತಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಬಿಜೆಪಿಯವರಿಗೆ ಸಂವಿಧಾನ ಗೊತ್ತಿಲ್ಲ: ಪೊಲೀಸರನ್ನು ಗವರ್ನರ್ ಮಾಡಬಾರದು. ಕಿರಣ್ ಬೇಡಿಯನ್ನೂ ಪುದುಚೇರಿಗೆ ಮಾಡಿದ್ರು. ಇಂತವರನ್ನು ಮಾಡಿದ್ರೆ ಎಲ್ಲಿ ಆಗುತ್ತೆ. ಪತ್ರಕರ್ತರನ್ನೇ ಗೆಟೌಟ್ ಆಂತಾರೆ. ನಮ್ಮ ಸಂವಿಧಾನ ಅತ್ಯುತ್ತಮವಾದುದು. ಅಳಿವು, ಉಳಿವಿನ ಪ್ರಶ್ನೆ ಎದುರಾಗಿದೆ. ಬಿಜೆಪಿಯವರಿಗೆ ನಮ್ಮ ಸಂವಿಧಾನ ಇಲ್ಲ. ಸಂವಿಧಾನ ಬದಲಾವಣೆ ಬಗ್ಗೆ ಹೇಳ್ತಾನೆ ಇದ್ದಾರೆ. ಒಬ್ಬ ಮುಸ್ಲಿಂ ಹಿಂದು ಹುಡುಗಿ ಜತೆಗೆ ಇದ್ದರೆ ಆಗಲ್ಲ. ಅಂತವನ ಕೈ ಕತ್ತರಿಸಬೇಕು ಅಂತಿದ್ರು ಮುರುಳಿಮನೋಹರ್ ಜೋಶಿ. ನಮ್ಮ ಸಂವಿಧಾನ ಪಾಶ್ಚಿಮಾತ್ಯ ಸಂಸ್ಕೃತಿ ಅಂತಾರೆ. ಬ್ರಿಟನ್ ಸಂವಿಧಾನಕ್ಕೆ ಫೆಡರಲಿಸಂ ಇಲ್ಲ. ಅಲ್ಲಿ ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗಕ್ಕೆ ಬೆಲೆ ಇಲ್ಲ. ನಮ್ಮಲ್ಲಿ ಎಸ್ಸಿ ಎಸ್ಟಿಗಳಿಗೆ ರಿಸರ್ವೇಶನ್ ಇದೆ. ಬ್ರಿಟನ್ ನಲ್ಲಿ ಅಂತಹ ಸಂಸ್ಕೃತಿ ಇಲ್ಲ ಎಂದರು.

ಕೇಂದ್ರ ಕಂಟ್ರೋಲ್​ದಲ್ಲಿ​ ಸಿಬಿಐ ಇಡಿ ಚುನಾವಣೆ ಆಯೋಗ : ಉಪರಾಷ್ಟ್ರಪತಿ ಜಗದೀಶ್ ಧನಕರ್ ಹೇಳಿಕೆ ಸರಿಯಲ್ಲ. ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಮಾತು ಕೂಡ ಸರಿಯಲ್ಲ. ಸಂಸತ್ ಸುಪ್ರೀಂ ಪವರ್ ಅಂತ ಹೇಳೋದು ಸರಿಯಲ್ಲ. ಧನಕರ್ ಲಾಯರ್ ಆಗಿದ್ದವರು. ನಮ್ಮ ಸಂವಿಧಾನದಲ್ಲಿ ಸಪ್ರೇಷನ್ ಪವರ್ ಇದೆ. ಸಂವಿಧಾನ ಬಿಟ್ಟು ಏನೂ ಮಾಡಲಾಗಲ್ಲ. ಆದರೆ ಇವರು ಪರಮಾಧಿಕಾರ ಸಂಸತ್ತಿಗಿದೆ ಅಂತಾರೆ. ಇದು ಎಷ್ಟರ ಮಟ್ಟಿಗೆ ಸರಿ? ಸಿಬಿಐ, ಚುನಾವಣಾ ಆಯೋಗ,ಇಡಿ ಎಲ್ಲವೂ ಕಂಟ್ರೋಲ್​ನಲ್ಲಿ ಇವೆ. ಕೇಂದ್ರ ಸರ್ಕಾರ ಕಂಟ್ರೋಲ್ ಗೆ ತೆಗೆದುಕೊಂಡಿದ್ದಾರೆ. ನ್ಯಾಯಾಂಗ ಒಂದು ಅವರಿಗೆ ಅಡ್ಡವಾಗಿತ್ತು. ಈಗ ನ್ಯಾಯಾಂಗವನ್ನೂ ಹಿಡಿತಕ್ಕೆ ಪಡೆಯಲು ನೋಡ್ತಿದ್ದಾರೆ ಎಂದು ಕೇಂದ್ರದ ನಡೆಗೆ ಬಿ.ಕೆ. ಚಂದ್ರಶೇಖರ್ ಅಸಮಾಧಾನ ಹೊರಹಾಕಿದರು.

ಅಂಬೇಡ್ಕರ್ ಹೆಸರನ್ನೇ ತೆಗೆದುಹಾಕ್ತಾರೆ. ಪೆರಿಯಾರ್ ಹೆಸರನ್ನ ತೆಗೆದುಹಾಕ್ತಾರೆ. ಚರಿತ್ರೆಯಲ್ಲಿ ಎಲ್ಲೂ ಗವರ್ನರ್ ವಾಕ್ ಔಟ್ ಮಾಡಿರಲಿಲ್ಲ. ರಾಷ್ಟ್ರಗೀತೆ ಹಾಡುವಾಗಲೇ ಎದ್ದು ಹೋಗ್ತಾರೆ. ಬೇರೆಯವರು ಆಗಿದ್ದರೆ ಎಫ್ ಐಆರ್ ಹಾಕ್ತಿದ್ರು. ಇವತ್ತು ಕೇಂದ್ರ ಹೇಳಿದಂತೆ ಇವರು ಕೇಳ್ತಾರೆ. ಕೇಂದ್ರ ಇಷ್ಟ ಬಂದ ಕಡೆ ಇವರನ್ನು ಅಪಾಯ್ಟ್ ಮೆಂಟ್ ಮಾಡ್ತಾರೆ. ಇಂತಹ ರಾಜ್ಯಪಾಲರ ಬಗ್ಗೆ ಪ್ರಧಾನಿ‌ ಚಕಾರವೆತ್ತಲ್ಲ ಎನ್ನುವ ಮೂಲಕ ತಮಿಳುನಾಡು ಗವರ್ನರ್​ ನಡೆ ಬಗ್ಗೆ ಚಂದ್ರಶೇಖರ್ ಆಕ್ಷೇಪ ವ್ಯಕ್ತಪಡಿಸಿದರು.

ಇದನ್ನೂಓದಿ:ಆಮ್​ ಆದ್ಮಿ ಪಕ್ಷಕ್ಕೆ ನಟಿ ಸಂಭಾವನಾ ಸೇಠ್ ಸೇರ್ಪಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.