ETV Bharat / state

ಖಾಸಗಿ ಶಾಲೆಯವರು ಧನದಾಹಿಗಳಲ್ಲ: ಲೋಕೇಶ್ ತಾಳಿಕಟ್ಟೆ

ಖಾಸಗಿ ಅನುದಾನರಹಿತ ಶಾಲೆಗಳಿಗೆ ಶಾಲಾ ಆರಂಭದ ಬಗ್ಗೆ ಸರ್ಕಾರ ಸ್ಪಷ್ಟ ನಿರ್ದೇಶನ ನೀಡಿಲ್ಲ. ಅಲ್ಲದೇ 2020-21ನೇ ಸಾಲಿನ‌ ವಾರ್ಷಿಕ ಪಠ್ಯಕ್ರಮ ಮತ್ತು ವೇಳಾಪಟ್ಟಿಯನ್ನ‌ ನಿಗದಿಪಡಿಸಿಲ್ಲ. ಶುಲ್ಕ ಪಡೆಯುವ ಬಗ್ಗೆಯೂ ಸ್ಪಷ್ಟತೆ ನೀಡುತ್ತಿಲ್ಲ ಎಂದು ಅನುದಾರಹಿತ ಖಾಸಗಿ ಶಾಲೆಗಳ ಸಂಘದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಹೇಳಿದ್ದಾರೆ.

press meet
ಸುದ್ದಿಗೋಷ್ಟಿ
author img

By

Published : Oct 9, 2020, 3:58 PM IST

ಬೆಂಗಳೂರು: ಕೋವಿಡ್ -19 ಸಂಕಷ್ಟದ ಸಮಯದಲ್ಲಿ ರಾಜ್ಯ ಸರ್ಕಾರವು, ಮಾನ್ಯತೆ ಪಡೆದ ಅನುದಾನರಹಿತ ಖಾಸಗಿ ಶಾಲೆಗಳನ್ನು ಕಡೆಗಣಿಸುತ್ತಿದೆ. ಸರ್ಕಾರದ ಧೋರಣೆಯಿಂದ ಸಾವಿರಾರು ಖಾಸಗಿ ಶಾಲೆಗಳು ಅಸ್ತಿತ್ವವನ್ನು ಕಳೆದುಕೊಂಡು ಸಂಪೂರ್ಣ ಮುಚ್ಚಲ್ಪಟ್ಟಿವೆ ಎಂದು ಖಾಸಗಿ ಅನುದಾನ ರಹಿತ ಶಾಲೆಗಳ ಸಂಘದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಹೇಳಿದರು.

ಇಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದಿಂದ ಅನ್ಯಾಯವಾಗಿದ್ದು, ವಿದ್ಯಾಗಮ ಹೆಸರಿನಲ್ಲಿ ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಆಗಿದೆ. ಸರ್ಕಾರದ ನಿರ್ಧಾರಗಳಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ದಯನೀಯ ಸ್ಥಿತಿಗೆ ಬಂದಿವೆ ಎಂದರು.

ಲೋಕೇಶ್ ತಾಳಿಕಟ್ಟೆ ಪ್ರತಿಕ್ರಿಯೆ

ಖಾಸಗಿ ಅನುದಾನರಹಿತ ಶಾಲೆಗಳಿಗೆ ಶಾಲಾ ಆರಂಭದ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಿಲ್ಲ. ಅಲ್ಲದೇ 2020-21ನೇ ಸಾಲಿನ‌ ವಾರ್ಷಿಕ ಪಠ್ಯಕ್ರಮ ಮತ್ತು ವೇಳಾಪಟ್ಟಿಯನ್ನ‌ ನಿಗದಿಪಡಿಸಿಲ್ಲ. ಶುಲ್ಕ ಪಡೆಯುವ ಬಗ್ಗೆಯೂ ಸರ್ಕಾರ ಸ್ಪಷ್ಟನೆ ನೀಡುತ್ತಿಲ್ಲ. ಆದರೆ ಪಠ್ಯಪುಸ್ತಕಗಳ ಖರೀದಿಗೆ ಖಾಸಗಿ ಶಾಲೆಗಳ ಮೇಲೆ ಒತ್ತಡ ಹೇರುತ್ತಿದೆ. ಜೊತೆಗೆ ದಾಖಲಾತಿ ಆರಂಭವಾಗದಿದ್ದರೂ ಪೂರ್ಣ ವೇತನ ನೀಡಲು ನಿರ್ದೇಶನ‌ ನೀಡುವಂತಿದೆ ಸೂಚಿಸಿದೆ ಎಂದು ತಿಳಿಸಿದರು.

ಮತ್ತೊಂದೆಡೆ ರಾಜ್ಯ ಸರ್ಕಾರದಿಂದ ಆರ್​ಟಿಇ ಬಾಕಿ ಶುಲ್ಕವನ್ನು ಮಂಜೂರು ಮಾಡಿಲ್ಲ. ವಿದ್ಯಾಗಮ ಯೋಜನೆ ಅಡಿಯಲ್ಲಿ ಖಾಸಗಿ ಮತ್ತು ಸರ್ಕಾರಿ ಶಾಲೆಗಳು ತಾರತಮ್ಯ ಮಾಡಲಾಗುತ್ತದೆ. ವಿದ್ಯಾಗಮ ಹೆಸರಲ್ಲಿ ವಾಮಮಾರ್ಗ ಅನುಸರಿಸಿ ವರ್ಗಾವಣೆ ಪ್ರಮಾಣ ಪತ್ರಗಳನ್ನು ಪಡೆಯಲಾಗುತ್ತಿದೆ ಎಂದು ಲೋಕೇಶ್​ ಆರೋಪಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.