ETV Bharat / state

ಕೂಡಲೇ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ, ಸುಪ್ರೀಂ ಮುಂದೆ ಮರುಪರಿಶೀಲನಾ ಅರ್ಜಿ ಸಲ್ಲಿಸಲು ಸರ್ಕಾರದ ನಿರ್ಧಾರ - ರಾಜ್ಯದ ಲೀಗಲ್ ಟೀಂಗೆ ಮಾಹಿತಿ

ಕಾವೇರಿ ನೀರಿನ ವಿಚಾರವಾಗಿ ಎದುರಾಗಿರುವ ಸಂಕಷ್ಟ ನಿವಾರಣೆ ಬಗ್ಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಅವರು ಹೈಕೋರ್ಟ್​ ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಮಾಜಿ ಅಡ್ವೋಕೇಟ್​ ಜನರಲ್​ ಜತೆ ಸುದೀರ್ಘವಾಗಿ ಚರ್ಚೆ ನಡೆಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್

author img

By ETV Bharat Karnataka Team

Published : Sep 29, 2023, 9:07 PM IST

ಬೆಂಗಳೂರು : ಕಾವೇರಿ ನೀರು ಬಿಡುಗಡೆ ಪ್ರಶ್ನಿಸಿ ಕೂಡಲೇ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ಸುಪ್ರೀಂ ಕೋರ್ಟ್ ಮುಂದೆ ಮರುಪರಿಶೀಲನಾ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ತಮಿಳುನಾಡಿಗೆ 3000 ಕ್ಯೂಸೆಕ್ ನೀರು ಬಿಡುಗಡೆ ಮಾಡಲು ಕಾವೇರಿ ನೀರು ನಿರ್ವಹಣೆ ಪ್ರಾಧಿಕಾರವು (CWMA) ಆದೇಶಿಸಿರುವ ಹಿನ್ನೆಲೆಯಲ್ಲಿ ಎದುರಾಗಿರುವ ಸಂಕಷ್ಟದ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಹಾಗೂ ಜಲ ಸಂಪನ್ಮೂಲ ಸಚಿವರಾದ ಡಿ. ಕೆ ಶಿವಕುಮಾರ್ ಅವರು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಮಾಜಿ ಅಡ್ವೊಕೇಟ್ ಜನರಲ್​ಗಳ ಜತೆ ಸುದೀರ್ಘ ಚರ್ಚೆ ನಡೆಸಿದರು.

ಬಳಿಕ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಿಎಂ, ನಿವೃತ್ತ ನ್ಯಾಯಮೂರ್ತಿಗಳು ಅವರ ಅನುಭವದಿಂದ ಕೆಲ ಸಲಹೆ ನೀಡಿದ್ದಾರೆ. ಅದರಂತೆ ಮೊದಲಿಗೆ ಕಾವೇರಿ ನೀರು ಬಿಡುಗಡೆ ಪ್ರಶ್ನಿಸಿ ಕೂಡಲೇ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ಸುಪ್ರೀಂ ಕೋರ್ಟ್ ಮುಂದೆ ಮರುಪರಿಶೀಲನಾ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕೂಡಲೇ ಮರುಪರಿಶೀಲನಾ ಅರ್ಜಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಪ್ರಾಧಿಕಾರದ ಆದೇಶದಂತೆ 3000 ಕ್ಯುಸೆಕ್ಸ್ ನೀರು ಬಿಡುತ್ತೀರಾ? ಎಂಬ ಪ್ರಶ್ನೆಗೆ ಉತ್ತರ ನೀಡಲು ನಿರಾಕರಿಸಿದ ಸಿಎಂ ಸಿದ್ದರಾಮಯ್ಯ, ನೀರು ಬಿಡುಗಡೆ ಆದೇಶ ಪ್ರಶ್ನಿಸಿ ಕೂಡಲೇ ಪ್ರಾಧಿಕಾರ ಹಾಗೂ ಸುಪ್ರೀಂ ಕೋರ್ಟ್ ಮುಂದೆ ಅರ್ಜಿ ಸಲ್ಲಿಸುತ್ತೇವೆ ಎಂದಷ್ಟೇ ಹೇಳಿದರು.

ಪರಿಣಿತರ ಸಲಹಾ ಸಮಿತಿ ರಚನೆಗೆ ಸಲಹೆ: ಸಭೆಯಲ್ಲಿ ನಿವೃತ್ತ ನ್ಯಾಯಮೂರ್ತಿಗಳು ರಾಜ್ಯದ ವಿವಿಧ ನೀರಾವರಿ ವಿವಾದಗಳ ಸಂಬಂಧ ಸಲಹಾ ಸಮಿತಿ ಮಾಡುವುದು ಒಳ್ಳೆಯದು ಎಂಬ ಸಲಹೆ ನೀಡಿದ್ದಾರೆ. ಮಹದಾಯಿ, ಕಾವೇರಿ ಸೇರಿ ಇಡೀ ನೀರಾವರಿ ವಿವಾದಗಳ ಸಂಬಂಧ ಸಲಹಾ ಸಮಿತಿ ರಚನೆಗೆ ಸಲಹೆ ನೀಡಿದ್ದಾರೆ. ಸರ್ಕಾರಕ್ಕೆ ಸಲಹೆ ನೀಡಲು ಪರಿಣಿತರ ಸಮಿತಿ ಮಾಡಲು ಹೇಳಿದ್ದಾರೆ ಎಂದು ತಿಳಿಸಿದರು.

ಅಂತರ ರಾಜ್ಯ ಜಲ ವಿವಾದಗಳ ಸಂಬಂಧ ಸರ್ಕಾರಕ್ಕೆ ಸಲಹೆ ಸೂಚನೆ ನೀಡಲು, ರಾಜ್ಯದ ಲೀಗಲ್ ಟೀಂಗೆ ಮಾಹಿತಿ ನೀಡಲು ಸಲಹಾ ಸಮಿತಿ ರಚಿಸಲು ಸಲಹೆ ನೀಡಿದ್ದಾರೆ. ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ 3,000 ಕ್ಯೂಸೆಕ್​​ ನೀರು ಬಿಡಲು ಹೇಳಿದೆ. ಕಾವೇರಿ ನೀರು ನಿಯಂತ್ರಣಾ ಸಮಿತಿ ಹಾಗೂ ನಿರ್ವಹಣಾ ಪ್ರಾಧಿಕಾರದ ಮುಂದೆ ನಮ್ಮ ಪ್ರತಿನಿಧಿಗಳು ನೀರು ಇಲ್ಲ. ಕೊಡಲು ಆಗುವುದಿಲ್ಲ ಎಂದು ವಾದ ಮಂಡಿಸಿದ್ದಾರೆ. ಆದರೂ ಕೂಡ ನೀವು ಹಳೆ ಬಾಕಿ ಕೊಡಬೇಕು ಎಂದು ಆದೇಶ ನೀಡಿದ್ದಾರೆ ಎಂದು ಸಿಎಂ ತಿಳಿಸಿದರು.

ಹೀಗಾಗಿ ಕೂಡಲೇ ಪ್ರಾಧಿಕಾರ ಮುಂದೆ ಮರುಪರಿಶೀಲನಾ ಅರ್ಜಿ ಹಾಕಲು ಹಾಗೂ ಸುಪ್ರೀಂ ಕೋರ್ಟ್ ಮುಂದೆಯೂ ರಿವಿಜನ್ ಪಿಟಿಷನ್ ಹಾಕಲು ಸಲಹೆ ನೀಡಿದ್ದಾರೆ ಎಂದರು.

ಮೇಕೆದಾಟು ಬಗ್ಗೆ ಬಲವಾಗಿ ವಾದ ಮಂಡಿಸಿ: ಸಭೆಯಲ್ಲಿ ಮೇಕೆದಾಟು ಯೋಜನೆ ಬಗ್ಗೆ ಸುಪ್ರೀಂ ಕೋರ್ಟ್ ಮುಂದೆ ಪ್ರಸ್ತಾಪಿಸುವಂತೆ ಕಾನೂನು ತಜ್ಞರು ಸಲಹೆ ನೀಡಿದ್ದಾರೆ. ಈ ಬಗ್ಗೆ ಸುಪ್ರೀಂ ಕೋರ್ಟ್​ಗೆ ಮನವರಿಕೆ ಮಾಡುವಂತೆ ಸೂಚಿಸಿದರು. ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಏನು ತೊಂದರೆ ಆಗಲ್ಲ‌. ಅವರು ರಾಜಕೀಯ ಉದ್ದೇಶದಿಂದ ಆಕ್ಷೇಪಿಸುತ್ತಿದ್ದಾರೆ. ಬಲವಾಗಿ ವಾದ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಕಳೆದ ಬಾರಿ ತಮಿಳುನಾಡಿಗೆ ಸುಮಾರು 655 ಟಿಂಎಸಿ ನೀರು ಹರಿದು ಹೋಗಿದೆ. ಮೇಕೆದಾಟು ಇದ್ದಿದ್ದರೆ 67 ಟಿಎಂಸಿ ಸಂಗ್ರಹಿಸಬಹುದಿತ್ತು. ಸಂಕಷ್ಟ ಪರಿಸ್ಥಿತಿ ಬಂದಾಗ, ಮಳೆ ಬಂದಾಗ ಅವರಿಗೆ ನೀರು ಬಿಡಬೇಕಾಗುತ್ತದೆ ಎಂದು ವಿವರಿಸಿದರು.

ಕೂಡಲೇ ರಿವಿಜನ್ ಪಿಟಿಷನ್ ಹಾಕುತ್ತೇವೆ. ನಮಗೆ ನೀರು ಕೊಡಲು ಆಗಲ್ಲ ಎಂದು ಹೇಳಿ ರಿವಿಜನ್ ಪಿಟಿಷನ್ ಹಾಕುತ್ತೇವೆ. ಮೊದಲು ಪ್ರಾಧಿಕಾರದ ಮುಂದೆ ಪಿಟಿಷನ್ ಹಾಕುತ್ತೇವೆ. ಬಳಿಕ ಸುಪ್ರೀಂ ಕೋರ್ಟ್ ಮುಂದೆ ಅರ್ಜಿ ಸಲ್ಲಿಸುತ್ತೇವೆ ಎಂದರು.

ಐತಿಹಾಸಿಕ ಸಲಹೆ ನೀಡಿದ್ದಾರೆ : ಇದೇ ವೇಳೆ ಮಾತನಾಡಿದ ಡಿಸಿಎಂ ಡಿ ಕೆ ಶಿವಕುಮಾರ್, ಮುಕ್ತವಾಗಿ ನಿವೃತ್ತ ನ್ಯಾಯಮೂರ್ತಿಗಳು ಅವರ ಅನುಭವ ಹೇಳಿದ್ದಾರೆ. ಇತಿಹಾಸ ಪುಟಕ್ಕೆ ಹೋಗುವ ಅನೇಕ ಸಲಹೆ ನೀಡಿದ್ದಾರೆ. ಅನೇಕ ಸಲಹೆ ನೀಡಿದ್ದಾರೆ. ರಾಜ್ಯದ ಹಿತದೃಷ್ಟಿಯಿಂದ ಸಲಹೆ ನೀಡಿದ್ದಾರೆ ಎಂದರು.

ಗೃಹಕಚೇರಿ ಕೃಷ್ಣಾದಲ್ಲಿ ನಡೆದ ಸಭೆಗೆ ನಿವೃತ್ತ ನ್ಯಾಯಮೂರ್ತಿಗಳಾದ ಎಂ. ಎನ್ ವೆಂಕಟಾಚಲಯ್ಯ, ಶಿವರಾಜ ಪಾಟೀಲ್, ವಿ ಲ ಗೋಪಾಲಗೌಡ, ಆರ್. ವಿ ರವೀಂದ್ರನ್, ಪಿ. ವಿಶ್ವನಾಥಶೆಟ್ಟಿ, ಎ. ಎನ್ ವೇಣುಗೋಪಾಲಗೌಡ, ಕಾನೂನು ಸಚಿವರಾದ ಸಚಿವ ಎಚ್. ಕೆ ಪಾಟೀಲ್, ಸಿಎಂ ಕಾನೂನು ಸಲಹೆಗಾರ ಎ. ಎಸ್ ಪೊನ್ನಣ್ಣ, ರಾಜಕೀಯ ಕಾರ್ಯದರ್ಶಿ ಗೋವಿಂದರಾಜ್, ರಾಜಕೀಯ ಸಲಹೆಗಾರರಾದ ನಸೀರ್ ಅಹ್ಮದ್, ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಮಾಜಿ ಅಡ್ವೋಕೇಟ್ ಜನರಲ್​ಗಳಾದ ಬಿ. ವಿ ಆಚಾರ್ಯ, ಮಧುಸೂದನ್ ನಾಯಕ್, ವಿಜಯಶಂಕರ್, ಉದಯ್ ಹೊಳ್ಳ, ಪ್ರೊ. ರವಿವರ್ಮಕುಮಾರ್, ಪ್ರಭುಲಿಂಗ ನಾವದಗಿ ಪಾಲ್ಗೊಂಡಿದ್ದರು.

ಕಾನೂನು ತಜ್ಞರು ನೀಡಿದ ಸಲಹೆ ಏನು?: ಸಭೆಯಲ್ಲಿ ಕಾನೂನು ತಜ್ಞರು ಕರ್ನಾಟಕದ ಹಿತದೃಷ್ಟಿಯಿಂದ ವಿವಿಧ ಸಲಹೆಗಳನ್ನು ನೀಡಿದ್ದಾರೆ. ಪ್ರಮುಖವಾಗಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ನಮ್ಮಲ್ಲಿನ ಸಂಕಷ್ಟದ ಬಗ್ಗೆ ವಾಸ್ತವಾಂಶದ ಬಗ್ಗೆ ಬಲವಾಗಿ ವಾದಿಸಬೇಕು. ಬರ ಪರಿಸ್ಥಿತಿ, ಮಳೆ ಕೊರತೆಯ ನಿಖರ ಅಂಕಿ - ಅಂಶದೊಂದಿಗೆ ವಾದ ಮಂಡಿಸಬೇಕು ಎಂದು ಸಲಹೆ ನೀಡಿದ್ದಾರೆ. ಜೊತೆಗೆ ಒಳಹರಿವು, ಹೊರ ಹರಿವು ಬಗ್ಗೆ ಮಾಧ್ಯಮಗಳ ಮುಂದೆ ಹೇಳಿಕೆಗಳನ್ನು ನೀಡದಂತೆ ಕೆಲವರು ಸಲಹೆ ನೀಡಿದ್ದಾರೆ. ತಜ್ಞರು ನೀಡಿದ ಸಲಹೆಗಳನ್ನು ಪರಿಗಣಿಸಿ ಮುಂದಿನ ತೀರ್ಮಾನ ಕೈಗೊಳ್ಳಲು ಸರ್ಕಾರ ಮುಂದಾಗಿದೆ.

ಇದನ್ನೂ ಓದಿ: ಕಾವೇರಿ ವಿವಾದ: ಸುಪ್ರೀಂ ಕೋರ್ಟ್​ನ ನಿವೃತ್ತ ನ್ಯಾಯಮೂರ್ತಿಗಳೊಂದಿಗೆ ಸಭೆ ನಡೆಸುತ್ತೇನೆ: ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.