ಬೆಂಗಳೂರು: ಇಂದು ಮಧ್ಯಾಹ್ನದ ಹೊತ್ತಿಗೆ ನಿರ್ಮಾಪಕ ರಾಮು ಅವರ ಪಾರ್ಥಿವ ಶರೀರವನ್ನು ಅವರ ಹುಟ್ಟೂರಿಗೆ ತಂದು ಅಲ್ಲಿ ಅಂತ್ಯ ಸಂಸ್ಕಾರ ಮಾಡಲು ಕುಟುಂಬ ಸಿದ್ಧತೆ ನಡೆಸಿದೆ.
ನಟಿ ಮಾಲಾಶ್ರೀ ಪತಿ, ನಿರ್ಮಾಪಕ ರಾಮುಗೆ ಕೊರೊನಾ ತಗುಲಿತ್ತು. ರಾಮು ಆರೋಗ್ಯದಲ್ಲಿ ಏರುಪೇರು ಉಂಟಾದ ಹಿನ್ನೆಲೆ ಮೂರು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಂಜೆ ಮೃತಪಟ್ಟಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಮೂರು ದಶಕಗಳ ಕಾಲ ಸಿನಿಮಾಗಳನ್ನು ನಿರ್ಮಾಣ ಮಾಡಿ ಕೋಟಿ ನಿರ್ಮಾಪಕ ಎಂದೇ ಕರೆಯಿಸಿಕೊಂಡಿರುವ ರಾಮು ಅವರನ್ನು ಕಳೆದುಕೊಂಡ ದುಖಃದಲ್ಲಿ ಪತ್ನಿ ಮಾಲಾಶ್ರೀ ಸೇರಿದಂತೆ ಇಡೀ ಕುಟುಂಬವಿದೆ.
![dead body of ramu](https://etvbharatimages.akamaized.net/etvbharat/prod-images/11552107_dftyfrh.jpg)
ಇದನ್ನೂ ಓದಿ: ಕೊರೊನಾಗೆ ಬಲಿಯಾದ 'ಕೋಟಿ' ನಿರ್ಮಾಪಕ, ಮಾಲಾಶ್ರೀ ಪತಿ ರಾಮು
ಇಂದು ರಾಮು ಅವರ ಹುಟ್ಟೂರು ಆದ ಕುಣಿಗಲ್ ಸಮೀಪದಲ್ಲಿರುವ ಕೊಡಿಗೆಹಳ್ಳಿಯ ತೋಟದಲ್ಲಿ ಅವರ ಅಂತ್ಯ ಸಂಸ್ಕಾರ ನೆರವೇರಿಸಲು ಕುಟುಂಬ ವರ್ಗ ತೀರ್ಮಾನಿಸಿದೆ.