ಬೆಂಗಳೂರು: ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ವಿರುದ್ಧ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಜಾಮೀನು ರಹಿತ ವಾರಂಟ್ ಹೊರಡಿಸಿ ಆದೇಶ ನೀಡಿದೆ.
ಬಾಗಲಕೋಟೆ ಜಿಲ್ಲೆಯ ಇಳಕಲ್ ಪೊಲೀಸ್ ಠಾಣೆಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಕೇಸ್ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆದಾಗ ಕಾಶಪ್ಪನವರ ವಕೀಲ ಶೌಚಲಯಕ್ಕೆ ಹೋಗಿದ್ದರು. ಈ ಕಾರಣಕ್ಕೆ ಮಧ್ಯಾಹ್ನ ವಿಚಾರಣೆಗೆ ಹಾಜರಾಗುವಂತೆ ರಾಮಚಂದ್ರ ಡಿ. ಹುದ್ದಾರ ಸೂಚಿಸಿದ್ರು.
ಮತ್ತೆ ಮಧ್ಯಾಹ್ನ ವಿಚಾರಣೆ ಬಂದಾಗ ಆರೋಪಿ ಪರ ವಕೀಲರು ಗೈರಾಗಿದ್ರು. ಹೀಗಾಗಿ ವಿಚಾರಣೆಯನ್ನ ಮೂರಕ್ಕೆ ಮೂಂದೂಡಲಾಗಿತ್ತು. ಆಗ ಕರೆಸಿದಾಗ ಕಾಸಪ್ಪನವರ ವಕೀಲರ ಪರಿಚಿತರು ನಿಧನ ಹೊಂದಿರುವ ಕಾರಣ ಕೋಟ್ನಿಂದ ನಿರ್ಗಮಿಸಿದ್ದಾರೆ. ಆದ್ದರಿಂದ ವಿನಾಯಿತಿ ನೀಡಬೆಕು ಎಂದ್ರು.
ಈ ವೇಳೆ ನ್ಯಾಯಧೀಶರು ಕೋಪಗೊಂಡು ಈ ಪ್ರಕರಣಕ್ಕೂ ವಕೀಲರ ಕಡೆಯವರು ಸಯೋದಕ್ಕೂ ಏನು ಸಂಬಂಧ. ಸುಳ್ಳು ಹೇಳ್ತಿದ್ದಿರಾ, ಯಾರನ್ನು ಕೊಲ್ಲಲು ಹೋಗಬೇಡಿ. ನಿಮ್ಮ ಆತ್ಮ ಸಾಕ್ಷಿಯಾಗಿ ಹೇಳಿ ಅವರು ನಿಜಾವಾಗ್ಲು ಸತ್ತಿದ್ದಾರಾ.ಬೆಳಗ್ಗೆ ಶೌಚಾಲಯಕ್ಕೆ ಹೋಗಿದ್ರು ಅಂತಾ ಸುಳ್ಳು ಹೇಳ್ತೀರ. ಈಗ ನೋಡಿದರೆ ಪರಿಚಿತರು ಸತ್ತಿದ್ದಾರೆ ಅಂತಾ ಹೇಳ್ತೀರಾ ಎಂದು ಹೇಳಿ ಜಾಮೀನು ರಹಿತ ವಾರಂಟ್ ಆದೇಶ ನೀಡಿದ್ದಾರೆ.