ETV Bharat / state

ಅನಧಿಕೃತ ಕ್ಯಾಬ್​​​​ಗಳ ಹಾವಳಿ: ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ನಷ್ಟ..! - ಸರ್ಕಾರದ ಬೊಕ್ಕಸ

ದೊಡ್ಡ ದೊಡ್ಡ ನಗರಗಳಲ್ಲಿ ಖಾಸಗಿ ವಾಹನಗಳನ್ನು ಅನಧಿಕೃತ ಟ್ಯಾಕ್ಸಿಗಳಾಗಿ ಪರಿವರ್ತಿಸಿ, ಬಾಡಿಗೆ ಆಧಾರದ ಮೇಲೆ ಸಾರ್ವಜನಿಕರಿಗೆ ಸೇವೆಯನ್ನು ಒದಗಿಸಲಾಗುತ್ತಿದೆ.

unauthorized cabs
ಅನಧಿಕೃತ ಕ್ಯಾಬ್​​​​ಗಳ ಹಾವಳಿ
author img

By

Published : Nov 16, 2020, 7:36 PM IST

ಬೆಂಗಳೂರು: ರಾಜ್ಯದ ಬಹುತೇಕ ನಗರಗಳಲ್ಲಿ ಕ್ಯಾಬ್​​​​ ಸೇವೆಯು ಇದ್ದು, ಇದರ ನಡುವೆ ಅನಧಿಕೃತ ಕ್ಯಾಬ್​​​​​​​​​​​​​​​ಗಳ ಹಾವಳಿಯೂ ಜೋರಾಗಿದೆ. ದೊಡ್ಡ ದೊಡ್ಡ ನಗರಗಳಲ್ಲಿ ಖಾಸಗಿ ವಾಹನಗಳನ್ನು ಅನಧಿಕೃತ ಟ್ಯಾಕ್ಸಿಗಳಾಗಿ ಪರಿವರ್ತಿಸಿ, ಬಾಡಿಗೆ ಆಧಾರದ ಮೇಲೆ ಸಾರ್ವಜನಿಕರಿಗೆ ಸೇವೆಯನ್ನು ಒದಗಿಸಲಾಗುತ್ತಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟಾಗುತ್ತಿದೆ.

ಕ್ಯಾಬ್ ಚಲಾಯಿಸಲು ಸರ್ಕಾರದ ಪರವಾನಗಿ ಪಡೆಯಬೇಕು. ಇದಕ್ಕಾಗಿ ನಿಗದಿತ ಶುಲ್ಕವಿದೆ ಹಾಗೂ ಪರವಾನಗಿ ನವೀಕರಣಕ್ಕೆ ಕೂಡ ಶುಲ್ಕ ಕಟ್ಟಬೇಕು. ಇನ್ನು ಬಿಳಿ ಬೋರ್ಡ್​​​ನ ವಾಹನಗಳನ್ನು ‌ಬಾಡಿಗೆಗೆ ಬಳಸಿಕೊಳ್ಳಬೇಕಾದ್ರೆ, ಅನುಮತಿ ಪಡೆದು ‌ಶುಲ್ಕ ಭರಿಸಿ ಮಾಸಿಕ ತೆರಿಗೆ, ವಿಮೆ, ರಹದಾರಿ ಶುಲ್ಕ ತುಂಬಿ ಹಳದಿ ಬಣ್ಣದ ಬೋರ್ಡ್ ಆಗಿ ಪರಿವರ್ತನೆ ಮಾಡಿಕೊಂಡು ನಂತರ ಬಾಡಿಗೆ ಹೋಗಬಹುದು. ಆದರೆ ಹಲವಾರು ಖಾಸಗಿ ವಾಹನ ಮಾಲೀಕರು, ಪರವಾನಗಿ ಪಡೆಯದೇ ತಮ್ಮ ವಾಹನಗಳನ್ನು ಕ್ಯಾಬ್‌ಗಳಾಗಿ ಮಾರ್ಪಾಡು ಮಾಡಿದ್ದಾರೆ.

ಅನಧಿಕೃತ ಕ್ಯಾಬ್​​​​ಗಳ ಹಾವಳಿ

ಬೆಂಗಳೂರಿನಲ್ಲಿ ಲಕ್ಷ್ಯಾಂತರ ಮ್ಯಾಕ್ಯಿ ಕ್ಯಾಬ್​​​​ಗಳು ಓಡಾಡುತ್ತಿದ್ದು, ಈ ಪೈಕಿ ಬಿಳಿ ಬೋರ್ಡ್ ಹೊಂದಿರುವ ಕ್ಯಾಬ್​​​​ಗಳು ತಮ್ಮದೇ ಮಿತಿಯಲ್ಲಿ ಆಪರೇಟ್ ಮಾಡುತ್ತಿವೆ. ಇದನ್ನು ತಡೆಯಲು ಸಾರಿಗೆ ಇಲಾಖೆಯಲ್ಲಿ ತಂತ್ರಜ್ಞಾನ ಹಾಗೂ ಸಿಬ್ಬಂದಿ ಕೊರತೆಯಿಂದ ಅಕ್ರಮ‌ ಕ್ಯಾಬ್​​​ಗಳನ್ನು ಪತ್ತೆ ಹಚ್ಚಲು ಕಷ್ಟಕರವಾಗುತ್ತಿದೆ.

ಇನ್ನು ಮಂಗಳೂರಿನಲ್ಲಿ ಸಾಕಷ್ಟು ಸಂಖ್ಯೆಯ ಕ್ಯಾಬ್ ಸೇವೆಗಳಿದ್ದು, ಇದರ ಜೊತೆಗೆ ಅನಧಿಕೃತ ಕ್ಯಾಬ್​​ಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿವೆ. ಸ್ವಂತ ವಾಹನಗಳಲ್ಲಿ ಕ್ಯಾಬ್ ಸೇವೆ ನೀಡುವ ದೊಡ್ಡ ಜಾಲವಿದ್ದು, ಪಕ್ಕದ ಕೇರಳ ರಾಜ್ಯಕ್ಕೆ ಬಾಡಿಗೆ ಪಡೆದು ಸೇವೆ ನೀಡುತ್ತಾರೆ. ಕಡಿಮೆ ದರದಲ್ಲಿ ಸೇವೆ ನೀಡಿ, ಅಧಿಕೃತ ಕ್ಯಾಬ್​​​​ ಮಾಲೀಕರಿಗೆ ಸಂಕಷ್ಟವನ್ನು ತಂದೊಡ್ಡುತ್ತಿದ್ದಾರೆ.

ಇನ್ನು ಸಾರ್ವಜನಿಕರು ಹಳದಿ ಬಣ್ಣದ ಬೋರ್ಡ್ ಇರುವ ವಾಹನಗಳ ಸೇವೆಯನ್ನು ಪಡೆಯಬೇಕು. ಯಾಕೆಂದ್ರೆ ಒಂದು ವೇಳೆ ಯಾವುದಾದರೂ ಅಪಘಾತ ಸಂಭವಿಸಿದ್ರೆ, ಅವರಿಗೆ ಪರಿಹಾರವಾಗಿ ವಿಮೆಯ ಸೌಲಭ್ಯವಿರುತ್ತದೆ. ಆದರೆ ಬಿಳಿ ಬಣ್ಣದ ಬೋರ್ಡ್​​​ ಕ್ಯಾಬ್​ನಲ್ಲಿ ಅಪಘಾತವಾದರೆ ಯಾವುದೇ ಪರಿಹಾರ ಸೌಲಭ್ಯ ಸಿಗುವದಿಲ್ಲ. ಈ ಕುರಿತಾಗಿ ಅನಧಿಕೃತ ಕ್ಯಾಬ್​ ವಾಹನಗಳಲ್ಲಿ ಸಂಚರಿಸುವ ಸಾರ್ವಜನಿಕರಿಗೆ, ಸಾರಿಗೆ ಅಧಿಕಾರಿಗಳು ಜಾಗೃತಿ ಮೂಡಿಸುವುದು ಅವಶ್ಯವಿದೆ.

ಅನಧಿಕೃತ ಕ್ಯಾಬ್​​ಗಳಿಂದ ಹಲವಾರು ಕ್ಯಾಬ್ ಸೇವೆಯನ್ನು ನೀಡುವ ಸಂಸ್ಥೆಗಳಿಗೆ ನಷ್ಟವುಂಟಾಗಿದ್ದು, ಕೆಲವು ಸಂಸ್ಥೆಗಳು ಮುಚ್ಚುವ ಸ್ಥಿತಿ ಬಂದಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಕ್ರಮ ಕೈಗೊಳ್ಳಬೇಕು. ಇದಕ್ಕೆ ಕಡಿವಾಣ ಹಾಕಿದರೆ ಸರಕಾರಕ್ಕೆ ಆಗುವ ನಷ್ಟವನ್ನು ಕೂಡ ತಪ್ಪಿಸಬಹುದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.