ETV Bharat / state

Day Against Drug Abuse 2023: ಒಂದು ವರ್ಷದಲ್ಲಿ ಬೆಂಗಳೂರು ಪೊಲೀಸರು ವಶಪಡಿಸಿಕೊಂಡ ಮಾದಕ ವಸ್ತುಗಳ ವಿವರ ಹೀಗಿದೆ.. - ಮಾದಕ ವಸ್ತುಗಳ ಕಂಪ್ಲೀಟ್​ ಡೀಟೈಲ್ಸ್​

Day Against Drug Abuse 2023: ಕಳೆದೊಂದು ವರ್ಷದಲ್ಲಿ ಬೆಂಗಳೂರು ನಗರ ಪೊಲೀಸರು ವಿಶೇಷ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಂಡ ಮತ್ತು ನಾಶಪಡಿಸಲಿರುವ ಮಾದಕ ವಸ್ತುಗಳ ಕಂಪ್ಲೀಟ್​ ಡೀಟೈಲ್ಸ್​ ಇಂತಿದೆ..

Day Against Drug Abuse 2023
ಬೆಂಗಳೂರು ಪೊಲೀಸರು
author img

By

Published : Jun 26, 2023, 2:00 PM IST

Updated : Jun 26, 2023, 5:08 PM IST

ವಶಪಡಿಸಿಕೊಂಡ ಮಾದಕ ವಸ್ತುಗಳ ಬಗ್ಗೆ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಡಿ.ದಯಾನಂದ

ಬೆಂಗಳೂರು: ಇಂದು ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಅಕ್ರಮ ಕಳ್ಳಸಾಗಣೆ ವಿರೋಧಿ ದಿನ. ಈ ಸಂದರ್ಭದಲ್ಲಿ ಬೆಂಗಳೂರು ನಗರ ಪೊಲೀಸರು ಮಾದಕ ಸರಬರಾಜುಗಾರರು ಮತ್ತು ಮಾದಕ ವ್ಯಸನಿಗಳ ವಿರುದ್ಧ ಕೈಗೊಳ್ಳಲಾಗಿದ್ದ ವಿಶೇಷ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಂಡ ಮತ್ತು ನಾಶಪಡಿಸಲಿರುವ ಮಾದಕ ವಸ್ತುಗಳ ವಿವರ ಇಂತಿದೆ..

Day Against Drug Abuse 2023
2022-23ನೇ ಸಾಲಿನಲ್ಲಿ ದಾಖಲಾದ ಪ್ರಕರಣಗಳು

2022-23ನೇ ಸಾಲಿನಲ್ಲಿ ದಾಖಲಾದ ಪ್ರಕರಣಗಳು: ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 2022 ಮತ್ತು 2023ನೇ ಸಾಲಿನಲ್ಲಿ (ಜೂನ್ 22ರವರೆಗೆ) ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆ ಮಾಡುವವರ ವಿರುದ್ಧ ಒಟ್ಟು 6,191 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಒಟ್ಟು 7,723 ಭಾರತೀಯರು ಹಾಗೂ 159 ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ. ಅವುಗಳಲ್ಲಿ 943 ಪ್ರಕರಣಗಳನ್ನು ಮಾದಕ ಸರಬರಾಜುಗಾರರ ವಿರುದ್ಧ ಹಾಗೂ 5,248 ಪ್ರಕರಣಗಳನ್ನು ಮಾದಕ ಪದಾರ್ಥ ಸೇವನೆ ಮಾಡುವವರ ವಿರುದ್ಧ ದಾಖಲಿಸಲಾಗಿದೆ. ಆರೋಪಿಗಳಿಂದ ಅಂದಾಜು 117 ಕೋಟಿ ಮೌಲ್ಯದ ಬೆಲೆಬಾಳುವ 6,261 ಕೆಜಿಯಷ್ಟು ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ಮಾಹಿತಿ ನೀಡಿದರು.

Day Against Drug Abuse 2023
ವಶಪಡಿಸಿಕೊಂಡ ಮಾದಕ ವಸ್ತುಗಳ ವಿವರ

ವಶಪಡಿಸಿಕೊಂಡ ಮಾದಕ ವಸ್ತುಗಳ ವಿವರ: ಕಳೆದ ಒಂದು ವರ್ಷದಲ್ಲಿ 6074.685 ಕೆಜಿ ಗಾಂಜಾ, 5.5 ಕೆಜಿ ಗಾಂಜಾ ಆಯಿಲ್, 2.554 ಕೆಜಿ ಬ್ರೌನ್ ಶುಗರ್, 15.689 ಕೆಜಿ ಅಫೀಂ, 52.689 ಕೆಜಿ ಎಂಡಿಎಂಎ, 109.914 ಕೆಜಿ ಸಿಂಥೆಟಿಕ್ ಡ್ರಗ್, 3406 ವಿವಿಧ ರೀತಿಯ ಮಾತ್ರೆಗಳು ಹಾಗೂ 1372 ಎಲ್‌ಎಸ್‌ಡಿ ಸ್ಟ್ರಿಪ್ಸ್ ವಶಕ್ಕೆ ಪಡೆಯಲಾಗಿದೆ.

ಇನ್ನು ಮಾದಕ ದಂಧೆಯ ವಿರುದ್ಧ ನಿರಂತರ ಸಮರ ಸಾರಿರುವ ಬೆಂಗಳೂರು ನಗರ ಪೊಲೀಸರು ಕಳೆದ ಒಂದು ತಿಂಗಳಿನಿಂದ ನಗರದ ವಿದ್ಯಾಸಂಸ್ಥೆಗಳ ಬಳಿ ಮಾದಕ ವಸ್ತು ಪದಾರ್ಥಗಳ ಮಾರಾಟ/ ಸೇವನೆ ಮಾಡುತ್ತಿದ್ದವರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ ಕ್ರಮ ಜರುಗಿಸಿದ್ದು, ಅವುಗಳ ವಿವರ ಕೆಳಕಂಡಂತಿದೆ.

  • ಮಾದಕ ಸರಬರಾಜುಗಾರರ ವಿರುದ್ಧ ದಾಖಲಾದ ಪ್ರಕರಣಗಳು- 130
  • ಮಾದಕ ಸೇವಿಸುವವರ ವಿರುದ್ಧ ದಾಖಲಾದ ಪ್ರಕರಣಗಳು- 1,003
  • ಒಟ್ಟು ಪ್ರಕರಣಗಳು- 1,133

ಜಪ್ತಿಯಾದ ಮಾದಕ ವಸ್ತುಗಳು: 204.128 ಕೆಜಿ ಗಾಂಜಾ, 1.195 ಕೆಜಿ ಹ್ಯಾಶ್ ಆಯಿಲ್, 0.768 ಕೆಜಿ ಓಪಿಯಂ, 1.311 ಕೆಜಿ ಸಿಂಥೆಟಿಕ್ ಡ್ರಗ್, 130 ಮಾತ್ರೆಗಳು ಹಾಗೂ 70 ಸ್ಟ್ರಿಪ್ಸ್ ಎಂಡಿಎಂಎ, COTPA (ಸಿಗರೇಟು ಮತ್ತಿತರ ತಂಬಾಕು ಉತ್ಪನ್ನಗಳ ಕಾಯ್ದೆ) ಅಡಿ ದಾಖಲಾದ ಪ್ರಕರಣಗಳು- 171 ಮತ್ತು 21 ಕೋಟಿ ಮೌಲ್ಯದ ಮಾದಕ ಪದಾರ್ಥವನ್ನು ನಾಶ ಮಾಡಲಾಗಿದೆ.

ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳಸಾಗಾಣಿಕೆ ವಿರೋಧಿ ದಿನಾಚರಣೆಯ ಅಂಗವಾಗಿ ಇಂದು ಡ್ರಗ್ಸ್ ಡಿಸ್ಟೋಸಲ್ ಕಮಿಟಿಗೆ ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳಿಂದ ಒಟ್ಟು 21 ಕೋಟಿ ರೂ. ಮೌಲ್ಯದ 2117.568 ಕೆಜಿಯಷ್ಟು ಮಾದಕ ವಸ್ತುಗಳನ್ನು ಹಸ್ತಾಂತರಿಸಲಾಗಿದೆ.

ಇವುಗಳಲ್ಲಿ 2053.486 ಕೆಜಿ ಗಾಂಜಾ, 1.302 ಕೆಜಿ ವೀಡ್ ಆಯಿಲ್, 9.232 ಕೆಜಿ ಹಾಫ್ ಆಯಿಲ್, 23 ಗ್ರಾಂ. ಬ್ರೌನ್ ಶುಗರ್, 12.278 ಕೆಜಿ ಅಫೀಮು, 9.325 ಕೆಜಿ ಚರಸ್, 568 ಗ್ರಾಂ. ಕೊಕೈನ್, 13 ಗ್ರಾಂ. ಹೆರಾಯ್ನ್, 5.353 ಕೆಜಿ ಎಂಡಿಎಂಎ, 29 ಎಂಡಿಎಂಎ ಮಾತ್ರೆಗಳು, 137 ಎಕ್ಸ್ಟೆಸಿ ಮಾತ್ರೆಗಳು, 931 ಗ್ರಾಂ. ಎಕ್ಸಟೆಸಿ ಪೌಡರ್, 654 ಗ್ರಾಂ. ಮೆತಾಕ್ವೆಲಾನ್, 13 ಗ್ರಾಂ. ಎಲ್​ಎಸ್​ಡಿ ಸ್ಟ್ರಿಪ್ಸ್ ಪೌಡರ್ ಹಾಗೂ 93 ಎಲ್​ಎಸ್​ಡಿ ಸ್ಟ್ರಿಪ್ಸ್ ಮತ್ತು 24.300 ಕೆಜಿ ಎಸ್ಕಾಫ್ ಸಿರಪ್ ಸೇರಿದಂತೆ ಇತರೆ ಮಾದಕ ವಸ್ತುಗಳನ್ನು ಹಸ್ತಾಂತರಿಸಲಾಗಿದೆ. ನ್ಯಾಯಾಲಯ ಆದೇಶದನ್ವಯ ಇಂದು ಆ ಮಾದಕ ವಸ್ತುಗಳನ್ನು ವೈಜ್ಞಾನಿಕವಾಗಿ ನಾಶಪಡಿಸಲಾಗುತ್ತದೆ ಎಂದು ಅವರು ವಿವರಿಸಿದರು.

ಇದೇ ವರ್ಷ ಮಾರ್ಚ್ 24ರಂದು NCORD (ನಾರ್ಕೋ ಕೋ-ಆರ್ಡಿನೇಷನ್ ಸೆಂಟರ್) ವತಿಯಿಂದ ಏರ್ಪಡಿಸಲಾಗಿದ್ದ ದಕ್ಷಿಣ ರಾಜ್ಯಗಳ ಮಾದಕ ಸಾಗಾಣಿಕೆ ಮತ್ತು ರಾಷ್ಟೀಯ ಭದ್ರತಾ ಸಮಾವೇಶದ ಅಂಗವಾಗಿ ಸುಮಾರು 92 ಕೋಟಿ ರೂ. ಮೌಲ್ಯದ ವಿವಿಧ ಬಗೆಯ 4397.855 ಕೆಜಿ ತೂಕದ ಮಾದಕ ವಸ್ತುಗಳು ಹಾಗೂ 8,199 ವಿವಿಧ ರೀತಿಯ ಮಾತ್ರೆಗಳು ಮತ್ತು 584 ಎಲ್‌ಎಸ್‌ಡಿ ಸ್ಟ್ರಿಪ್ಸ್ ನಾಶಪಡಿಸಲಾಗಿತ್ತು.

ಇದನ್ನೂ ಓದಿ: Day Against Drug Abuse 2023: ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನ: ಡ್ರಗ್ಸ್​ನಿಂದ ಮುಕ್ತವಾಗಬೇಕಿದೆ ಸಮಾಜ

Last Updated : Jun 26, 2023, 5:08 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.