ETV Bharat / state

ರೈಲ್ವೆ ಹಳಿಗಳ ಮೇಲೆ‌ ಪತ್ತೆಯಾಗುವ ಮೃತದೇಹಗಳನ್ನ ಹುಡುಕುವುದೇ ಪೊಲೀಸರಿಗೆ ಸವಾಲು

ಕಳೆದ ಮೂರು ವರ್ಷದಲ್ಲಿ ರೈಲ್ವೆ ಹಳಿಗಳ ಮೇಲೆ‌ ಪತ್ತೆಯಾಗುವ ಮೃತದೇಹಗಳ ಮಿಸ್ಸಿಂಗ್ ಕೇಸ್​ಗಳ ಬೆನ್ನತ್ತಿ, ತನಿಖೆ ನಡೆಸಿದರೂ ಮೃತದೇಹಗಳ ಮೂಲವೇ ಪತ್ತೆಯಾಗುತ್ತಿಲ್ಲ.

ರೈಲ್ವೇ ಹಳಿ
ರೈಲ್ವೇ ಹಳಿ
author img

By

Published : Feb 6, 2023, 9:37 PM IST

ಬೆಂಗಳೂರು: ಅಪಘಾತ, ಆತ್ಮಹತ್ಯೆ ಸೇರಿ ವಿವಿಧ ಕಾರಣಗಳಿಂದ ರೈಲ್ವೆ ಹಳಿಗಳ ಮೇಲೆ ಪತ್ತೆಯಾಗುವ ಮೃತದೇಹಗಳನ್ನು ಪತ್ತೆ ಹಚ್ಚುವುದು ರೈಲ್ವೆ ಪೊಲೀಸರಿಗೆ ತಲೆಬಿಸಿಯಾಗಿದೆ. ಕಳೆದ ಮೂರು ವರ್ಷದಲ್ಲಿ ಸಾವಿಗೀಡಾಗಿ ದಾಖಲಾದ ಪ್ರಕರಣಗಳ ಪೈಕಿ 1 ಸಾವಿರಕ್ಕೂ ಹೆಚ್ಚಿನ ಪ್ರಕರಣಗಳಲ್ಲಿ ಮೃತರ ಹಿನ್ನೆಲೆ, ಅವರ ಗುರುತು ಸಹ ಪತ್ತೆಯಾಗಿಲ್ಲ ಎಂಬುದು ಗೊತ್ತಾಗಿದೆ.

ವರ್ಷದಿಂದ ವರ್ಷಕ್ಕೆ ರೈಲ್ವೆ ಹಳಿಗಳ ಬಳಿ ಒಂದಲ್ಲಾ ಒಂದು ರೀತಿ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ಆದರೆ ಕೆಲವರು ಸಾವಿಗೀಡಾದರು, ಅದರ ಸುಳಿವೂ ಇಲ್ಲ, ಪತ್ತೆಯೂ ಇಲ್ಲದಂತಾಗಿದೆ. ರೈಲ್ವೆ ಪೊಲೀಸರಿಗೆ ಸಾವಿರಕ್ಕೂ ಹೆಚ್ಚು ಮೃತಪಟ್ಟವರ ಮೂಲ ಪತ್ತೆ ಮಾಡುವುದೇ ತಲೆನೋವಾಗಿದೆ. ಬೆಂಗಳೂರು, ಹೊರಜಿಲ್ಲೆ, ಹೊರ ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿದ್ದರೂ ಯಾವುದೇ ಸುಳಿವು ಸಿಕ್ಕಿಲ್ಲ. ಎಲ್ಲ ಠಾಣೆಗಳಲ್ಲಿ ಮಿಸ್ಸಿಂಗ್ ಕೇಸ್ ಗಳ ಬೆನ್ನಟ್ಟಿ, ತನಿಖೆ ನಡೆಸಿದರೂ ಮೃತದೇಹಗಳ ಮೂಲವೇ ಇಲ್ಲದಂತಾಗಿದೆ. ಹೀಗೆ ಬರೋಬ್ಬರಿ ಮೂರು ವರ್ಷಗಳಲ್ಲಿ 1074 ಮೃತರ ಕೇಸ್ ಬಾಕಿ ಉಳಿದುಕೊಂಡಿದೆ.

ಸಿಸಿಟಿವಿ ಕಲೆಹಾಕಿದರೂ ಯಾವುದೇ ಸುಳಿವು ಸಿಕ್ಕಿಲ್ಲ : ಈ ಮಧ್ಯೆ ಹಳೆ ಬಾಕಿ ಉಳಿದ ಕೇಸ್​ಗಳ ಮೂಲ ಪತ್ತೆ ಮಾಡುವುದಕ್ಕೆ ಹೊಸ ಟಾಸ್ಕ್ ಅನ್ನು ರೈಲ್ವೆ ಎಸ್​ಪಿ ಸೌಮ್ಯಲತಾ ನೀಡಿದ್ದಾರೆ. ಕಳೆದ ವರ್ಷ 2022ರಲ್ಲಿ 1674 ಮಂದಿ ಮೃತರಾಗಿದ್ದು, 451 ಮಂದಿ ಸತ್ತವರ ಹಿಸ್ಟರಿಯೇ ಸಿಕ್ಕಿಲ್ಲ. ಎರಡು ವರ್ಷಕ್ಕಿಂತ ಕಳೆದ ವರ್ಷದಲ್ಲೇ ಅತಿ ಹೆಚ್ಚು ಬಾಕಿ ಹಾಗೇ ಉಳಿದಿದೆ. 2021ರಲ್ಲಿ 379 ಕೇಸ್ ಬಾಕಿ ಉಳಿದರೆ, 2020 ರಲ್ಲಿ 244 ಕೇಸ್​ಗಳ ಸುಳಿವೇ ಇಲ್ಲ. ಅದಕ್ಕೆ ಪೂರಕ ಎಂಬಂತೆ ಇತ್ತೀಚೆಗೆ ರೈಲ್ವೆ ನಿಲ್ದಾಣದಲ್ಲಿ ಎರಡು ಅಪರಿಚಿತ ಮಹಿಳೆಯರ ಶವಗಳು ಸಿಕ್ಕಿದೆ. ಹೊರ ರಾಜ್ಯಗಳಲ್ಲಿ ವಿಶೇಷ ತಂಡಗಳು ಹೋಗಿ ಸಿಸಿಟಿವಿ ಕಲೆಹಾಕಿದರೂ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ರೈಲ್ವೇ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನು ಸಾವಿರಕ್ಕೂ ಹೆಚ್ಚು ಮೃತಪಟ್ಟವರ ಡಿಎನ್​ಎ ಸ್ಯಾಂಪಲ್ ಎಫ್​ಎಸ್​ಎಲ್​ನಲ್ಲಿ ಇರಿಸಲಾಗಿದೆ. ಈ ಮಧ್ಯೆ ಪ್ರಕಟಣೆ ಮೂಲಕ ಪತ್ತೆ ಕಾರ್ಯವೂ ಮುಂದುವರೆದಿದೆ. ಆದರೆ ರೈಲ್ವೆ ಸಿಬ್ಬಂದಿಯು ಕಡಿಮೆ ಪ್ರಮಾಣದಲ್ಲಿರೋದು ಹಾಗೂ ನುರಿತ ಅಧಿಕಾರಿಗಳಿರುವುದು ಕಾರ್ಯಾಚರಣೆಗೆ ಸಮಸ್ಯೆ ಆಗಿದೆ.

ಪತ್ತೆ ಹಚ್ಚದಿರಲು ಕಾರಣವೇನು ?:ಹಣ ಸಂಪಾದನೆಗಾಗಿ ಬರುವ ಹೊರರಾಜ್ಯ ಅಥವಾ ಹೊರ ಜಿಲ್ಲೆಗಳಿಂದ ಬರುವ ವ್ಯಕ್ತಿಗಳೇ ಹೆಚ್ಚಾಗಿದ್ದು, ಮೃತರ ಬಳಿ ಮೊಬೈಲ್ ಅಥವಾ ಇನ್ನಿತರ ದಾಖಲಾತಿ ಇರುವುದಿಲ್ಲ. ಅಲ್ಲದೇ ಮೃತಪಟ್ಟ ಬಳಿಕ‌ ಕುಟುಂಬಸ್ಥರು ಅಥವಾ ಪೋಷಕರೇ ದೂರು ನೀಡದಿರುವುದು ಪ್ರಮುಖ ಕಾರಣವಾಗಿದೆ. ಅಪಘಾತದಲ್ಲಿ ಸಂಪೂರ್ಣವಾಗಿ ಮುಖ ಚಹರೆ ಅಥವಾ ದೇಹದ ಇನ್ನಿತರ ಗುರುತುಗಳು ಸಿಗದಿರುವಷ್ಟು ಪಳೆಯುಳಿಕೆ ಸ್ಥಿತಿಯಲ್ಲಿ ಶವಗಳು ಪತ್ತೆಯಾಗುತ್ತದೆ. ಮೃತರ ಗುರುತು ಪತ್ತೆ ಹಚ್ಚುವ ಸಂಬಂಧ ನಿರಂತರವಾಗಿ ನೆರೆರಾಜ್ಯ ರೈಲ್ವೆ ಪೊಲೀಸ್ ಠಾಣಾಧಿಕಾರಿಗಳೊಂದಿಗೆ ನಿರಂತವಾಗಿ ಸಂಪರ್ಕದಲ್ಲಿದ್ದು, ನಾಪತ್ತೆಯಾಗಿರುವ ಬಗ್ಗೆ ದೂರುಗಳು ಬಂದರೆ ಸುಲಭ ಸಾಧ್ಯವಾಗುತ್ತದೆ ಎಂದು ಎಸ್ಪಿ ಸೌಮ್ಯಲತಾ ತಿಳಿಸಿದ್ದಾರೆ.

ಮೂರು ವರ್ಷದಲ್ಲಿ ಮೃತಪಟ್ಟವರ ಬಾಕಿ ಉಳಿದ ಕೇಸ್..

2020

ಅಪಘಾತ - 95
ಆತ್ಮಹತ್ಯೆ- 85
ಆಕಸ್ಮಿಕ - 64

2021

ಅಪಘಾತ -113
ಆತ್ಮಹತ್ಯೆ-179
ಆಕಸ್ಮಿಕ -87

2022

ಅಪಘಾತ -155
ಆತ್ಮಹತ್ಯೆ-182
ಆಕಸ್ಮಿಕ -114

ಇದನ್ನೂ ಓದಿ : ಬೆಂಗಳೂರಿನ ಮಹಿಳೆ ಕೊಳ್ಳೇಗಾಲದಲ್ಲಿ ಶವವಾಗಿ ಪತ್ತೆ: ಜಜ್ಜಿದ ಮೊಬೈಲ್ ಮೂಲಕ ಗುರುತು ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.