ETV Bharat / state

ಸಿಡಿ ಪ್ರಕರಣ ಸಂಬಂಧ ಮಾಜಿ ಸಚಿವರನ್ನೇ ಏನೂ ಮಾಡಿಲ್ಲ, ನಮ್ಮನ್ನೇಕೆ ಬಂಧಿಸ್ತೀರಿ: ಎಸ್.ವರಲಕ್ಷ್ಮಿ

author img

By

Published : Mar 26, 2021, 12:45 PM IST

Updated : Mar 26, 2021, 12:50 PM IST

ಸರ್ಕಾರ ಜನವಿರೋಧಿ ನೀತಿಗಳನ್ನು ತಂದರೂ ವಿರೋಧ ಮಾಡಲಿಕ್ಕೆ ಅವಕಾಶ ಕೊಡುತ್ತಿಲ್ಲ. ಇದು ಸಂವಿಧಾನದ ಹಕ್ಕನ್ನು ಕಸಿದುಕೊಂಡ ಹಾಗೆ ಆಗಿದೆ. ಮನಸ್ಸಿಗೆ ಬಂದ ಹಾಗೆ ಬಂಧನ ಮಾಡಿ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ ಎಂದು ವರಲಕ್ಷ್ಮಿ ಆರೋಪಿಸಿದರು.

the-altercation-between-the-farmers-and-the-police-in-bangalore
ಭಾರತ್ ಬಂದ್ ಹಿನ್ನಲೆ ಟೌನ್ ಹಾಲ್ ಮುಂದೆ ಪ್ರತಿಭಟನೆ

ಬೆಂಗಳೂರು: ಭಾರತ್ ಬಂದ್ ಹಿನ್ನೆಲೆ ಟೌನ್ ಹಾಲ್ ಮುಂದೆ ಪ್ರತಿಭಟನೆಗೆ ಬಂದ ಪ್ರತಿಯೊಬ್ಬರನ್ನೂ ಪೊಲೀಸರು ಬಂಧಿಸಿ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಕಾರ್ಮಿಕ ಸಂಘಟನೆ ಸಿಐಟಿಯು ಮುಖಂಡೆ ವರಲಕ್ಷ್ಮಿ ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು.

ಸಿಡಿ ಪ್ರಕರಣ ಸಂಬಂಧ ಸಚಿವರಾಗಿದ್ದೋರಿಗೇ ಏನೂ ಮಾಡಿಲ್ಲ. ಏಕಪತ್ನಿ ವೃತಸ್ಥ ಅಂತ ಕೇಳಿ ಮಹಿಳೆಯರಿಗೆ ಅವಮಾನ ಮಾಡಿದಾಗ ಸುಮೋಟೊ ಕೇಸ್ ಬುಕ್ ಮಾಡಿಲ್ಲ. ಈಗ ನಾವೇನು ಮಾಡಿದ್ದೇವೆ, ನಮ್ಮನ್ಯಾಕೆ ಬಂಧಿಸ್ತೀರಿ ಎಂದು ಪ್ರಶ್ನಿಸಿದರು. ಅಲ್ಲದೆ ಬಾವುಟ ಹಿಡಿದಿಲ್ಲ. ರಸ್ತೆ ತಡೆ ಹಿಡಿದಿಲ್ಲ. ಟೌನ್ ಹಾಲ್ ಮುಂದೆ ನಿಲ್ಲೋದಕ್ಕೂ ಹಕ್ಕು ಇಲ್ವಾ ಎಂದು ವಾದಿಸಿದರು.

ಓದಿ: ಭಾರತ್ ಬಂದ್ ಬೆಂಗಳೂರಿನಲ್ಲಿ ಫ್ಲಾಪ್; ಬಸ್​, ಆಟೋ, ಜನ ಎಂದಿನಂತೆ ಸಂಚಾರ

ಈ ವೇಳೆ ಮಾತನಾಡಿದ ಎಸ್.ವರಲಕ್ಷ್ಮಿ, ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳ ತಿದ್ದುಪಡಿ ತಂದಿದೆ. ಕಾರ್ಮಿಕರ ಕಾನೂನುಗಳನ್ನು ಮಾಲೀಕರ ಪರವಾಗಿ ತಿದ್ದುಪಡಿ ಮಾಡಿದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಪ್ರತಿಭಟನೆಗಳನ್ನು ಹತ್ತಿಕ್ಕಿ, ಏಕಮುಖ ಧೋರಣೆಗಳನ್ನು ನಡೆಸುತ್ತಿದೆ. ಬಂದ್ ಬದಲು ಸ್ವಯಂಪ್ರೇರಿತರಾಗಿ ಬಂದು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು ಕೂಡ ಬಂದ ಕೂಡಲೇ ಅರೆಸ್ಟ್ ಮಾಡುತ್ತಿದ್ದಾರೆ. ಸರ್ಕಾರ ಜನವಿರೋಧಿ ನೀತಿಗಳನ್ನು ತಂದರೂ ವಿರೋಧ ಮಾಡಲಿಕ್ಕೆ ಅವಕಾಶ ಕೊಡುತ್ತಿಲ್ಲ. ಇದು ಸಂವಿಧಾನದ ಹಕ್ಕನ್ನು ಕಸಿದುಕೊಂಡ ಹಾಗೆ ಆಗಿದೆ. ಮನಸ್ಸಿಗೆ ಬಂದ ಹಾಗೆ ಬಂಧನ ಮಾಡಿ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ ಎಂದು ಆರೋಪಿಸಿದರು.

Last Updated : Mar 26, 2021, 12:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.