ETV Bharat / state

ಬರ್ತ್‌ಡೇ ಮುಗಿಸಿ ಬುಲೆಟ್‌ನಲ್ಲಿ ಬರುತ್ತಿದ್ದ ವೇಳೆ ದುರ್ಘಟನೆ: ಅಪಘಾತದ ಸಿಸಿಟಿವಿ ದೃಶ್ಯ - Bangalore car and bike Accident

ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ‌ಮೂಡಲಪಾಳ್ಯದ ಬಳಿ ನಡೆದಿದ್ದ ಭೀಕರ ರಸ್ತೆ ಅಪಘಾತದಲ್ಲಿ ಗಾಯಗೊಂಡ ಯುವಕ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ದುರ್ಘಟನೆಯ ಸಿಸಿಟಿವಿ ವಿಡಿಯೋ ದೊರೆತಿದೆ.

ಕಾರು-ಬೈಕ್ ನಡುವೆ ಭೀಕರ ಅಪಘಾತ
ಕಾರು-ಬೈಕ್ ನಡುವೆ ಭೀಕರ ಅಪಘಾತ
author img

By

Published : Dec 16, 2020, 10:52 AM IST

ಬೆಂಗಳೂರು: ಮೂಡಲಪಾಳ್ಯದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಗಾಯಗೊಂಡ ಯುವಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಅಕ್ಷಯ್ ಮೃತ ದುರ್ದೈವಿ ಎಂದು ತಿಳಿದುಬಂದಿದೆ.

ಕಾರು-ಬೈಕ್ ನಡುವೆ ಭೀಕರ ಅಪಘಾತ

ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ‌ಮೂಡಲಪಾಳ್ಯದ ಬಳಿ ಡಿಸೆಂಬರ್ 3 ರಂದು ಅಕ್ಷಯ್ ಸ್ನೇಹಿತನ ಜನ್ಮದಿನದ ಪಾರ್ಟಿ ಮುಗಿಸಿ ಬುಲೆಟ್ ಬೈಕ್​ನಲ್ಲಿ ಬರುತ್ತಿದ್ದ. ಇದೇ ವೇಳೆ ರಾಂಗ್ ಸೈಡ್​ನಿಂದ ಬಂದ ಕಾರು ರಭಸವಾಗಿ ಬಂದು ಅಕ್ಷಯ್​ ಬೈಕ್​ಗೆ ಗುದ್ದಿತ್ತು. ಪರಿಣಾಮ ಸೊಂಟದ ಸ್ವಾಧೀನ‌ ಕಳೆದುಕೊಂಡ ಅಕ್ಷಯ್​ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತೀವ್ರವಾಗಿ ಗಾಯಗೊಂಡಿದ್ದ ಆತ ಚಿಕಿತ್ಸೆ ಫಲಿಸದೇ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

ಓದಿ: ಅಡ್ಡೂರಿನಲ್ಲಿ ದುಷ್ಕರ್ಮಿಗಳ ಅಟ್ಟಹಾಸ.. ಯುವಕನ ಮೇಲೆ ತಲವಾರಿನಿಂದ ಹಲ್ಲೆ

ಬ್ಯಾಟರಾಯನಪುರ ಪೊಲೀಸ್​ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಪರಾರಿಯಾದ ಕಾರು ಚಾಲಕನಿಗೆ ಹುಡುಕಾಟ ನಡೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.