ETV Bharat / state

ಕಟ್ಟಡ ಸುರಕ್ಷತಾ ಪ್ರಮಾಣ ಪತ್ರವಿಲ್ಲದ ಹತ್ತು ಸಾವಿರ ಖಾಸಗಿ ಶಾಲೆಗಳು ಬಂದ್ ಆಗಲಿದ್ಯಾ? - bangalore news'

ಶಿಕ್ಷಣ ಇಲಾಖೆ ಖಾಸಗಿ ಶಾಲೆಗಳ ಕಟ್ಟಡಗಳಿಗೆ ಸುರಕ್ಷತಾ ಪ್ರಮಾಣ ಪತ್ರ ಕಡ್ಡಾಯ ಮಾಡಿ ಆದೇಶ ಹೊರಡಿಸಿದೆ. ಕೇವಲ ಖಾಸಗಿ ಅನುದಾನಿತ- ಅನುದಾನರಹಿತ ಶಾಲೆಗಳಿಗೆ ಅಷ್ಟೇ ಅನ್ವಯಿಸಲಾಗಿದೆ. ಸರ್ಕಾರಿ ಶಾಲಾ ಮಕ್ಕಳ ಸುರಕ್ಷತೆ ನಿಮ್ಗೆ ಬೇಡ್ವಾ ಎಂದು‌ ರೂಪ್ಸಾ ಶಾಲಾ ಒಕ್ಕೂಟದ ಅಧ್ಯಕ್ಷ ಲೋಕೇಶ್ ತಾಳಿಕೋಟೆ ಪ್ರಶ್ನೆ ಮಾಡಿದ್ದಾರೆ..

ರೂಪ್ಸಾ ಶಾಲಾ ಒಕ್ಕೂಟದ ಅಧ್ಯಕ್ಷ ಲೋಕೇಶ್ ತಾಳಿಕೋಟೆ

author img

By

Published : Nov 22, 2020, 8:31 PM IST

ಬೆಂಗಳೂರು: ಶಿಕ್ಷಣ ಇಲಾಖೆ ಖಾಸಗಿ ಶಾಲೆಗಳಿಗೆ ಮಾಸ್ಟರ್ ಸ್ಟ್ರೋಕ್ ನೀಡಿದೆ.‌ ಕಟ್ಟಡ ಸುರಕ್ಷತಾ ಪ್ರಮಾಣ ಪತ್ರವಿಲ್ಲದೇ ಇರೋ ಹತ್ತು ಸಾವಿರ ಖಾಸಗಿ ಶಾಲೆಗಳು ರಾಜ್ಯದಲ್ಲಿ ಬಂದ್ ಆಗಲಿದ್ಯಾ? ಶಾಲೆಗಳ ಕಟ್ಟಡ ಮಾನದಂಡದ ಬಗ್ಗೆ ಸುರಕ್ಷತಾ ಪ್ರಮಾಣ ಪತ್ರ ಕಡ್ಡಾಯವಾಗಿದೆ.

ಕೋರ್ಟ್​ನ ತೀರ್ಪಿನ್ವಯ ಶಾಲೆಗಳ ಕಟ್ಟಡ ಹಾಗೂ ಕಟ್ಟಡದ ಗುಣಮಟ್ಟದ ಬಗ್ಗೆ ನ್ಯಾಷನಲ್ ಬಿಲ್ಡಿಂಗ್ ಕೋಡ್​ರಲ್ಲಿ ಸರ್ಟಿಫಿಕೇಟ್ ಪಡೆಯುವುದು ಕಡ್ಡಾಯ ಮಾಡಲಾಗಿದೆ. ಸರ್ಟಿಫಿಕೇಟ್ ಇಲ್ದೇ ಇರೋ ಶಾಲೆಗಳು ಕ್ಲೋಸ್ ಆಗಲಿದೆ. ಅಗ್ನಿಶಾಮಕ ಇಲಾಖೆಯಿಂದಲೂ ಅಗ್ನಿನಂದಕ ಉಪಕರಣಗಳ ಲಭ್ಯತೆ ಬಗ್ಗೆ ಹೊಸ ಹಾಗೂ ನವೀಕರಣ, ಕಟ್ಟಡದ ಪ್ರಸ್ತುತ ಸ್ಥಿತಿ ಬಗ್ಗೆ ಪಡೆಯೊದೋ ಕಡ್ಡಾಯವಾಗಿದೆ‌‌.

ರೂಪ್ಸಾ ಶಾಲಾ ಒಕ್ಕೂಟದ ಅಧ್ಯಕ್ಷ ಲೋಕೇಶ್ ತಾಳಿಕೋಟೆ

ಈ ಸಂಬಂಧ ನವೆಂಬರ್ 10 ರಂದು ಶಿಕ್ಷಣ ಇಲಾಖೆಯಿಂದ ಖಾಸಗಿ ಶಾಲೆಗಳಿಗೆ ಆದೇಶ ಹೊರಡಿಸಲಾಗಿದೆ. ಆದರೆ ಇದೀಗ ರೂಪ್ಸಾ ಖಾಸಗಿ ಒಕ್ಕೂಟ ಈ ನಿಯಮಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆ. ಈ ನಿಯಮದಿಂದ 10 ಸಾವಿರ ಖಾಸಗಿ ಶಾಲೆಗಳು ಮುಚ್ಚಬೇಕಾಗಿದೆ. ಖಾಸಗಿ ಶಾಲೆಗಳ ಸಿಬ್ಬಂದಿ ಮಾಲೀಕರ ಹೊಟ್ಟೆಮೇಲೆ ಹೊಡೆಯೋ ಕೆಲಸ ಬೇಡಾ, ನಮ್ಗೂ ಕಷ್ಟ ಇದೆ, ನಮ್ಮ ಕಷ್ಟವನ್ನು ಆಲಿಸಿ ಅಂತಾ ಶಿಕ್ಷಣ ಇಲಾಖೆಗೆ ಮನವಿ ಮಾಡಿದ್ದಾರೆ.

ಈಗ ಹೊರಡಿಸಿರುವ ಸುತ್ತೋಲೆಯಲ್ಲಿ ಕೇವಲ ಖಾಸಗಿ ಅನುದಾನಿತ- ಅನುದಾನರಹಿತ ಶಾಲೆಗಳಿಗೆ ಅಷ್ಟೇ ಅನ್ವಯಿಸಲಾಗಿದೆ. ಸರ್ಕಾರಿ ಶಾಲಾ ಮಕ್ಕಳ ಸುರಕ್ಷತೆ ನಿಮ್ಗೆ ಬೇಡ್ವಾ ಎಂದು‌ ರೂಪ್ಸಾ ಶಾಲಾ ಒಕ್ಕೂಟದ ಅಧ್ಯಕ್ಷ ಲೋಕೇಶ್ ತಾಳಿಕೋಟೆ ಪ್ರಶ್ನೆ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.