ETV Bharat / state

ಎರಡು ಸಾವಿರ ಬಟ್ಟೆಯನ್ನು ಕೆಡೆಸಿದ್ದ ಟೈಲರ್‌ಗೆ 10 ಸಾವಿರ ದಂಡ - ಬೆಂಗಳೂರು ನಗರದ 3ನೇ ಹೆಚ್ಚುವರಿ ಗ್ರಾಹಕ ನ್ಯಾಯಾಲಯ

ಪ್ಯಾಂಟ್​ ಬಟ್ಟೆ ವಿರೂಪಗೊಳಿಸಿ ಗ್ರಾಹಕನನ್ನು ಅಲೆದಾಡುವಂತೆ ಮಾಡಿದ ಟೈಲರ್​ಗೆ 10ಸಾವಿರ ದಂಡವನ್ನು ಗ್ರಾಹಕ ನ್ಯಾಯಾಲಯ ವಿಧಿಸಿದೆ.

ten-thousand-fine-for-tailor-who-damaged-clothes-in-bangalore
ಎರಡು ಸಾವಿರ ಬಟ್ಟೆಯನ್ನು ಕೆಡೆಸಿದ್ದ ಟೈಲರ್‌ಗೆ 10 ಸಾವಿರ ದಂಡ
author img

By

Published : Sep 20, 2022, 3:45 PM IST

ಬೆಂಗಳೂರು : ಗ್ರಾಹಕರೊಬ್ಬರ ಪ್ರತಿಷ್ಠಿತ ಬ್ಯಾಂಡ್​ನ ಹೊಸ ಪ್ಯಾಂಟ್​ನ ಬಟ್ಟೆಯ ವಿನ್ಯಾಸ ವಿರೂಪಗೊಳಿಸಿದ ಟೈಲರ್​ಗೆ ನಗರದ ಗ್ರಾಹಕ ಹಕ್ಕು ನ್ಯಾಯಾಲಯ ಹತ್ತು ಸಾವಿರ ರುಪಾಯಿಗಳ ಪರಿಹಾರ ನೀಡುವಂತೆ ಸೂಚನೆ ನೀಡಿದೆ.

ರಾಯಣ್ಣಗೌಡ ಸಲ್ಲಿಸಿದ್ದ ದೂರಿನ ಕುರಿತು ವಿಚಾರಣೆ ನಡೆಸಿದ ಬೆಂಗಳೂರು ನಗರದ 3ನೇ ಹೆಚ್ಚುವರಿ ಗ್ರಾಹಕ ನ್ಯಾಯಾಲಯದ ನ್ಯಾಯಾಧೀಶರು ಪ್ಯಾಂಟ್​ ಬಟ್ಟೆಗೆ ಪಾವತಿಸಿದ 1998 ರೂ.ಗಳು, ಹೊಲಿಗೆ ವೆಚ್ಚ 550ಕ್ಕೆ ಶೇಕಡಾ 9ರ ಬಡ್ಡಿಯ ಜೊತೆಗೆ ಮಾನಸಿಕ ಹಿಂಸೆ ಅನುಭವಿಸಿದ ಪರಿಣಾಮ 5000 ರೂಪಾಯಿ ಪಾವತಿಸುವಂತೆ ಸೂಚನೆ ನೀಡಿದ್ದಾರೆ. ಅಲ್ಲದೇ, ಹಲವು ದಿನಗಳ ಕಾಲ ಕಾನೂನು ಹೋರಾಟ ನಡೆಸಿದ ಪರಿಣಾಮ ಹೆಚ್ಚುವರಿಯಾಗಿ 5000 ರೂಗಳನ್ನು ನೀಡಬೇಕು ಎಂದು ಆದೇಶಿಸಿದ್ದಾರೆ.

ಪ್ರಕರಣದ ಹಿನ್ನೆಲೆ : ವಿಜಯಪುರದ ನಿವಾಸಿ ರಾಯಣ್ಣ ಗೌಡ ಎಂಬುವರು 2016 ರಲ್ಲಿ ಬೆಂಗಳೂರಿನ ನಗರದಲ್ಲಿ 1988 ರೂ.ಗಳ ಮುಖ ಬೆಲೆಯ ಪ್ರತಿಷ್ಠಿತ ಕಂಪನಿಯಲ್ಲಿ ಪ್ಯಾಂಟ್ ಬಟ್ಟೆ ಖರೀದಿಸಿದ್ದರು. ಜತೆಗೆ ಅದೇ ಮಳಿಗೆಯಲ್ಲಿದ್ದ ಟೈಲರ್‌ ಬಳಿ ಹೊಲಿಯಲು ಸೂಚಿಸಿದ್ದರು.

2017ರಲ್ಲಿ ಟೈಲರ್‌ನ್ನು ಸಂಪರ್ಕಿಸಿದಾಗ, ಪ್ಯಾಂಟ್ ಕಾಲಿನ ಭಾಗದಲ್ಲಿ ಹರಿದು ಹೋಗಿ ಬಟ್ಟೆವಿನ್ಯಾಸ ವಿರೂಪಗೊಂಡಿರುವುದು ಗಮನಕ್ಕೆ ಬಂದಿತ್ತು. ಈ ಬಗ್ಗೆ ರಾಯಣ್ಣಗೆ ತಿಳಿಸಿದ ಟೈಲರ್‌ಗೆ ಹೊಸ ಬಟ್ಟೆ ಪ್ಯಾಂಟ್​​​ ಹೊಲಿದು ಕೊಡುವುದಾಗಿ ಭರವಸೆ ನೀಡಿದ್ದರು. ಕೆಲ ದಿನಗಳ ಬಳಿಕ ಟೈಲರ್​ ಬಳಿ ಹೋದಾಗ ಹೊಸ ಪ್ಯಾಂಟ್​ ಹೊಲಿದಿಲ್ಲ ಎನ್ನುವುದಾಗಿ ಹೇಳಿ ಸುಮಾರು 5 ಬಾರಿ ಅಲೆದಾಡಿಸಿದ್ದ.

ಇದರಿಂದ ಬೇಸರಗೊಂಡಿದ್ದ ರಾಯಣ್ಣ 2017ರ ಫೆಬ್ರವರಿ 7ರಂದು ಮತ್ತೆ ಟೈಲರ್ ಸಂಪರ್ಕಿಸಿದರು. ಈ ವೇಳೆ, ನೀವು ಖರೀದಿಸಿದ್ದ ಗುಣಮಟ್ಟದ ಪ್ಯಾಂಟ್ ಮೇಟಿರಿಯಲ್ ಲಭ್ಯವಾಗುತ್ತಿಲ್ಲ ಎಂದು ವಿವರಿಸಿದ್ದರು. ಇದರಿಂದ ಮನನೊಂದಿದ್ದ ರಾಯಣ್ಣ ಗ್ರಾಹಕರ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದರು.

ಇದನ್ನೂ ಓದಿ : ಕೇಂದ್ರ ಸಚಿವ ನಾರಾಯಣ ರಾಣೆ ಬಂಗಲೆ ಕೆಡವಲು ಬಾಂಬೆ ಹೈಕೋರ್ಟ್​ ಆದೇಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.