ETV Bharat / state

ಪ್ರಸ್ತುತ ಅಧಿವೇಶನದಿಂದ ಬಿಜೆಪಿಯ ಹತ್ತು ಶಾಸಕರ ಅನಮಾತು: ಸಮರ್ಥಿಸಿಕೊಂಡ ಸಿಎಂ ಸಿದ್ದರಾಮಯ್ಯ..! - ಸಚಿವ ಪ್ರಿಯಾಂಕ ಖರ್ಗೆ

ಪ್ರಸ್ತುತ ಅಧಿವೇಶನದಿಂದ ಸ್ವೀಕರ್​ ಯು.ಟಿ. ಖಾದರ್​, ಬಿಜೆಪಿಯ ಹತ್ತು ಶಾಸಕರನ್ನು ಅನಮಾತು ಮಾಡಿರುವುದನ್ನು ಸಿಎಂ ಸಿದ್ದರಾಮಯ್ಯ ಸಮರ್ಥಿಸಿಕೊಂಡರು.

CM Siddaramaiah
ಪ್ರಸ್ತುತ ಅಧಿವೇಶನದಿಂದ ಬಿಜೆಪಿಯ ಹತ್ತು ಶಾಸಕರ ಅನಮಾತು ಸಮರ್ಥಿಸಿಕೊಂಡ ಸಿಎಂ ಸಿದ್ದರಾಮಯ್ಯ
author img

By

Published : Jul 19, 2023, 9:10 PM IST

ಬೆಂಗಳೂರು: ವಿಧಾನಸಭೆ ಉಪ ಸಭಾಧ್ಯಕ್ಷರ ಮೇಲೆ ಪೇಪರ್ ತೂರುವುದು ತಪ್ಪಲ್ಲವೇ? ಇಂತಹ ವರ್ತನೆಗೆ ಕ್ರಮ ಕೈಗೊಳ್ಳಬಾರದೇ ಎಂದು ಅನುಚಿತ ವರ್ತನೆ ಆರೋಪದ ಮೇಲೆ ಬಿಜೆಪಿಯ 10 ಶಾಸಕರ ಅಮಾನತು ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ವಿಧಾನಸೌಧದ ಲಾಂಜ್​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಚರ್ಚೆ ಮಾಡಲು ಧರಣಿ‌ ಮಾಡಲು ಅವಕಾಶ ಇದೆ. ಆದರೆ, ಕಾಗದ ಪತ್ರ ಹರಿದು ಮುಖದ ಮೇಲೆ ಎಸೆದಿದ್ದಾರೆ. ಡೆಪ್ಯೂಟಿ ಸ್ಪೀಕರ್ ದಲಿತ ಸಮುದಾಯದವರು ಅವರ ಮುಖಕ್ಕೆ ಎಸೆದಿದ್ದಾರೆ. ಇದು ತಪ್ಪಲ್ಲವಾ? ಸ್ಪೀಕರ್ ಇವರು ಹೇಳಿದಂತೆ ಕೇಳಿದರೆ ಒಳ್ಳೆಯವರು, ಇಲ್ಲ ಅಂದರೆ ಸರ್ಕಾರದ ಕೈಗೊಂಬೆನಾ?'' ಎಂದು ಪ್ರಶ್ನಿಸಿದರು. ಶಾಸಕ ಬಸನಗೌಡ ಯತ್ನಾಳ್​ಗೆ ಪೆಟ್ಟು ಬಿದ್ದಿರುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ, ಅವರ ಕಡೆಯವರೇ ತಳ್ಳಿರಬೇಕು ಎಂದರು.

ಸಚಿವ ಪ್ರಿಯಾಂಕ ಖರ್ಗೆ ಮಾತನಾಡಿ, ''ಅಮಾನತು ಯಾಕೆ ಆಗಿದ್ದಾರೆ ಎಂದು ಅವರು ಮನವರಿಕೆ‌ಮಾಡಿಕೊಳ್ಳಲಿ. ಉಪಸಭಾಧ್ಯಕ್ಷರ ಮೇಲೆ ಪೇಪರ್ ಹರಿದು ಎಸೆದ್ದಿದ್ದರಾರೆ. ಬಿಜೆಪಿಯವರು ಹತಾಶರಾಗಿದ್ದಾರೆ. ನಮ್ಮ ಉಪ ಸಭಾಧ್ಯಕ್ಷರು ದಲಿತರು, ಶೋಷಣೆಗೆ ಒಳಗಾದವರು. ಈ ಸಮಾಜದವರು ಮುಂದಾಳತ್ವಕ್ಕೆ ಬರುತ್ತಿದ್ದಾರೆ ಎಂದು ಬಿಜೆಪಿಯವರಿಗೆ ಕೋಪ ಹಾಗಾಗಿ ಪ್ರತಿಭಟನೆ ಮಾಡಿದ್ದಾರೆ. ಮುಂದೆ ಜನ ಈ ಬಗ್ಗೆ ತೀರ್ಮಾನ ಮಾಡುತ್ತಾರೆ ಡೆಪ್ಯುಟಿ ‌ಸ್ಪೀಕರ್ ಮೇಲೆ ಪೇಪರ್ ಹರಿದು ಹಾಕಿದ್ದಕ್ಕೆ ಅಮಾನತು ಮಾಡಿದ್ದಾರೆ. ಡೆಪ್ಯುಟಿ ಸ್ಪೀಕರ್ ಮೇಲೆ ಪೇಪರ್ ಎಸೆದು ಬಿಜೆಪಿಯವರು ಜಾತಿ ನಿಂದನೆ ಮಾಡಿದ್ದಾರೆ. ನಪುಂಸಕ‌ ಪಕ್ಷ ಇವತ್ತು ವಿರೋಧ ಪಕ್ಷ ಆಗಿದೆ ಎಂದು ವಾಗ್ದಾಳಿ ನಡೆಸಿದರು.

ಪ್ರಜಾಪ್ರಭುತ್ವದ ಕಗ್ಗೊಲೆ- ಆರೋಪ: ಶಾಸಕ ನಾರಾಯಣ ಸ್ವಾಮಿ ಮಾತಮಾಡಿ, ''ಬಿಜೆಪಿ ಬಣ್ಣ ಬಯಲಾಗಿದೆ ಬಿಜೆಪಿ‌ ಪಕ್ಷದವರು ಈ ಹಿಂದೆ ಮಾಡಿರುವ ದಲಿತರ ಮೇಲೆ ದಬ್ಬಾಳಿಕೆಯನ್ನು ಸಹಸಿಕೊಂಡಿದ್ದೇವೆ. ಇ‌ಂದು ಪ್ರಜಾಪ್ರಭುತ್ವದ ಕಗ್ಗೊಲೆ ಆಗಿದೆ. ಅಭಿವೃದ್ಧಿಗಳ‌ ಚರ್ಚೆ ಮಾಡಿಲ್ಲ. ಸವಲತ್ತುಗಳು ಕಡಿಮೆ ಆಗಿದ್ದರೆ, ವಿರೋಧ ಪಕ್ಷಗಳು ಸಲಹೆ ನೀಡಲಿ. ನಾವು ಕೂಡ ವಿರೋಧ ಪಕ್ಷದಲ್ಲಿ ಇದ್ದೆವು. ಆದರೆ, ಈ ರೀತಿ ನಾವು ಮಾಡಿಲ್ಲ ಹಿಂದೆ ಇದ್ದ ಸ್ಪೀಕರ್ ನೇರವಾಗಿ ಆರ್​ಆರ್​ಎಸ್ ಎಂದು ಹೇಳಿದ್ದರು. ಆವಾಗಲೂ ಕೂಡ ನಾವು ಸುಮ್ಮನಿದ್ದೆವು, ಸಿದ್ದರಾಮಯ್ಯ ಒಳ್ಳೆ ಬಜೆಟ್ ಕೊಟ್ಟಿದ್ದಾರೆ. ಹತಾಶಾರಾದ ಬಿಜೆಪಿಯವರು ಸುಳ್ಳಿನ ಕಾರಣಕ್ಕೆ ಪ್ರತಿಭಟನೆ ಮಾಡುತ್ತಿದ್ದಾರೆ. ಒಬ್ಬ ದಲಿತ ನಾಯಕನ್ನ ಮೊದಲ‌ ಬಾರಿಗೆ ಕಾಂಗ್ರೆಸ್ ಆಯ್ಕೆ‌ ಮಾಡಿದೆ. ಆ ಸ್ಥಾ‌ನಕ್ಕೆ ಇಂದು ಬಿಜೆಪಿಯವರು ಅವಮಾನ ಮಾಡಿದ್ದಾರೆ ಇದನ್ನು ನಾನು ಖಂಡಿಸುತ್ತೇನೆ'' ಎಂದರು.

ಗ್ಯಾರಂಟಿಗಳು ಜಾರಿಯಾಗಿದ್ದಕ್ಕೆ ಬಿಜೆಪಿಯವರ ಹೊಟ್ಟೆಗೆ ಬಿದ್ದ ಬೆಂಕಿ- ಸಿದ್ದರಾಮಯ್ಯ: ''ನಾವು ಬಸವಣ್ಣನವರ ಸಂಸ್ಕಾರದಂತೆ ನುಡಿದಂತೆ ನಡೆದು ಐದು ಗ್ಯಾರಂಟಿಗಳನ್ನು ಜಾರಿ ಮಾಡಿದ್ದನ್ನು ನಾಡಿನ ಜನ ಸ್ವಾಗತಿಸಿದ್ದಾರೆ. ಇದನ್ನು ಬಿಜೆಪಿಯವರಿಗೆ ಸಹಿಸಲು ಆಗುತ್ತಿಲ್ಲ. ಸಂಕಟ ತಡೆದುಕೊಳ್ಳಲು ಆಗುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಪ್ರತಿಪಕ್ಷಗಳ ವಿರುದ್ಧ ಡಿಕೆಶಿ ವಾಗ್ದಾಳಿ: ಇದೇ ವೇಳೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ''ಉತ್ತರ ಭಾರತದಿಂದ ಬೇರೆ ಸಿಎಂಗಳು ಬಂದಿದ್ರು. ಅದನ್ನು ಬಿಜೆಪಿಗೆ ರಾಜಕೀಯವಾಗಿ ಸಹಿಸಿಕೊಳ್ಳಲು ಆಗಿಲ್ಲ. ಇಲ್ಲಿಯವರೆಗೆ ವಿರೋಧ ಪಕ್ಷದ ನಾಯಕನನ್ನು ಮಾಡಿಲ್ಲ. ಅವರು ಸೋತಿದ್ದಾರೆ ಅದಕ್ಕೆ ಆ ಕಡೆ ಕೂತಿದ್ದಾರೆ. ಅವರಿಗೆ ನಮ್ಮ ಆಡಳಿತ ಸಹಿಸಿಕೊಳ್ಳಲು ಆಗುತ್ತಿಲ್ಲ'' ಎಂದ ಅವರು, ''ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡದೇ ಇರೋದು ಕರ್ನಾಟಕದ ಜನತೆಗೆ ಮಾಡಿದ ಅಪಮಾನ ಅಲ್ವಾ? ಅವರ ಪಾರ್ಟಿಯಲ್ಲಿ ಏನಾಗ್ತಿದೆ ಅನ್ನೋದೇ ಅವರಿಗೆ ಗೊತ್ತಿಲ್ಲ. ಶೋಷಣೆಗೆ ಒಳಗಾಗಿರುವಂತ ಸಮಾಜದವರು ಡೆಪ್ಯುಟಿ ಸ್ಪೀಕರ್ ಅವರು. ನಾವು ಹಿಂದೆ ಪ್ರತಿಭಟನೆ ಮಾಡಿದ್ದೇವೆ. ಆದರೆ ಇವರ ರೀತಿಯಲ್ಲಿ ನಡೆದುಕೊಂಡಿಲ್ಲ. ದಲಿತ ಸಮಾಜದ ವ್ಯಕ್ತಿ ಆ ಪೀಠದಲ್ಲಿ ಕುಳಿತುಕೊಂಡಿದ್ದನ್ನು ಇವರು ಸಹಿಸಿಲ್ವಾ? ಹಿಂದೆ ಸ್ಪೀಕರ್ ಆಗಿ ಅಲ್ಲಿ ಕೂತವರು ಆರ್​ಎಸ್ಎಸ್ ಶಾಖೆಯಿಂದ ಬಂದಿದ್ದವರು. ಇವತ್ತು ಅದು ಬದಲಾವಣೆ ಆಗಿದೆ. ಪೀಠಕ್ಕೆ ಅಗೌರವ ತೋರಿರುವ ಸದಸ್ಯರು ಕ್ಷಮೆ ಕೇಳಲೇಬೇಕು. ಸಂವಿಧಾನ, ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇದ್ದರೆ, ಕ್ಷಮೆ ಕೇಳಬೇಕು'' ಎಂದು ಆಗ್ರಹಿಸಿದರು.

ಅವರನ್ನು ಸರಿಪಡಿಸುವ ಕೆಲಸ ಮಾಡ್ತೀನಿ: ಬಳಿಕ ಮಾತನಾಡಿದ ಸ್ಪೀಕರ್ ಯು.ಟಿ. ಖಾದರ್, ''ಇವತ್ತಿನ ಸಣ್ಣ ಘಟನೆ ದೊಡ್ಡದಾಗಿದೆ. ಪ್ರೋಟೋಕಾಲ್‌ ಬಗ್ಗೆ ಚರ್ಚೆಗೆ ಅವಕಾಶ ಕೊಟ್ಟಿದ್ದೆ. ಆದರೆ, ಅದೇ ಕಾರಣ ಇಟ್ಟುಕೊಂಡು ಇಲ್ಲಿ ಬಂದು ಧರಣಿ ಮಾಡಿದ್ರು. ಧರಣಿ ಮಾಡಲು ಎಲ್ಲರಿಗೂ ಅವಕಾಶ ಇದೆ. ಯಾರಿಗೆ ಮಾತಾಡಲು ಅವಕಾಶ ನೀಡಲಾಗಿರುತ್ತದೆಯೋ ಅವರು ಮಾತ್ರ ಮಾತಾಡಿ. ಉಳಿದವರು ಊಟ ಮಾಡಿ ಬಂದು ಮಾತಾಡಿ ಎಂದು ಮಧ್ಯಾಹ್ನ ನಾನು ಹೇಳಿ ಹೋಗಿದ್ದೆ. ಅವಾಗ ನಾನು ಇಲ್ಲಿಗೆ ಡೆಪ್ಯುಟಿ ಸ್ಪೀಕರ್​ಗೆ ಆಹ್ವಾನ ಮಾಡಿದ್ದೆ'' ಎಂದು ತಿಳಿಸಿದರು.

ಇದನ್ನೂ ಓದಿ: ವಿಧಾನಸೌಧದ ಪಶ್ಚಿಮದ್ವಾರದಲ್ಲಿ ಬಿಜೆಪಿ ಶಾಸಕರ ಧರಣಿ, ಪ್ರತಿಭಟನೆ: ಶಾಸಕರನ್ನ ವಶಕ್ಕೆ ಪಡೆದ ಪೊಲೀಸರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.