ETV Bharat / state

ಟೆಲಿವಿಷನ್ ಕ್ರಿಕೆಟ್ ಲೀಗ್ ಸೀಸನ್ 4: ಜೆರ್ಸಿ ಅನಾವರಣ ಮಾಡಿದ ನೀನಾಸಂ ಸತೀಶ್ - ETV Bharath Kannada

ದೂರದರ್ಶನದ ಕಲಾವಿದರ ತಂಡ ಆಡುವ ಕ್ರಿಕೆಟ್​ ಲೀಗ್​ನ 4 ನೇ ಆವೃತ್ತಿಯ ಲೋಗೋ, ಜರ್ಸಿ ಮತ್ತು ಟ್ರೋಫಿಯನ್ನು ಲುಲು ಮಾಲ್​ನಲ್ಲಿ ಬಿಡುಗಡೆ ಮಾಡಲಾಯಿತು.

ಟೆಲಿವಿಷನ್ ಕ್ರಿಕೆಟ್ ಲೀಗ್ ಸೀಸನ್ 4
ಜೆರ್ಸಿ ಅನಾವರಣ ಮಾಡಿದ ನೀನಾಸಂ ಸತೀಶ್
author img

By

Published : Dec 5, 2022, 2:04 PM IST

ಬೆಂಗಳೂರು: 2019ರಲ್ಲಿ ಆರಂಭವಾಗಿ ಯಶಸ್ವಿಯಾಗಿ 3 ಸೀಸನ್​ಗಳನ್ನು ಪೂರೈಸಿರುವ ಟೆಲಿವಿಷನ್ ಕ್ರಿಕೆಟ್ ಲೀಗ್ ನ 4 ನೇ ಆವೃತ್ತಿ (ಸೀಸನ್ 4) ಸದ್ಯದಲ್ಲೇ ಆರಂಭವಾಗಲಿದೆ. ಇತ್ತೀಚಿಗೆ ಈ ಕ್ರಿಕೆಟ್ ಪಂದ್ಯಾವಳಿಯ ಜರ್ಸಿ ಹಾಗೂ ಟ್ರೋಫಿ ಬಿಡುಗಡೆ ಸಮಾರಂಭ ಲುಲು ಗ್ಲೋಬಲ್ ಮಾಲ್​ನಲ್ಲಿ ನಡೆಯಿತು. ಖ್ಯಾತ ನಟ ನೀನಾಸಂ ಸತೀಶ್, ಹೊಂಬಾಳೆ ಸಂಸ್ಥೆಯ ಶೈಲಜಾ ವಿಜಯ್ ಕಿರಗಂದೂರು ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಟ್ರೋಫಿ ಹಾಗೂ ಜರ್ಸಿ ಬಿಡುಗಡೆ ಮಾಡಿದರು.

ದೀಪಕ್ ಟೆಲಿವಿಷನ್ ಕ್ರಿಕೆಟ್ ಲೀಗ್​ನ ಫೌಂಡರ್ ಮಂಜೇಶ್ ಮತ್ತು ದಿವ್ಯ ಪ್ರಸಾದ್ ಕೋ ಫೌಂಡರ್ ಆಗಿದ್ದಾರೆ. ಟ್ರಿನ್ಕೊ ಇನ್ಫ್ರಾ ಪ್ರೈವೇಟ್ ಲಿಮಿಟೆಡ್ ಟೆಲಿವಿಷನ್ ಕ್ರಿಕೆಟ್ ಲೀಗ್ ಸೀಸನ್ 4ರ ಟೈಟಲ್ ಪ್ರಾಯೋಜಕರಾಗಿದ್ದಾರೆ. ಟೆಲಿವಿಷನ್ ಕ್ರಿಕೆಟ್ ಯಶಸ್ವಿಯಾಗಿ 3 ಸೀಸನ್ ಪೂರೈಸಿದೆ. 4 ಸೀಸನ್ ನಲ್ಲಿ 6 ತಂಡಗಳು ಭಾಗಿಯಾಗಲಿವೆ.

ತಂಡಗಳ ವಿವರ:

  • ಪ್ರೊವಿಟೇಲ್ ಹೆಲ್ತ್ ನ ಡಾ||ಶಿಲ್ಪ ಮಾಲೀಕತ್ವದ ರೋರಿಂಗ್ ಲಯನ್ಸ್ ತಂಡದ ನಾಯಕ ಕಿರಿಕ್ ಕೀರ್ತಿ ಹಾಗೂ ಉಪನಾಯಕ ಕಾರ್ತಿಕ್ ಮಹೇಶ್. ಶೃತಿ ರಮೇಶ್, ಶುಭ ರಕ್ಷ ಹಾಗೂ ಸುಶ್ಮಿತ.
  • ಡಾ||ಚೇತನ ಪ್ರೊಡಕ್ಷನ್ಸ್​ನ ಡಾ||ಚೇತನ ಮಾಲೀಕತ್ವದ ಜಟಾಯು ತಂಡದ ನಾಯಕನಾಗಿ ಹರ್ಷ ಸಿ.ಹೆಚ್ ಗೌಡ ಹಾಗೂ ಉಪನಾಯಕನಾಗಿ ಹರೀಶ್ ಇದ್ದಾರೆ. ಸಾಕ್ಷಿ ಮೇಘನಾ ಹಾಗೂ ಪೂಜಾ.
  • ಡಿ ಜಿ ಇನ್ಫಿನಿಟಿ ಕಂಪನಿಯ ಸುಲ್ತಾನ್ ಹಾಗೂ ಎಂ.ಆರ್ ಸ್ವಾಮಿ ಮಾಲೀಕರಾಗಿರುವ ಕ್ರೇಜಿ ಕಿಲ್ಲರ್ ತಂಡದ ನಾಯಕ ಅರ್ಜುನ್ ಯೋಗಿ ಹಾಗೂ ಉಪನಾಯಕ ಚೇತನ್ ವಿಕಾಸ್. ಮೇಘನಾ ಹಾಗೂ ಆವಂತಿಕ ಈ ತಂಡದ ರಾಯಭಾರಿಗಳು.
  • ಅಮ್ಮಾಸ್ ಫುಡ್ ಶ್ರೀನಿಧಿ ಅವರ ಮಾಲೀಕತ್ವದ ಗ್ಯಾಂಗ್ ಗರುಡಾಸ್ ತಂಡದ ನಾಯಕನಾಗಿ ಮಾಸ್ಟರ್ ಆನಂದ್ ಹಾಗೂ ಉಪನಾಯಕನಾಗಿ ಕರಿಬಸವ ಇದ್ದಾರೆ. ತನಿಶಾ, ಪಲ್ಲವಿ ಗೌಡ ಹಾಗೂ ದ್ರವ್ಯ ಶೆಟ್ಟಿ ಈ ತಂಡದ ರಾಯಭಾರಿಗಳು.
  • ಪ್ರಧಾನ್ ಟೀವಿಯ ಪ್ರಶಾಂತ್ ಹಾಗೂ ನಾಗಶ್ರೀ ಮಾಲೀಕರಾಗಿರುವ ಚಾಂಪಿಯನ್ ಚೀತಸ್ ತಂಡದ ನಾಯಕನಾಗಿ ಹೇಮಂತ್ ಹಾಗೂ ಮಂಜು ಪಾವಗಡ ಉಪನಾಯಕನಾಗಿದ್ದಾರೆ. ವಿಜಯಲಕ್ಷ್ಮಿ, ಯಶಸ್ವಿನಿ ಮತ್ತು ಜಾಹ್ನವಿ ಈ ತಂಡದ ರಾಯಭಾರಿಗಳು.
  • ಕಿರೀಟಿ ವೆಂಚರ್​ನ ಕುಶಾಲ್ ಗೌಡ ಮಾಲೀಕತ್ವದ ಗಜಪಡೆ ವಾರಿಯರ್ಸ್ ತಂಡದ ನಾಯಕನಾಗಿ ವಿವಾನ್ ಹಾಗೂ ಉಪನಾಯಕನಾಗಿ ಶ್ರೀರಾಮ್ ಇದ್ದಾರೆ. ವರ್ಷಿತಾ, ಅಮೂಲ್ಯ ಹಾಗೂ ಅನಿಕಾ ಈ ತಂಡದ ರಾಯಭಾರಿಗಳಾಗಿದ್ದಾರೆ.

ಎರಡು ದಿನಗಳ ಕಾಲ ಟೆಲಿವಿಷನ್ ಕ್ರಿಕೆಟ್ ಲೀಗ್ ಸೀಸನ್ 4ರ ಪಂದ್ಯಗಳು ನಡೆಯಲಿವೆ. ಪಂದ್ಯಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ಫೌಂಡರ್ ದೀಪಕ್ ತಿಳಿಸಿದ್ದಾರೆ.

ಇದನ್ನೂ ಓದಿ: ಎಡಗೈ ಆಟಗಾರನಂತೆ ಬ್ಯಾಟ್​ ಬೀಸಿದ ರೂಟ್​ : ಪಾಕ್​ ಗೆಲುವಿಗೆ 263ರನ್​ ಬಾಕಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.