ETV Bharat / state

ಟೆಲಿಫೋನ್ ಕದ್ದಾಲಿಕೆ ಪ್ರಕರಣ.. ಮತ್ತೆ ತನಿಖೆ ಚುರುಕುಗೊಳಿಸಿದ ಸಿಬಿಐ ಅಧಿಕಾರಿಗಳ ತಂಡ - Investigation of two ACP's by CBI

ಟೆಲಿಫೋನ್ ಕದ್ದಾಲಿಕೆ ಪ್ರಕರಣ ದಿನೇದಿನೆ ಹೊಸ ಹೊಸ ತಿರುವ ಪಡೆಯುತ್ತಿರುವ ಹಿನ್ನೆಲೆ ಇಂದು ಎಸಿಪಿ ರಾಮಚಂದ್ರ ಅವರಿಗೆ ಪುನಾ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

Telephone tapping
author img

By

Published : Oct 2, 2019, 6:39 PM IST

ಬೆಂಗಳೂರು: ಟೆಲಿಫೋನ್ ಕದ್ದಾಲಿಕೆ ಪ್ರಕರಣದ ತನಿಖೆಯನ್ನು ಸಿಬಿಐ ಅಧಿಕಾರಿಗಳು ಮತ್ತೆ ಚುರುಕುಗೊಳಿಸಿದ್ದಾರೆ. ನಿನ್ನೆ ಇಬ್ಬರು ಎಸಿಪಿಗಳನ್ನ ವಿಚಾರಣೆಗೊಳಪಡಿಸಿದ ಸಿಬಿಐ ತಂಡ, ಹಲವಾರು ಮಾಹಿತಿಯನ್ನ ಕಲೆ ಹಾಕಿದೆ.

ಕದ್ದಾಲಿಕೆ ಪ್ರಕರಣದಲ್ಲಿ ಎಸಿಪಿ ರಾಮಚಂದ್ರ ಅವರ ಪಾತ್ರ ಬಹಳ ಪ್ರಮುಖವಾಗಿರುವ ಕಾರಣ ಅವರನ್ನ ಇಂದು ಕೂಡ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದು, ಹೀಗಾಗಿ ಇಂದು ರಾಮಚಂದ್ರ ಅವರು ವಿಚಾರಣೆಗೆ ಹಾಜರಾಗಿದ್ದಾರೆ.

ಸಿಬಿಐ ಕಚೇರಿಗೆ ತೆರಳುತ್ತಿರುವ ಎಸಿಪಿ ರಾಮಚಂದ್ರ..

ಎಸಿಪಿ ರಾಮಚಂದ್ರ ಅವರ ಪಾತ್ರವೇನು: ಕೇಂದ್ರ ಅಪರಾಧ ವಿಭಾಗದ ಸಿಸಿಬಿ ಎಸಿಪಿಯಾಗಿದ್ದ ವೇಳೆ ರಾಮಚಂದ್ರ ಅವರು ಹಿರಿಯ ಅಧಿಕಾರಿ ಅಲೋಕ್ ಕುಮಾರ್ ಅವರ ಸೂಚನೆ ಮೇರೆಗೆ ‌ರಾಜ್ಯದ ಪ್ರಭಾವಿ ರಾಜಕಾರಣಿಗಳು, ಸ್ವಾಮೀಜಿಗಳು ಹಾಗೂ ಅಧಿಕಾರಿಗಳ ಫೋನ್ ಟ್ಯಾಪಿಂಗ್ ಮಾಡಿದ್ದಾರೆ. ಆದರೆ, ಈ ವಿಚಾರ ಸಿಬಿಐ ತನಿಖೆಯಲ್ಲಿ ಬಯಲಾಗ್ತಿದ್ದ ಹಾಗೆ ಎಸಿಪಿ ರಾಮಚಂದ್ರ ಅವರು‌ ಸಾಕ್ಷಿಗಳ ನಾಶ ಮಾಡಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಹಿರಿಯ ಅಧಿಕಾರಿ ಸೂಚನೆ ಮೇರೆಗೆ ಎಸಿಪಿ ಫೋನ್ ಟ್ಯಾಪ್ ಮಾಡಲೆಂದೇ ಎರಡು ಮೊಬೈಲ್ ಮತ್ತು ಸಿಮ್ ಖರೀದಿ ಮಾಡಿ ಎರಡೂ ಮೊಬೈಲ್​​​ಗಳಿಂದ ಯಾವುದೆಲ್ಲ ಮೊಬೈಲ್ ಟ್ಯಾಪ್ ಮಾಡಬೇಕೆಂದು ಮನೆಯಲ್ಲೇ ಇದ್ದುಕೊಂಡು ಫೋನ್​​ ಕದ್ದಾಲಿಕೆ ಮಾಡುತ್ತಿದ್ದರು. ಈ ವಿಚಾರ ತಿಳಿದ ಸಿಬಿಐ, ಎಸಿಪಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದಾಗ ರಾಮಚಂದ್ರ ಅವರು ಫೊನ್ ಟ್ಯಾಪ್ ಮಾಡಲೆಂದು ಇಟ್ಟುಕೊಂಡಿದ್ದ ಎರಡು ಮೊಬೈಲ್ ಹಾಗೂ ಸಿಮ್​​ಗಳನ್ನು ಕಲ್ಲಿನಿಂದ ಜಜ್ಜಿ ಬಿಸಾಕಿರುವ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

Intro:ಟೆಲಿಪೋನ್ ಕದ್ದಾಲಿಕೆ ಪ್ರಕರಣ
ಸಿಬಿಐ ಅಧಿಕಾರಿಗಳಿಂದ ಮತ್ತೆ ತನೀಕೆ ಚುರುಕು

ಟೆಲಿಪೋನ್ ಕದ್ದಾಲಿಕೆ ಪ್ರಕರಣದ ತನಿಖೆಯನ್ನ‌ ಸಿಬಿಐ ಅಧಿಕಾರಿಗಳು ಮತ್ತೆ ತನೀಕೆ ಚುರುಕುಗೊಳಿಸಿದ್ದಾರೆ‌. ನಿನ್ನೆ ಇಬ್ಬರು ಎಸಿಪಿಗಳನ್ನ ವಿಚಾರಣೆಗೆ ಗುರಿಪಡಿಸಿದ ಸಿಬಿಐ ತಂಡ ಹಲವಾರು ಮಾಹಿತಿಯನ್ನ ಕಲೆ ಹಾಕಿದ್ದಾರೆ.
ಆದ್ರೆ ಎಸಿಪಿ ರಾಮಚಂದ್ರ ಅವರ ಪಾತ್ರ ಬಹಳ ಪ್ರಮುಖವಾಗಿರುವ ಕಾರಣ ಎಸಿಪಿ ರಾಮಚಂದ್ರ ಅವರನ್ನ ಇಂದು ಕೂಡ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದು ಹೀಗಾಗಿ ಇಂದು ರಾಮಚಂದ್ರ ಅವರು ವಿಚಾರಣೆಗೆ ಹಾಜರಾಗಿದ್ದಾರೆ.

ಎಸಿಪಿ ರಾಮಚಂದ್ರ ಅವರ ಪಾತ್ರವೇನು..

ಕೇಂದ್ರ ಅಪರಾಧ ವಿಭಾಗದ ಸಿಸಿಬಿ ಎಸಿಪಿಯಾಗಿದ್ದ ವೇಳೆ ರಾಮಚಂದ್ರ ಅವರು ಹಿರಿಯ ಅಧಿಕಾರಿ ಅಲೋಕ್ ಕುಮಾರ್ ಅವರ ಸೂಚನೆ ಮೇರೆಗೆ ‌ರಾಜ್ಯದ ಪ್ರಭಾವಿರಾಜಕಾರಣಿಗಳು.ಸ್ವಾಮೀಜಿಗಳು ಹಾಗೂ ಅಧಿಕಾರಿಗಳ ಪೋನ್ ಟ್ಯಾಪಿಂಗ್ ಅನ್ನ ಮಾಡಿದ್ದಾರೆ. ಆದ್ರೆ ಈ ವಿಚಾರ ಸಿಬಿಐ ತನೀಕೆಯಲ್ಲಿ ಬಯಲಾಗ್ತಿದ್ದ ಹಾಗೆ ಎಸಿಪಿ ರಾಮಚಂದ್ರ ಅವರು‌ ಸಾಕ್ಷಿಗಳ ನಾಶ ಮಾಡಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಹಿರಿಯ ಅಧೀಕಾರಿ ಸೂಚನೆ ಮೇರೆಗೆ ಎಸಿಪಿ ಫೋನ್ ಟ್ಯಾಪ್ ಮಾಡಲೆಂದೆ ಎರಡು ಮೊಬೈಲ್ ಸಿಮ್ ಖರೀದಿ ಮಾಡಿ ಎರಡು ಮೊಬೈಲ್ಗಳಿಂದ ಯಾರದೆಲ್ಲಾ ಮೊಬೈಲ್ ಟ್ಯಾಪ್ ಮಾಡಬೇಕೆಂದು ಮನೆಯಲ್ಲೇ ಇದ್ದು ಕೊಂಡು ಪೋನೊ ಕದ್ದಾಲಿಕೆ ಮಾಡುತ್ತಿದ್ದರು. ಈ ವಿಚಾರ ತಿಳಿದು ಸಿಬಿಐ ಎಸಿಪಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದಾಗ ರಾಮಚಂದ್ರ ಅವರು ಫೊನ್ ಟ್ಯಾಪ್ ಮಾಡಲೆಂದೆ ಇಟ್ಟುಕೋಂಡಿದ್ದ ಎರಡು ಮೊಬೈಲ್ ಹಾಗೂ ಸೀಮ್ ಕಲ್ಲಿನಿಂದ ಜಜ್ಜಿ ಬಿಸಾಕಿರುವ ವಿಚಾರ ತನೀಕೆಯಲ್ಲಿ ಬಯಾಲಾಗಿದೆ.
ಹೀಗಾಗಿ ಸಿಬಿಐ ಆ ಎರಡು ಮೊಬೈಲ್ ಹಾಗೂ ಸಿಮ್ ಜಾಡು ಹಿಡಿದು ಹೊರಟಿದ್ದು ರಾಮಚಂದ್ರ ಅವರ ತನೀಕೆಯನ್ನ ಚುರುಕುಗೊಳಿಸಿದ್ದಾರೆBody:KN_BNG_07_cbI_7204498Conclusion:KN_BNG_07_cbI_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.