ಬೆಂಗಳೂರು: ಐತಿಹಾಸಿಕ 13ನೇ ಆವೃತ್ತಿಯ ಏರ್ ಶೋ ಇಂದು 2ನೇ ದಿನಕ್ಕೆ ಕಾಲಿಟ್ಟಿದ್ದು, ಸಂಸದ ತೇಜಸ್ವಿ ಸೂರ್ಯ ಕೂಡ ಭಾರತೀಯ ಯುದ್ಧ ವಿಮಾನ ತೇಜಸ್‌ನಲ್ಲಿ ಸುಮಾರು 45 ನಿಮಿಷಗಳ ಕಾಲ ಹಾರಾಟ ನಡೆಸಿದ್ದಾರೆ.
ತೇಜಸ್‌ನಲ್ಲಿ ಹಾರಾಟದ ಅನುಭವವನ್ನು ಸಂಸದ ತೇಜಸ್ವಿ ಸೂರ್ಯ ಈಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದು, ಈ ವೇಳೆ ಅವರಿಗೆ ನಮ್ಮ ಪ್ರತಿನಿಧಿ ಏರ್ ಶೋನಲ್ಲಿ ಕನ್ನಡ ಪದ ಬಳಕೆಯಾಗಿಲ್ಲ ಹಾಗೂ ಕನ್ನಡದ ಬೋರ್ಡ್ಗಳು ಯಾಕೆ ಇಲ್ಲ ಎಂದು ಕೇಳಿದರು.
ಈ ಕುರಿತು ಮಾತನಾಡಿದ ಅವರು, ಇಲ್ಲಿ ಜರ್ಮನಿ, ಫ್ರಾನ್ಸ್ ಸೇರಿದಂತೆ ವಿದೇಶದ ಜನರು ಹೆಚ್ಚಾಗಿ ವಹಿವಾಟು ಮಾಡಲು ಬಂದಿದ್ದಾರೆ. ಅವರಿಗೆ ಅರ್ಥವಾಗಲು ಇಂಗ್ಲಿಷ್ ಬೋರ್ಡ್ಗಳನ್ನು ಹಾಕಲಾಗಿದೆ ಎಂದರು.
ಇಲ್ಲಿ ಹಿಂದಿ ಬೋರ್ಡ್ ರಾರಾಜಿಸುತ್ತಿಲ್ಲ. ಇಂಗ್ಲಿಷ್ ಬೋರ್ಡ್ಗಳು ಇಲ್ಲಿವೆ. ವಿದೇಶಿಗರಿಗೆ ಕನ್ನಡ ಬೋರ್ಡ್ ಹಾಕಿದರೆ ಏನು ಅರ್ಥವಾಗುತ್ತದೆ ಎಂದರು ಹಾಗೂ ನಮ್ಮ ದೇಶದಲ್ಲಿ ಸ್ಥಳೀಯ ಭಾಷೆಗಳಿಗೆ ಪ್ರಾಮುಖ್ಯತೆ ಸಿಗಬೇಕು ಎಂದರು.