ETV Bharat / state

ಶಿಕ್ಷಕರಿಂದ 50 ಕೋಟಿ ರೂ ನೆರೆ ಸಹಾಯಹಸ್ತ: 42 ಉತ್ತಮ ಶಿಕ್ಷಕರಿಗೆ ರಾಜ್ಯ ಪ್ರಶಸ್ತಿ ಪುರಸ್ಕಾರ - CM Yadiyurappa

ಶಿಕ್ಷಣ ಇಲಾಖೆಯಿಂದ ಶಿಕ್ಷಕರ ಒಂದು ದಿನದ ವೇತನ ಸಂಗ್ರಹಿಸಿ, 50 ಕೋಟಿ ರುಪಾಯಿ ಹಣವನ್ನು ಉತ್ತರ ಕರ್ನಾಟಕದ ನೆರೆ ಹಾವಳಿಗೆ ಪರಿಹಾರ ನಿಧಿಯಾಗಿ ನೀಡಲಾಯಿತು. ಶಾಲಾ ಕಟ್ಟಡಗಳ ದುರಸ್ತಿ ಹಾಗೂ ಪುಸ್ತಕ ವಿತರಣೆಗೆ ಈ ಹಣವನ್ನು ಬಳಸಿಕೊಳ್ಳುವಂತೆ ಮನವಿ ಮಾಡಿದರು.

ಉತ್ತಮ ಶಿಕ್ಷಕ ಪ್ರಶಸ್ತಿ
author img

By

Published : Sep 5, 2019, 2:22 PM IST

ಬೆಂಗಳೂರು : ನಗರದ ಅಂಬೇಡ್ಕರ್ ಭವನದಲ್ಲಿ ಜರುಗಿದ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಒಟ್ಟು 42 ಉತ್ತಮ ಶಿಕ್ಷಕರು, ಪ್ರಾಂಶುಪಾಲರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದರು.

2019-20 ನೇ ಸಾಲಿನ ರಾಜ್ಯ ಮಟ್ಟದ ಪ್ರಾಥಮಿಕ ಶಾಲೆಯ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು 20 ಶಿಕ್ಷರಿಗೆ, ಪ್ರೌಢಶಾಲಾ ವಿಭಾಗದ 11 ಶಿಕ್ಷಕರಿಗೆ, ಉತ್ತಮ ಪ್ರಾಂಶುಪಾಲರಾಗಿ ಇಬ್ಬರಿಗೆ, ಹಾಗೂ ಉತ್ತಮ ಉಪನ್ಯಾಸಕರಾಗಿ 8 ಮಂದಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಉತ್ತಮ ಶಿಕ್ಷಕರಿಗೆ ತಲಾ ಹತ್ತು ಸಾವಿರ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಅಲ್ಲದೆ ಹಿರಿಯ ಪ್ರಾಥಮಿಕ ಕುಂದಗೋಳ ಶಾಲೆ, ಧಾರವಾಡ ಹಾಗೂ ಅಂಕೋಲ ತಾಲೂಕಿನ, ಉತ್ತರಕನ್ನಡದ ಪ್ರೌಢ ಶಾಲೆಯನ್ನು ಉತ್ತಮ ಶಾಲೆಗಳೆಂದು ಪ್ರಶಸ್ತಿ ನೀಡಿ, ಶಾಲೆ ಅಭಿವೃದ್ಧಿಗೆ ಎರಡುವರೇ ಲಕ್ಷ ರೂ ದೇಣಿಗೆ ನೀಡಲಾಯಿತು.

ರಾಜ್ಯ ಮಟ್ಟದ ಪ್ರಾಥಮಿಕ ಶಾಲೆಯ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭ

ಇದೇ ವೇಳೆ ಶಿಕ್ಷಣ ಇಲಾಖೆಯಿಂದ ಶಿಕ್ಷಕರ ಒಂದು ದಿನದ ವೇತನ ಸಂಗ್ರಹಿಸಿ, 50 ಕೋಟಿ ರುಪಾಯಿ ಉತ್ತರ ಕರ್ನಾಟಕದ ನೆರೆ ಹಾವಳಿಗೆ ಪರಿಹಾರ ನಿಧಿಯಾಗಿ ನೀಡಲಾಯಿತು. ಈ ಹಣದಲ್ಲಿ ಶಾಲಾ ಕಟ್ಟಡಗಳ ದುರಸ್ತಿ ಹಾಗೂ ಪುಸ್ತಕ ವಿತರಣೆಗೆ ಬಳಸಿಕೊಳ್ಳುವಂತೆ ಮನವಿ ಮಾಡಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ, ಶಿಕ್ಷಕ ಮತ್ತು ಶಿಕ್ಷಣ ಇರುವುದೇ ವ್ಯಕ್ತಿಯ ವ್ಯಕ್ತಿತ್ವ ನಿರ್ಮಿಸಲು, ಶಿಕ್ಷಕರು ನೀಡಿದ ಬರಪರಿಹಾರ ನಿಧಿಯನ್ನು ಶಾಲಾ ಕಾಲೇಜುಗಳ ಕಟ್ಟಡ, ಮೂಲಭೂತ ಸೌಕರ್ಯಗಳನ್ನು ನೀಡಲು ದೇಣಿಗೆಯನ್ನು ಬಳಸಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಮಾತನಾಡಿ, ಶಿಕ್ಷಕರ ಕಥೆ ಭಕ್ತ ಕುಂಬಾರನ ಕಥೆಯಾಗಿದೆ. ಕಡ್ಡಾಯ ವರ್ಗಾವಣೆ ಮಾಡಿದ್ದಾರೆ. ಈ ಇಲಾಖೆಗೆ ಮನುಷ್ಯತ್ವ ಇರುವ ಅಧಿಕಾರಿಗಳನ್ನು ಕೊಡಿ. ಗ್ರಾಮೀಣ ಪ್ರದೇಶ, ನಗರ ಪ್ರದೇಶ ಅಂತ ವಿಭಾಗ ಮಾಡಿ ಶಿಕ್ಷಕರಿಗೆ ಹಿಂಸೆ ಕೊಡಲಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿ ಭ್ರಷ್ಟಾಚಾರ ಮುಕ್ತ ಇಲಾಖೆಯನ್ನಾಗಿ ಮಾಡಿ ಎಂದು ಮನವಿ ಮಾಡಿದರು.

ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಮಾತನಾಡಿ, ವರ್ಗಾವಣೆ ನೀತಿಗೆ ಕಾಯ್ದೆಯಲ್ಲಿ ಬದಲಾವಣೆ ತರಬೇಕಿದೆ. ವರ್ಗಾವಣೆ ಪ್ರಕ್ರಿಯೆ ಸ್ಥಗಿತವಾಗಿತ್ತು, ಆದ್ರೆ ನಾಳೆಯಿಂದ ಅದಕ್ಕೆ ಮತ್ತೆ ಚಾಲನೆ ಸಿಗಲಿದೆ. ಕಡ್ಡಾಯ ವರ್ಗಾವಣೆ ಪದ ಬಹಳ ತಪ್ಪು. ಮೊದಲು ಈ ಪದ ತೆಗೆದು ಕಾಯ್ದೆಯನ್ನು ತಿದ್ದುಪಡಿ ಮಾಡಬೇಕಿದೆ. ಮೇಲ್ಮನೆ ಸದಸ್ಯರ ಸಮಿತಿ ರಚಿಸಿ ತೀರ್ಮಾನ ಮಾಡಲಾಗುವುದು ಎಂದರು.

Intro:ಶಿಕ್ಷಕರಿಂದ 50 ಕೋಟಿ ರುಪಾಯಿ ಬರಪರಿಹಾರಕ್ಕೆ ದೇಣಿಗೆ- 42 ಉತ್ತಮ ಶಿಕ್ಷಕರಿಗೆ ರಾಜ್ಯ ಪ್ರಶಸ್ತಿ ಪುರಸ್ಕಾರ

ಬೆಂಗಳೂರು- ನಗರದ ಅಂಬೇಡ್ಕರ್ ಭವನದಲ್ಲಿ ಜರುಗಿದ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಒಟ್ಟು ನಲ್ವತ್ತೆರಡು ಉತ್ತಮ ಶಿಕ್ಷಕರು, ಪ್ರಾಂಶುಪಾಲರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದರು.

2019-20 ನೇ ಸಾಲಿನ ರಾಜ್ಯ ಮಟ್ಟದ ಪ್ರಾಥಮಿಕ ಶಾಲೆಯ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಇಪ್ಪತ್ತು ಶಿಕ್ಷರಿಗೆ, ಪ್ರೌಢಶಾಲಾ ವಿಭಾಗದಲ್ಲಿ ಹನ್ನೊಂದು ಶಿಕ್ಷಕರಿಗೆ, ಉತ್ತಮ ಪ್ರಾಂಶುಪಾಲರಾಗಿ ಇಬ್ಬರಿಗೆ, ಹಾಗೂ ಉತ್ತಮ ಉಪನ್ಯಾಸಕರಾಗಿ ಎಂಟು ಮಂದಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.
ಉತ್ತಮ ಶಿಕ್ಷಕರಿಗೆ ತಲಾ ಹತ್ತು ಸಾವಿರ ನಗದು ಬಹುಮಾನ ನೀಡಿ ಗೌರವಿಸಲಾಯಿತು
ಅಲ್ಲದೆ ಹಿರಿಯ ಪ್ರಾಥಮಿಕ ಕುಂದಗೋಳ ಶಾಲೆ, ಧಾರವಾಡ ಹಾಗೂ ಅಂಕೋಲ ತಾಲೂಕಿನ, ಉತ್ತರಕನ್ನಡದ ಪ್ರೌಢ ಶಾಲೆಯನ್ನು ಉತ್ತಮ ಶಾಲೆಗಳೆಂದು ಪ್ರಶಸ್ತಿ ನೀಡಿ, ಶಾಲೆ ಅಭಿವೃದ್ಧಿಗೆ ಎರಡುವರೇ ಲಕ್ಷ ದೇಣಿಗೆ ನೀಡಲಾಯಿತು.

ಇದೇ ವೇಳೆ ಶಿಕ್ಷಣ ಇಲಾಖೆಯಿಂದ ಶಿಕ್ಷಕರ ಒಂದು ದಿನದ ವೇತನ ಸಂಗ್ರಹಿಸಿ, 50 ಕೋಟಿ ರುಪಾಯಿ ಉತ್ತರ ಕರ್ನಾಟಕದ ನೆರೆ ಹಾವಳಿಗೆ ಪರಿಹಾರ ನಿಧಿಯಾಗಿ ನೀಡಲಾಯಿತು. ಈ ಹಣದಲ್ಲಿ ಶಾಲಾ ಕಟ್ಟಡಗಳ ದುರಸ್ತಿ ಹಾಗೂ ಪುಸ್ತಕ ವಿತರಣೆಗೆ ಬಳಸಿಕೊಳ್ಳುವಂತೆ ಮನವಿ ಮಾಡಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ, ಶಿಕ್ಷಕ ಮತ್ತು ಶಿಕ್ಷಣ ಇರುವುದೇ ವ್ಯಕ್ತಿಯ ವ್ಯಕ್ತಿತ್ವ ನಿರ್ಮಿಸಲು, ಇದರಿಂದ ಸಮಾಜ, ದೇಶ, ವಿಶ್ವವೇ ನಿರ್ಮಾಣ ಆಗುತ್ತೆ. ಶಿಕ್ಷಕರ ಮಹತ್ವ ಸಾರುವ, ಹನ್ನೆರಡನೇ ಶತಮಾನದ ಬಸವಣ್ಣ, ಚಾಣಕ್ಯರ ಹೇಳಿಕೆಗಳನ್ನು ಪುನರುಚ್ಛರಿಸಿದರು.
ಶಿಕ್ಷಕರು ನೀಡಿದ ಬರಪರಿಹಾರ ನಿಧಿಯನ್ನು ಶಾಲಾ ಕಾಲೇಜುಗಳ ಕಟ್ಟಡ, ಮೂಲಭೂತ ಸೌಕರ್ಯಗಳನ್ನು ನೀಡಲು ದೇಣಿಗೆಯನ್ನು ಬಳಸಿಕೊಳ್ಳಲಾಗುವುದು ಎಂದು ಸಿಎಂ ಭರವಣೆ ನೀಡಿದರು. ಹಳ್ಳಿಯಲ್ಲಿದ್ದು ಹಿರಿಯರಿಗೆ, ಕಿರಿಯರಿಗೆ ಮಾರ್ಗದರ್ಶನ ನೀಡುವ ಕೆಲಸವನ್ನು ಶಿಕ್ಷಕರು ಮಾಡಬೇಕಿದೆ ಎಂದು ಸಿಎಂ ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಮಾತನಾಡಿ, ಶಿಕ್ಷಕರ ಕಥೆ ಭಕ್ತಕುಂಬಾರನ ಕಥೆಯಾಗಿದೆ. ವಿಕೃತ ಮನಸ್ಥಿತಿಯವರು ಈ ಕಡ್ಡಾಯ ಪದ ಸೇರಿಸಿ, ಕಡ್ಡಾಯ ವರ್ಗಾವಣೆ ಮಾಡಿದ್ದಾರೆ. ಈ ಇಲಾಖೆಯಲ್ಲಿ ಮನುಷ್ಯತ್ವ ಇರುವ ಅಧಿಕಾರಿಗಳನ್ನು ಕೊಡಿ. ಗ್ರಾಮೀಣ ಪ್ರದೇಶ, ನಗರ ಪ್ರದೇಶ ಅಂತ ವಿಭಾಗ ಮಾಡಿ ಶಿಕ್ಷಕರಿಗೆ ಹಿಂಸೆ ಕೊಡಲಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದರು. ಆಯುಕ್ತರ ಕಚೇರಿಯಲ್ಲಿರುವವರು ಎಲ್ಲರೂ ಯಮರಾಕ್ಷಸರು. ಬ್ರಹ್ಮಾಂಡ ಭ್ರಷ್ಟಾಚಾರ ವನ್ನು ತಡೆದು ಭ್ರಷ್ಟಾಚಾರ ಮುಕ್ತ ಇಲಾಖೆಯಾಗಿ ಮಾಡಿ ಎಂದು ಮನವಿ ಮಾಡಿದರು.

ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಮಾತನಾಡಿ, ವರ್ಗಾವಣೆ ನೀತಿಗೆ ಕಾಯ್ದೆಯಲ್ಲಿ ಬದಲಾವಣೆ ತರಬೇಕಿದೆ. ಆದರೆ ಯಾರಿಗೂ ನೋವಾಗಬಾರದು. ವರ್ಗಾವಣೆ ಪ್ರಕ್ರಿಯೆ ಸ್ಥಗಿತವಾಗಿತ್ತು, ಆದ್ರೆ ನಾಳೆಯಿಂದ ಅದಕ್ಕೆ ಮತ್ತೆ ಚಾಲನೆ ಸಿಗಲಿದೆ ಎಂದರು. ಕಡ್ಡಾಯ ವರ್ಗಾವಣೆ ಪದ ಬಹಳ ತಪ್ಪು. ಮೊದಲು ಈ ಪದ ತೆಗೆದು ಕಾಯ್ದೆಯನ್ನು ತಿದ್ದುಪಡಿ ಮಾಡಬೇಕಿದೆ. ಮೇಲ್ಮನೆ ಸದಸ್ಯರ ಸಮಿತಿ ರಚಿಸಿ ತೀರ್ಮಾನ ಮಾಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಡಿಸಿಎಂ ಹಾಗೂ ಉನ್ನತ ಶಿಕ್ಷಣ ಅಶ್ವಥ್ ನಾರಾಯಣ್, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಎಮ್ ಎಲ್ ಸಿ ಶರವಣ, ಪ್ರಾಥಮಿಕ-ಪ್ರೌಢಶಿಕ್ಷಣ ಪ್ರಧಾನ ಕಾರ್ಯದರ್ಶಿಗಳಾದ ಎಸ್ ಆರ್ ಉಮಾಶಂಕರ್, ಶಿಕ್ಷಣ ಜಲಾಖೆ ಆಯುಕ್ತರಾದ ಡಾ.ಕೆ.ಜಿ ಜಗದೀಶ ಭಾಗಿಯಾಗಿದ್ದರು.

ಸೌಮ್ಯಶ್ರೀ
Kn_bng_01_cm_teachers_award_7202707
Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.