ಬೆಂಗಳೂರು : ಬ್ಯಾಟರಾಯನಪುರದಲ್ಲಿ 18 ಎಕರೆ ಭೂಮಿ ಬಿಬಿಎಂಪಿಗೆ ಬರಬೇಕಿತ್ತು. ಆದರೆ, ಅದು ಕೈತಪ್ಪಿ ಹೋಗಿದೆ ಎಂದು ಕೌನ್ಸಿಲ್ ಸಭೆಯಲ್ಲಿ ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್ ಆರೋಪಿಸಿದ್ದಾರೆ.
ಬ್ಯಾಟರಾಯನಪುರದಲ್ಲಿ ಟಿಡಿಆರ್ ಮೂರುವರೇ ಕೋಟಿ ತಿಂದು ಹಾಕಿದ್ದಾರೆ. ಆದರೆ, ಆಸ್ತಿ ಪಾಲಿಕೆಗೆ ಉಳಿಸಿಕೊಂಡಿಲ್ಲ. ಅದಕ್ಕೂ ಸೇರಿ ಕಾಂಪೌಂಡ್ ಹಾಕಿದ್ದಾರೆ. ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿದರೂ ಆಸ್ತಿ ಉಳಿಸಿಕೊಳ್ಳಲಾಗುತ್ತಿಲ್ಲ. ಟಿಡಿಆರ್ ಮಾಡಲು, ರಸ್ತೆ ಮಾಡಲು ಆಸಕ್ತಿ ವಹಿಸುವ ಅಧಿಕಾರಿಗಳಿಗೆ ಪಾಲಿಕೆ ಆಸ್ತಿ ಉಳಿಸುವಲ್ಲಿ ಆಸಕ್ತಿ ಇಲ್ಲ. ಅಧಿಕಾರಿಗಳಿಗೆ ಹಲವೆಡೆ ಬೆದರಿಕೆಯೂ ಹಾಕುತ್ತಿದ್ದಾರೆ. ಪಾಲಿಕೆಗೆ ಕೊಟ್ಟು ಮತ್ತೆ ಅದೇ ಜಾಗಕ್ಕೆ ಕಾಂಪೌಂಡ್ ಹಾಕಿಕೊಂಡಿದ್ದಾರೆ ಎಂದು ದೂರಿದರು.
ಇದೇ ವೇಳೆ ಪದ್ಮನಾಭ ರೆಡ್ಡಿ ಮಾತನಾಡಿ, ಇದು ಲಕ್ಷಾಂತರ ಕೋಟಿ ರೂಪಾಯಿ ಅವ್ಯವಹಾರ. ಪಾಲಿಕೆಯ ಜಾಗಕ್ಕೆ ಬೌಂಡರಿ ಫಿಕ್ಸ್ ಮಾಡಿ, ಪಾಲಿಕೆ ಹೆಸರಿಗೆ ಖಾತೆ ಮಾಡಿಕೊಳ್ಳಬೇಕು. ಇಪ್ಪತ್ತು ಲಕ್ಷ ಚದರ ಮೀಟರ್ ಉದ್ದದ ರಸ್ತೆ ಎಲ್ಲೂ ಅಗಲೀಕರಣ ಮಾಡಿಲ್ಲ. ಒಂದು ಜಮೀನಿಗೂ ಖಾತೆ ಇಲ್ಲ. ಈ ಕೂಡಲೇ ಸ್ಪೆಷಲ್ ಆಫೀಸರ್ ಕಳುಹಿಸಿ ಕಾಂಪೌಂಡ್ ಒಡೆದು ಹಾಕಿ ಕ್ರಿಮಿನಲ್ ಕೇಸ್ ಹಾಕುವಂತೆ ಆಗ್ರಹಿಸಿದರು. ಇದೇ ವೇಳೆ ಟಿಡಿಆರ್ ಮಹಾದಂಧೆ ಎಂದು ಮಾಜಿ ಮೇಯರ್ ಮಂಜುನಾಥ್ ರೆಡ್ಡಿ ಕೂಡಾ ಧ್ವನಿಗೂಡಿಸಿದರು.