ETV Bharat / state

ಟಿಡಿಆರ್​​ ಪ್ರಕರಣ ರದ್ದು ಕೋರಿ ಅರ್ಜಿ: ಅಭಿಪ್ರಾಯ ತಿಳಿಸಲು ಎಸಿಬಿಗೆ ಹೈಕೋರ್ಟ್​ ನೋಟಿಸ್​​ - Lokayukta Special Court

ಅಭಿವೃದ್ಧಿ ಹಕ್ಕು ವಂಚನೆ (ಟಿಡಿಆರ್) ಪ್ರಕರಣದ ಪ್ರಮುಖ ಆರೋಪಿ ತನ್ನ ವಿರುದ್ಧ ಎಸಿಬಿಯಲ್ಲಿ ದಾಖಲಾಗಿರುವ ಪ್ರಕರಣವನ್ನು ರದ್ದುಪಡಿಸಿಬೇಕೆಂದು ಹೈಕೋರ್ಟ್ ಮೆಟ್ಟಿಲೇರಿದ್ದು, ಆರೋಪಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಈ ಬಗ್ಗೆ ಉತ್ತರಿಸುವಂತೆ ಎಸಿಬಿಗೆ ನೋಟೀಸ್ ಜಾರಿ ಮಾಡಿದೆ.

ಅಭಿಪ್ರಾಯ ತಿಳಿಸಲು ಎಸಿಬಿಗೆ ಹೈಕೋರ್ಟ್ ನೋಟಿಸ್
author img

By

Published : Aug 22, 2019, 8:42 AM IST

ಬೆಂಗಳೂರು : ಅಭಿವೃದ್ಧಿ ಹಕ್ಕು ವಂಚನೆ (ಟಿಡಿಆರ್) ಪ್ರಕರಣದ ಪ್ರಮುಖ ಆರೋಪಿಯಾದ ಬಿಡಿಎ ಉಸ್ತುವಾರಿ ಸಹಾಯಕ ಎಂಜಿನಿಯರ್ ಕೃಷ್ಣಲಾಲ್ ತನ್ನ ವಿರುದ್ಧ ಎಸಿಬಿಯಲ್ಲಿ ದಾಖಲಾಗಿರುವ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಎಸಿಬಿಗೆ ನೋಟಿಸ್ ಜಾರಿಗೊಳಿಸಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣದ ವೇಳೆ ಸ್ವಾಧೀನಪಡಿಸಿಕೊಂಡ ಜಾಗಕ್ಕೆ ನಿಗದಿಗಿಂತ ಹೆಚ್ಚು ಹಣ ಪಡೆದು ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟ ಮಾಡಿದ್ದಾರೆ ಎಂಬ ಕಾರಣಕ್ಕೆ ಕಷ್ಣಲಾಲ್ ಮತ್ತು ಸಹಚರರ ಮೇಲೆ ಎಸಿಬಿ ದಾಳಿ ನಡೆಸಿತ್ತು. ಆರೋಪಿ ಕಷ್ಣಲಾಲ್ ಎಸಿಬಿ ದಾಖಲಿಸಿದ್ದ ಕೇಸ್‌ಗೆ ಲೋಕಾಯುಕ್ತ ನ್ಯಾಯಾಲಯದಲ್ಲಿ ಜಾಮೀನು ಪಡೆದಿದ್ದರು.

ಇದಕ್ಕೆ ಎಸಿಬಿ ಆಕ್ಷೇಪಣೆ ಸಲ್ಲಿಸಿದ ಹಿನ್ನೆಲೆ ಕಳೆದ ಮೇ 27ರಂದು ಲೋಕಾಯುಕ್ತ ವಿಶೇಷ ನ್ಯಾಯಾಲಯ ಜಾಮೀನು ರದ್ದು ಮಾಡಿತ್ತು. ಇದೀಗ ಪ್ರಕರಣ ರದ್ದು ಕೋರಿ ಕೃಷ್ಣಲಾಲ್ ಹೈಕೋರ್ಟ್ ಮೆಟ್ಟಿಲೇರಿದ್ದು, ಈ ಬಗ್ಗೆ ಅಭಿಪ್ರಾಯ ತಿಳಿಸಲು ಹೈಕೋರ್ಟ್ ‌ಎಸಿಬಿಗೆ ನೋಟಿಸ್ ಜಾರಿ ಮಾಡಿ, ವಿಚಾರಣೆ ಮುಂದೂಡಿದೆ.

Intro:ಟಿಡಿಆರ್ ಹಗರಣದ ಪ್ರಮುಖ ಆರೋಪಿ ಅರ್ಜಿ
ಹೈಕೋರ್ಟ್ ನಿಂದ ಎಸಿಬಿಗೆ ನೋಟಿಸ್

ಬೆಂಗಳೂರು :

ಅಭಿವೃದ್ಧಿ ಹಕ್ಕು ವಂಚನೆ(ಟಿಡಿಆರ್) ಪ್ರಕರಣದ ಪ್ರಮುಖ ಆರೋಪಿಯಾದ ಬಿಡಿಎ ಉಸ್ತುವಾರಿ ಸಹಾಯಕ ಎಂಜಿನಿಯರ್  ಕೃಷ್ಣಲಾಲ್ ತಮ್ಮ ವಿರುದ್ಧ ಎಸಿಬಿಯಲ್ಲಿ ದಾಖಲಾಗಿದ್ದ ಪ್ರಕರಣ ರದ್ದು ಕೋರಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಎಸಿಬಿಗೆ ನೋಟಿಸ್ ಜಾರಿಗೊಳಿಸಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣದ ವೇಳೆ ಸ್ವಾಧೀನಪಡಿಸಿಕೊಂಡ ಜಾಗಕ್ಕೆ ನಿಗದಿಗಿಂತ ಹೆಚ್ಚು ಹಣ ಪಡೆದು ಸರಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ.ನಷ್ಟಮಾಡಿದ್ದಾರೆ ಎಂಬ ಕಾರಣಕ್ಕೆ ಕಷ್ಣಲಾಲ್ ಮತ್ತು ಸಹಚರರ ಮೇಲೆ ಎಸಿಬಿ ದಾಳಿ ನಡೆಸಿತ್ತು.
ಆರೋಪಿ ಕಷ್ಣಲಾಲ್ ಎಸಿಬಿ ದಾಖಲಿಸಿದ್ದ ಕೇಸ್‌ಗೆ ಲೋಕಾಯುಕ್ತ ನ್ಯಾಯಾಲಯದಲ್ಲಿ ಜಾಮೀನು ಪಡೆದಿದ್ದರು.
ಇದಕ್ಕೆ ಎಸಿಬಿ ಆಕ್ಷೇಪಣೆ ಸಲ್ಲಿಸಿದ ಹಿನ್ನೆಲೆಯಲ್ಲಿ ಕಳೆದ ಮೇ 27ರಂದು ಲೋಕಾಯುಕ್ತ ವಿಶೇಷ ಕೋರ್ಟ್‌ನಲ್ಲಿ ಜಾಮೀನು ರದ್ದು ಮಾಡಿತ್ತು. ಇದೀಗ ಪ್ರಕರಣ ರದ್ದು ಕೋರಿ ಕೃಷ್ಣ ಲಾಲ್ ಅರ್ಜಿ ಹಾಕಿದ್ದು ಹೈಕೋರ್ಟ್ ‌ಎಸಿಬಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿದೆBody:KN_BNG_08_ACB_7204498Conclusion:KN_BNG_08_ACB_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.