ಬೆಂಗಳೂರು: ಕೊರೊನಾ ವೈರಸ್ ಸಿಲಿಕಾನ್ ಸಿಟಿಗೆ ಭಯ ಹುಟ್ಟಿಸಿದ್ದೇ ತಡ ನಗರದಲ್ಲಿ ಮಾಸ್ಕ್ಗಳ ಅಕ್ರಮ ಮಾರಾಟ ದಂಧೆ ಆರಂಭವಾಗಿದ್ದು, ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.
![Tax officials raided](https://etvbharatimages.akamaized.net/etvbharat/prod-images/kn-bng-06-corona-mask-raid-7202806_07032020191031_0703f_1583588431_762.jpg)
ಬಿಲ್ ನೀಡದೇ ಅಧಿಕ ಮೊತ್ತಕ್ಕೆ ಮಾಸ್ಕ್ಗಳ ಮಾರಾಟ ಮಾಡುತ್ತಿದ್ದವರಿಗೆ ವಾಣಿಜ್ಯ ತೆರಿಗೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದು, ಇಂದು ಇಲಾಖೆಯ ಅಪರ ಆಯುಕ್ತ ನಿತೀಶ್ ಪಾಟೀಲ್ ನೇತೃತ್ವದಲ್ಲಿ ದಾಳಿ ನಡೆಸಿ ಏಕಕಾಲದಲ್ಲಿ ಸುಮಾರು 50 ಜನ ಅಧಿಕಾರಿಗಳು ಮತ್ತು ನಗರದ ಹಲವು ಮೆಡಿಕಲ್ ಶಾಪ್ಗಳ ಮೇಲೆ ದಾಳಿ ನಡೆಸಲಾಗಿದೆ.
![Tax officials raided](https://etvbharatimages.akamaized.net/etvbharat/prod-images/kn-bng-06-corona-mask-raid-7202806_07032020191031_0703f_1583588431_1101.jpg)
ದಾಳಿ ವೇಳೆ ಕೆಲ ನಕಲಿ ಮಾಸ್ಕ್ಗಳು ಪತ್ತೆಯಾಗಿದ್ದು, ಜಪ್ತಿ ಮಾಡಲಾಗಿದೆ. ಅಂಗಡಿ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.
![Tax officials raided](https://etvbharatimages.akamaized.net/etvbharat/prod-images/kn-bng-06-corona-mask-raid-7202806_07032020191031_0703f_1583588431_910.jpg)