ಬೆಂಗಳೂರು: ತಮಿಳುನಾಡಿನ ಮಾಜಿ ಸಿಎಂ ಜಯಲಲಿತ ಅವರ ಆಪ್ತೆ, ಎಐಎಡಿಎಂಕೆ ಉಚ್ಚಾಟಿತ ನಾಯಕಿ ವಿ ಕೆ ಶಶಿಕಲಾ ನಟರಾಜನ್ ಅವರು ದೇವನಹಳ್ಳಿ ಬಳಿಯ ನಂದಿಬೆಟ್ಟದ ರಸ್ತೆಯಲ್ಲಿರುವ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ಗೆ ಭೇಟಿ ನೀಡಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಭಾನುವಾರ ರೆಸಾರ್ಟ್ಗೆ ಆಗಮಿಸಿದ ಶಶಿಕಲಾ ಅವರನ್ನು ಸಂಬಂಧಿಕರು ಆರತಿ ಬೆಳಗಿ ಬರಮಾಡಿಕೊಂಡಿದ್ದಾರೆ. ಇಂದು ಬೆಳಗ್ಗೆ 11 ಗಂಟೆಯ ನಂತರ ರೆಸಾರ್ಟ್ಗೆ ತಮಿಳುನಾಡಿನ ಕೆಲ ಎಂಪಿಗಳು ಭೇಟಿ ನೀಡುವ ಸಾಧ್ಯತೆ ಇದೆ. ತಮಿಳುನಾಡಿಗೆ ಭೇಟಿ ನೀಡುವಾಗ ಏನೆಲ್ಲಾ ಪ್ಲಾನ್ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ಮಾಡುವ ಸಾಧ್ಯತೆ ಇದ್ದು, ರಾಜಕೀಯವಾಗಿ ಯಾವ ರೀತಿ ವೇದಿಕೆ ಸಿದ್ಧತೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಇಂದಿನಿಂದಲೇ ಶಶಿಕಲಾ ಪ್ಲಾನ್ ಮಾಡಲಿದ್ದಾರೆ.
ಇನ್ನೂ ಐದಾರು ದಿನಗಳ ಕಾಲ ರೆಸಾರ್ಟ್ನಲ್ಲಿರಲಿದ್ದು, ಜಯಲಲಿತಾ ಹಾದಿಯಲ್ಲಿ ಱಲಿ ನಡೆಸಲು ಪ್ಲಾನ್ ಮಾಡಲಿದ್ದಾರೆ ಎಂದು ಶಶಿಕಲಾ ಆಪ್ತರಿಂದ ಮಾಹಿತಿ ದೊರೆತಿದೆ.