ಬೆಂಗಳೂರು: ಪಾದರಾಯನಪುರದಲ್ಲಿ ಸದ್ಯ ಹೈ ಅಲರ್ಟ್ ಘೋಷಿಸಲಾಗಿದ್ದು, ವಿನಾಕಾರಣ ಓಡಾಡುವವರ ಮೇಲೆ ಪೊಲೀಸರು ಇಲ್ಲಿಯವರೆಗೆ ಹದ್ದಿನ ಕಣ್ಣಿಟ್ಟಿದ್ದರು. ಸದ್ಯ ಪಾದರಾಯನಪುರಕ್ಕೆ ಡಿ ಸ್ಕ್ವಾಟ್ ಟೀಂ ಹಾಗೂ ಗರುಡ ಪಡೆ ಎಂಟ್ರಿ ಕೊಟ್ಟಿವೆ.
ಈ ಟೀಂನ ಸಿಬ್ಬಂದಿ ರೈಫಲ್ ಹಿಡಿದುಕೊಂಡು ನಡು ರಸ್ತೆಯಲ್ಲಿ ನಿಂತಿದ್ದಾರೆ. ಮಾಸ್ಕ್ ಹಾಕದ, ಹೊರಗೆ ಓಡಾಡುವ ಜನರಿಗೆ ಫುಲ್ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ. ಒಂದು ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ಮತ್ತೆ ನಿರ್ಮಾಣವಾದರೆ ರೈಫಲ್ನಲ್ಲಿ ಉತ್ತರ ಕೊಡಲಿದ್ದಾರೆ.
ಸದ್ಯ ಈ ತಂಡವನ್ನು ನೋಡಿ ಜನ ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ.