ETV Bharat / state

ಬಲಿಜ ಸಮುದಾಯಕ್ಕೆ ಪೂರ್ಣಪ್ರಮಾಣದ ʻ2ಎʼ ಮೀಸಲಾತಿಗೆ ಸ್ವಾಮೀಜಿಗಳ ಆಗ್ರಹ

ಇಂದು ಈ ಸಮುದಾಯದ ಬಗ್ಗೆ ಆಳುವ ಸರ್ಕಾರಗಳು ನಿರ್ಲಕ್ಷವಹಿಸಿರುವುದರಿಂದ ಬಲಿಜ ಜನರು ಸರ್ಕಾರದ ಎಲ್ಲಾ ಸೌಲಭ್ಯಗಳಿಂದ ವಂಚಿತರಾಗಿ ಹಲವಾರು ಸಂಕಷ್ಟಗಳನ್ನ ಎದುರಿಸುವಂತಾಗಿದೆ. ಬಲಿಜ ಸಮುದಾಯದ ಅಭಿವೃದ್ದಿಯನ್ನ ಮರೆತಿರುವ ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ʻ2ಎʼ ಪೂರ್ಣ ಪ್ರಮಾಣದ ಮೀಸಲಾತಿ ನೀಡಬೇಕು..

author img

By

Published : Nov 25, 2020, 8:06 PM IST

Guruji
ಗುರೂಜಿ

ಬೆಂಗಳೂರು : ಬಲಿಜ ಸಮುದಾಯಕ್ಕೆ ʻ2ಎʼ ಪೂರ್ಣಪ್ರಮಾಣದ ಮೀಸಲಾತಿ ನೀಡಬೇಕು ಹಾಗೂ ಬಲಿಜ ಸಮುದಾಯ ಅಭಿವೃದ್ಧಿ ನಿಗಮ ರಚಿಸಬೇಕು ಎಂದು ಜ್ಯೋತಿಷಿಗಳಾದ ಜಯ ಶ್ರೀನಿವಾಸನ್ ಗುರೂಜಿ, ದಕ್ಷಿಣ ಶಿರಡಿ ಇಂಟರ್​ ನ್ಯಾಷನಲ್​ ಪೀಠಾಧ್ಯಕ್ಷರಾದ ಶ್ರೀ ಸಾಯಿ ರಾಮ ಪ್ರಸಾದ್​ ಗುರೂಜಿ ಮತ್ತು ರಾಮೋಹಳ್ಳಿಯ ನಾಗದುರ್ಗ ಪೀಠದ ಪೀಠಾಧ್ಯಕ್ಷರಾದ ಡಾ.ಶಕ್ತಂ ಶ್ರೀ ಶಕ್ತಿ ಬಾಲಮ್ಮ ಸ್ವಾಮೀಜಿಯವರು ರಾಜ್ಯ ಸರ್ಕಾರವನ್ನ ಆಗ್ರಹಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಜಯ ಶ್ರೀನಿವಾಸನ್ ಗುರೂಜಿ, ಕರ್ನಾಟಕದಲ್ಲಿ ಸುಮಾರು 40 ಲಕ್ಷ ಬಲಿಜ ಸಮುದಾಯದ ಜನರಿದ್ದಾರೆ. ಈ ಹಿಂದೆ ಬಲಿಜ ಸಮುದಾಯ ʻ2ಎʼ ಮೀಸಲಾತಿಯನ್ನ ಹೊಂದಿತ್ತು. ಆದರೆ, ಮಾಜಿ ಮುಖ್ಯಮಂತ್ರಿ ವೀರಪ್ಪಮೊಯ್ಲಿ ಅವರ ಅಧಿಕಾರಾವಧಿಯಲ್ಲಿ ಏಕಾಏಕಿ ʻ2ಎʼ ಮೀಸಲಾತಿ ಹಿಂತೆಗೆದುಕೊಳ್ಳಲಾಗಿತ್ತು.

ಜಯ ಶ್ರೀನಿವಾಸನ್ ಗುರೂಜಿ

ಆ ನಂತರ ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಈ ಹಿಂದಿನ ಕಾಲಾವಧಿಯಲ್ಲಿ ಬಲಿಜ ಸಮುದಾಯಕ್ಕೆ ವಿದ್ಯಾಭ್ಯಾಸಕ್ಕೆ ʻ2ಎʼ ಮೀಸಲಾತಿಯನ್ನು ನೀಡಿ, ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದ ʻ2ಎʼ ಮೀಸಲಾತಿಯನ್ನ ನೀಡುವುದಾಗಿ ಆಶ್ವಾಸನೆ ನೀಡಿರುತ್ತಾರೆ.

ಆದರೆ, ಆ ನಂತರ ಅವರ ಕೊಟ್ಟ ಮಾತಿನಂತೆ ಬಲಿಜ ಸಮುದಾಯಕ್ಕೆ ಪೂರ್ಣ ಪ್ರಮಾಣದ ಮೀಸಲಾತಿಯನ್ನ ನೀಡಿಲ್ಲ ಎಂದಿದ್ದಾರೆ. ಅಲ್ಲದೇ ಕೇವಲ ವಿದ್ಯಾಭ್ಯಾಸಕ್ಕೆ ಮಾತ್ರ ʻ2ಎʼ ಮೀಸಲಾತಿ ಇದೆ. ಉದ್ಯೋಗದಲ್ಲಿ ಮೀಸಲಾತಿ ಸಿಗದಿರುವುದರಿಂದ ಲಕ್ಷಾಂತರ ಬಲಿಜ ಯುವಕ-ಯುವತಿಯರು ಪ್ರತಿಭೆ ಇದ್ದರೂ ಕೆಲಸ ಸಿಗದೆ ಸಂಕಷ್ಟಕ್ಕೆ ಒಳಗಾಗುವಂತಾಗಿದೆ ಎಂದಿದ್ದಾರೆ.

ಸಾಮಾಜಿಕ ಕ್ರಾಂತಿಯ ಮೂಲಪುರುಷ ಮಹಾತ್ಮ ಜ್ಯೋತಿ ಬಾ ಫುಲೆ, ಭಾರತದ ಮೊಟ್ಟಮೊದಲ ಶಿಕ್ಷಕಿ ಸಾವಿತ್ರಿ ಬಾ ಫುಲೆ, ಕಾಲಜ್ಞಾನ ರಚಿಸಿ ಮನುಕುಲಕ್ಕೆ ಮಾರ್ಗದರ್ಶನ ನೀಡಿದ ಕೈವಾರ ತಾತಯ್ಯ, ವಿಜಯನಗರ ಸಾಮ್ರಾಜ್ಯಕ್ಕೆ ವಿಶ್ವಮಾನ್ಯತೆ ತಂದುಕೊಟ್ಟ ಶ್ರೀಕೃಷ್ಣದೇವರಾಯರಂತಹ ಮಹಾನ್‌ ವ್ಯಕ್ತಿಗಳನ್ನ ಸಮಾಜಕ್ಕೆ ನೀಡಿದ ಹೆಗ್ಗಳಿಕೆ ಬಲಿಜ ಸಮುದಾಯದ್ದಾಗಿದೆ.

ಇಂದು ಈ ಸಮುದಾಯದ ಬಗ್ಗೆ ಆಳುವ ಸರ್ಕಾರಗಳು ನಿರ್ಲಕ್ಷವಹಿಸಿರುವುದರಿಂದ ಬಲಿಜ ಜನರು ಸರ್ಕಾರದ ಎಲ್ಲಾ ಸೌಲಭ್ಯಗಳಿಂದ ವಂಚಿತರಾಗಿ ಹಲವಾರು ಸಂಕಷ್ಟಗಳನ್ನ ಎದುರಿಸುವಂತಾಗಿದೆ. ಬಲಿಜ ಸಮುದಾಯದ ಅಭಿವೃದ್ದಿಯನ್ನ ಮರೆತಿರುವ ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಕೂಡಲೇ ಬಲಿಜ ಸಮುದಾಯಕ್ಕೆ ʻ2ಎʼ ಪೂರ್ಣ ಪ್ರಮಾಣದ ಮೀಸಲಾತಿ ನೀಡಬೇಕು.

ಇದರ ಜೊತೆಗೆ ಬಲಿಜ ಸಮುದಾಯದ ಅಭಿವೃದ್ದಿಗಾಗಿ ನಿಗಮವನ್ನ ರಚಿಸಿ, ಅದಕ್ಕೆ ಸೂಕ್ತ ಅನುದಾನವನ್ನ ಸಹ ನೀಡಬೇಕೆಂದು ಒತ್ತಾಯಿಸುತ್ತಿದ್ದೇವೆ. ರಾಜ್ಯ ಸರ್ಕಾರ ಈ ಬಗ್ಗೆ ಕೂಡಲೇ ಗಮನಹರಿಸಿ ಮುಂದಿನ ಒಂದು ವಾರದೊಳಗೆ ಬಲಿಜ ಸಮುದಾಯದ ಅಭಿವೃದ್ದಿ ನಿಗಮದ ಜೊತೆಗೆ ಪೂರ್ಣ ಪ್ರಮಾಣದ ʻ2ಎʼ ಘೋಷಿಸದಿದ್ದಲ್ಲಿ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.