ಬೆಂಗಳೂರು: ಮೊಮ್ಮಗಳ ಅಗಲಿಕೆಯ ದುಃಖದಲ್ಲಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸ್ವಾಮೀಜಿಗಳು, ರಾಜಕೀಯ ಗಣ್ಯರು ಸಾಂತ್ವನ ಹೇಳುತ್ತಿದ್ದಾರೆ.

ಪಕ್ಷಭೇದ ಮರೆತು ಎಲ್ಲ ನಾಯಕರು ಬಿಎಸ್ವೈ ಭೇಟಿ ಮಾಡುತ್ತಿದ್ದಾರೆ. ಮಾಜಿ ಸಿಎಂ ಬಿಎಸ್ವೈ ಅವರ ಅಧಿಕೃತ ನಿವಾಸ ಕಾವೇರಿಗೆ ಕಾಂಗ್ರೆಸ್ ಮುಖಂಡ ಈಶ್ವರ್ ಖಂಡ್ರೆ ಹಾಗೂ ಚಿತ್ರದುರ್ಗದ ಮುರುಘಾ ಶರಣರು ಭೇಟಿ ನೀಡಿ, ಮೊಮ್ಮಗಳ ನಿಧನದಿಂದ ನೊಂದಿರುವ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ಇದನ್ನೂ ಓದಿ: ನಿಮ್ಮ ಪ್ರತಾಪಕ್ಕೆ ಹೆದರಿ ಓಡಿಹೋಗಲು ನಾನು ಸಂಸದೆ ಸುಮಲತಾ ಅಲ್ಲ: ಶಾಸಕನಿಗೆ ಕಾಳಿ ಮಠದ ಸ್ವಾಮೀಜಿ ಟಾಂಗ್
ಬಳಿಕ ಸಚಿವ ಕೆ.ಎಸ್. ಈಶ್ವರಪ್ಪ ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಅಲ್ಲದೇ ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಬಿ. ಪಾಟೀಲ್ ಸಹ ಅವರನ್ನು ಭೇಟಿಯಾಗಿ ಮೊಮ್ಮಗಳ ನಿಧನಕ್ಕೆ ಸಾಂತ್ವನ ಹೇಳಿದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ