ETV Bharat / state

ಹೆಂಡತಿ ಮನೆಗೆ ಹೋಗಿದ್ದ ಗಂಡ ಸಾವು: ಪತ್ನಿ ಕುಟುಂಬಸ್ಥರ ವಿರುದ್ಧ ಕೊಲೆ ಆರೋಪ - ಈಟಿವಿ ಭಾರತ ಕನ್ನಡ

ಪತ್ನಿ ಮನೆಗೆ ಹೋಗಿದ್ದ ವ್ಯಕ್ತಿ ನಿಗೂಢವಾಗಿ ಸಾವಿಗೀಡಾಗಿದ್ದು, ವಿಷ ಕುಡಿಸಿ ಕೊಲೆಗೈದಿರುವುದಾಗಿ ಪತಿ ಕುಟುಂಬಸ್ಥರು ಆರೋಪಿಸಿದ್ದಾರೆ.

suspicious-death-of-husband-allegation-against-wifes-family
ಹೆಂಡತಿ ಮನೆಗೆ ಹೋಗಿದ್ದ ಗಂಡ ನಿಗೂಢವಾಗಿ ಸಾವು :ಪತ್ನಿ ಕುಟುಂಬಸ್ಥರ ವಿರುದ್ಧ ಕೊಲೆ ಆರೋಪ
author img

By

Published : Feb 21, 2023, 4:41 PM IST

ಬೆಂಗಳೂರು : ಹೆಂಡತಿ ಮನೆಗೆ ಹೋಗಿದ್ದ ಗಂಡ ಸಾವನ್ನಪ್ಪಿರುವುದಾಗಿ ಆರೋಪಿಸಿ ಪತಿ ಮನೆಯವರು ಪತ್ನಿಯ ಕುಟುಂಬಸ್ಥರ ವಿರುದ್ಧ ವೈಯಾಲಿಕಾವಲ್‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿನೋದ್ ಕುಮಾರ್ ಮೃತಪಟ್ಟ ವ್ಯಕ್ತಿ. ಇವರ​​ ಪತ್ನಿ‌ ನಿರ್ಮಲ ಹಾಗೂ ಕುಟುಂಬಸ್ಥರ ವಿರುದ್ಧ ದೂರು ದಾಖಲಾಗಿದೆ.

ವಿವರ: ವಿನೋದ್ ಕುಮಾರ್​ ಮತ್ತು ನಿರ್ಮಲಾ 10 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಕೆ.ಆರ್.ಪುರದಲ್ಲಿ ವಾಸವಾಗಿದ್ದರು. ಇಬ್ಬರ ನಡುವೆ ಕೌಟುಂಬಿಕ ಕಲಹವಿತ್ತು ಎಂದು ತಿಳಿದುಬಂದಿದೆ.

15 ದಿನಗಳ ಹಿಂದೆ ನಿರ್ಮಲಾಗೆ ರಸ್ತೆ ಅಪಘಾತವಾದ ಸುದ್ದಿ ವಿನೋದ್​ ಕುಮಾರ್​ಗೆ ಗೊತ್ತಾಗಿದೆ. ಈ ಸಂಬಂಧ ಆಕೆಯನ್ನು ನೋಡಲು ಹೋಗಿದ್ದಾರೆ. ಕಣ್ಣಿಗೆ ಗಂಭೀರ ಗಾಯವಾಗಿದ್ದ ನಿರ್ಮಲಾರನ್ನು ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದರು.‌ ನಿರ್ಮಲ, ಸತ್ಯನಾರಾಯಣ ಪೂಜೆಗೆ ಹೋಗಿದ್ದೆ. ಆಗ ಸದಾಶಿವನಗರದಲ್ಲಿ ಆಟೋ ಚಾಲಕ ಅಪಘಾತ ಮಾಡಿ ಪರಾರಿಯಾಗಿದ್ದಾನೆ ಎಂದು ಗಂಡನಿಗೆ ಹೇಳಿದ್ದರೆ.

ಆದರೆ ಇದನ್ನು ನಂಬದ ವಿನೋದ್ ಕುಟುಂಬಸ್ಥರು, "ಮದುವೆಯಾಗಿದ್ದರೂ ನಿರ್ಮಲಾ ಕಿರಣ್ ಎಂಬಾತನ ಜೊತೆ ಸಂಬಂಧ ಬೆಳೆಸಿಕೊಂಡಿದ್ದಾಳೆ. ಕಿರಣ್‌ಗೆ ವಿವಾಹವಾಗಿದ್ದು ಪತ್ನಿ ಇದ್ದಾಳೆ. ನಿರ್ಮಲಾ ಬೈಕ್​ನಲ್ಲಿ ಆತನ​​ ಜೊತೆ ನಂದಿ ಹಿಲ್ಸ್‌ಗೆ ಹೋಗಿ ಬರುತ್ತಿದ್ದಾಗ ಸೂಟ್ಕರ್ ಚಲಾಯಿಸುತ್ತಿದ್ದ ನಿರ್ಮಲ ಟಿಪ್ಪರ್‌ಗೆ ಗುದ್ದಿದ್ದಾಳೆ" ಎಂದು ವಿನೋದ್ ಕುಟುಂಬಸ್ಥರು ಆರೋಪಿಸಿದ್ದಾರೆ.

ಸೋಮವಾರ ಮತ್ತೆ ತನ್ನ ಹೆಂಡತಿ ಜೊತೆ ಮಾತನಾಡಲು ಬಂದಿದ್ದ ವಿನೋದ್‌ಗೆ ಬೆಳಗ್ಗೆಯಿಂದ ಕುಟುಂಬಸ್ಥರು ಹಲವು ಬಾರಿ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ದೊರೆತಿರಲಿಲ್ಲ. ಅಷ್ಟೇ ಅಲ್ಲದೆ ಸಂಪರ್ಕಕ್ಕೂ ಸಿಕ್ಕಿರಲಿಲ್ಲ.‌ ಬಳಿಕ ಸಂಜೆ ಕರೆ ಸ್ವೀಕರಿಸಿದ್ದ ನಿರ್ಮಲಾ ಕುಟುಂಬಸ್ಥರು ವಿನೋದ್​​ ಆ್ಯಸಿಡ್ ಕುಡಿದಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ. ಬಳಿಕ ವಿನೋದ್​​ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ವಿನೋದ್ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಹೆಂಡತಿ ಮನೆಯವರು ವಿಷ ಕುಡಿಸಿ ಕೊಲೆ ಮಾಡಿದ್ದಾರೆ ಎಂದು ವಿನೋದ್ ಕುಟುಂಬಸ್ಥರು ದೂರು ನೀಡಿದ್ದು ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬಾಲಕನ ಕಚ್ಚಿ ತಿಂದ ಬೀದಿ ನಾಯಿಗಳು: ಸಿಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.