ETV Bharat / state

ಸಿಡಿ ಸೂತ್ರಧಾರ ನಾನಲ್ಲ.. ನನ್ನದೇನೂ‌ ಪಾತ್ರವಿಲ್ಲ; ಆರೋಪಿ ಭವಿತ್

ಸಿಡಿಯ ಸೂತ್ರಧಾರ ನಾನಲ್ಲ, ಪ್ರಕರಣದಲ್ಲಿ ನನ್ನ‌ ಪಾತ್ರವಿಲ್ಲ ಎಂದು ಶಂಕಿತ ಆರೋಪಿ ವಿಡಿಯೋ ಮೂಲಕ ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣದ ಬಗ್ಗೆ ಸಮರ್ಥನೆ ನೀಡಿದ್ದಾರೆ.

Ramesh Jarkiholi CD case, suspect accused justified on Ramesh Jarkiholi CD case, suspect accused justified through video, Ramesh Jarkiholi CD case news, Ramesh Jarkiholi CD case update, ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣ, ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣದ ಬಗ್ಗೆ ಶಂಕಿತ ಆರೋಪಿ ಸಮರ್ಥನೆ, ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣ ಸುದ್ದಿ, ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣ 2021 ಸುದ್ದಿ,
ಶಂಕಿತ ಆರೋಪಿಯ ಹೇಳಿಕೆ
author img

By

Published : Mar 18, 2021, 12:51 PM IST

Updated : Mar 18, 2021, 1:49 PM IST

ಬೆಂಗಳೂರು: ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ಹಿನ್ನೆಲೆ ವಿಚಾರಣೆಗೆ‌ ಒಳಗಾಗಿದ್ದ ಶಂಕಿತ ಆರೋಪಿಯೊಬ್ಬರು ಈ ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲವೆಂದು ವಿಡಿಯೋ ಮೂಲಕ ಹೇಳಿದ್ದಾರೆ.

ನಿರಂತರ ವಿಚಾರಣೆ ಬಳಿಕ ಖಾಸಗಿ ಸುದ್ದಿ ಸಂಸ್ಥೆಯಲ್ಲಿ‌‌ ಕೆಲಸ‌ ಮಾಡುತ್ತಿದ್ದ ಚಿಕ್ಕಮಗಳೂರಿನ ಆಲ್ದೂರಿನ ಭವಿತ್ ಎಂಬಾತ ತನ್ನ ವಿರುದ್ಧ ಕೇಳಿ ಬಂದಿರುವ ಆರೋಪಗಳನ್ನು ಅಲ್ಲಗಳೆದಿದ್ದಾನೆ. "ರಮೇಶ್​ ಜಾರಕಿಹೊಳಿ ವಿಡಿಯೋ ಪ್ರಕರಣದಲ್ಲಿ ನನ್ನದೇನೂ ತಪ್ಪಿಲ್ಲ. ನನ್ನ ಮೇಲೆ ಸುಖಾಸುಮ್ಮನೆ ಆರೋಪ ಹೊರಿಸಲಾಗಿದೆ. ಮಾಧ್ಯಮಗಳಲ್ಲಿ‌ ಸಿಡಿ ಸೂತ್ರಧಾರ ಎಂದು ಬಿಂಬಿಸಲಾಗುತ್ತಿದೆ." ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ಶಂಕಿತ ಆರೋಪಿಯ ಹೇಳಿಕೆ

"ನನಗೂ ಕುಟುಂಬವಿದೆ. ನನ್ನ‌ ತಾಯಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಬೇಕಾದರೆ ನೀವೇ ನಮ್ಮ ಮನೆಗೆ ಹೋಗಿ ಬನ್ನಿ. ಒಂದು ವೇಳೆ ನಾನೇನಾದರೂ ತಪ್ಪು ಮಾಡಿದ್ದರೆ ಮೊಬೈಲ್ ಸ್ವಿಚ್ ಆಫ್ ಮಾಡಿ ತಲೆಮರೆಸಿಕೊಳ್ಳುತ್ತಿದೆ. ‌ನಾನು ತಪ್ಪು ಎಸಗಿಲ್ಲ. ಎಸ್ಐಟಿ ವಿಚಾರಣೆಗೆ ಹಾಜರಾಗಿ ತನಿಖೆಗೆ ಸಹಕರಿಸುತ್ತಿದ್ದೇನೆ. ‌ದಯವಿಟ್ಟು ನನ್ನನ್ನು ತಪ್ಪಿತಸ್ಥನಂತೆ ಮಾಧ್ಯಮದಲ್ಲಿ ಬಿಂಬಿಸಬೇಡಿ." ಎಂದು ವಿಡಿಯೋದಲ್ಲಿ ಭವಿತ್ ಮನವಿ ಮಾಡಿದ್ದಾರೆ.

ಭವಿತ್ ಸಿಡಿಯಲ್ಲಿನ ವಿಡಿಯೋಗೆ ವಾಯ್ಸ್ ಓವರ್ ಕೊಟ್ಟ ಆರೋಪ ಎದುರಿಸುತ್ತಿದ್ದು, ಈ ಸಂಬಂಧ ಈಗಾಗಲೇ ಎಸ್ಐಟಿ ಈತನ ಸ್ಯಾಂಪಲ್ ವಾಯ್ಸ್ ಪಡೆದು ಪರೀಕ್ಷೆಗಾಗಿ ಎಫ್​ಎಸ್​ಎಲ್​ಗೆ ಕಳುಹಿಸಿದೆ‌. ವರದಿ ಬಂದ ಬಳಿಕವಷ್ಟೇ ಅಧಿಕೃತವಾಗಿ ತಿಳಿಯಲಿದೆ.

ಯುವತಿಗಾಗಿ ನಿರಂತರ ಶೋಧ...

ಮಾಜಿ ಸಚಿವರ ಸಿಡಿ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಯುವತಿ ಸೇರಿದಂತೆ ಮೂವರ ಪತ್ತೆಗಾಗಿ ಎಸ್ಐಟಿ ಅಧಿಕಾರಿಗಳು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

ಎರಡು ದಿನಗಳ ಹಿಂದೆ ಯುವತಿಯ ಮೊಬೈಲ್ ಡೆಲ್ಲಿಯಲ್ಲಿ ಆನ್ ಆಗಿ ಮತ್ತೆ ಆಫ್ ಆಗಿದೆ ಎಂದು ಹೇಳಲಾಗುತ್ತಿದೆ‌. ಸದ್ಯ ಎಸ್​ಐಟಿಯ ಒಂದು ಟೀಂ ದೆಹಲಿಗೆ ತೆರಳಿ ಶೋಧ ಕಾರ್ಯ ಚುರುಕುಗೊಳಿಸಿದೆ‌.

ಪ್ರಮುಖ ಕಿಂಗ್​ಪಿನ್, ಎಥಿಕಲ್ ಹ್ಯಾಕರ್ ಜೊತೆ ಯುವತಿ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ‌. ಯುವತಿ ಹಾಗೂ ಇನ್ನಿಬ್ಬರು ದೆಹಲಿ ಮತ್ತು ಅಕ್ಕಪಕ್ಕದ ರಾಜ್ಯಗಳಲ್ಲಿ ತಲೆಮರೆಸಿಕೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

Last Updated : Mar 18, 2021, 1:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.