ETV Bharat / state

ಪರಿಷತ್​​ನಿಂದ ರಾಜ್ಯಸಭೆವರೆಗೆ 'ಗೌಡ ಆ್ಯಂಡ್​ ಗ್ರ್ಯಾಂಡ್​ ಸನ್ಸ್​'.. ಹೆಚ್​ಡಿಡಿ ಕುಟುಂಬ ರಾಜಕಾರಣಕ್ಕೆ ಮತ್ತಷ್ಟು ಪುಷ್ಟಿ! - ರಾಜಕೀಯಕ್ಕೆ ಧುಮುಕಿದ ದೇವೇಗೌಡರ ಮೊಮ್ಮಗ ಸೂರಜ್​ ರೇವಣ್ಣ

ಹೆಚ್​​ಡಿಡಿ ಕುಟುಂಬದಿಂದ 8ನೇ ರಾಜಕಾರಣಿಯಾಗಿ, ದೇವೇಗೌಡರ ಮೊಮ್ಮಗ ಹಾಗೂ ಹೆಚ್ ಡಿ ರೇವಣ್ಣ-ಭವಾನಿ ದಂಪತಿ ಪುತ್ರ, ಸೂರಜ್ ರೇವಣ್ಣ ಈಗ ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿಯಾಗಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ.

suraj revanna to be become 8th politician in hd family
ಸೂರಜ್ ರೇವಣ್ಣ
author img

By

Published : Nov 23, 2021, 7:15 PM IST

ಬೆಂಗಳೂರು: ಪರಿಷತ್​ ಚುನಾವಣೆಗೆ ಸೋಮವಾರ ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಲಿಸ್ಟ್ ಬಿಡುಗಡೆಯಾಗಿದ್ದು, ಈ ಪಟ್ಟಿ ಮಾಜಿ ಪ್ರಧಾನಿ ದೇವೇಗೌಡ ಕುಟುಂಬ ರಾಜಕಾರಣಕ್ಕೆ ಮಾತ್ರ ಸೀಮಿತ ಎಂಬ ವಾದಕ್ಕೆ ಪುಷ್ಟಿ ನೀಡಿದೆ.

ಹೆಚ್​​ಡಿಡಿ ಕುಟುಂಬದಿಂದ 8ನೇ ರಾಜಕಾರಣಿಯಾಗಿ, ದೇವೇಗೌಡರ ಮೊಮ್ಮಗ ಹಾಗೂ ಹೆಚ್ ಡಿ ರೇವಣ್ಣ- ಭವಾನಿ ದಂಪತಿ ಪುತ್ರ, ಡಾ. ಸೂರಜ್ ರೇವಣ್ಣ ಈಗ ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿಯಾಗಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಸಹೋದರ ಪ್ರಜ್ವಲ್ ರೇವಣ್ಣ ಸಂಸದ, ತಾಯಿ ಭವಾನಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ, ತಂದೆ ಹೆಚ್ ಡಿ ರೇವಣ್ಣ ಶಾಸಕ ಆಗಿದ್ದಾರೆ. ವೈದ್ಯರಾಗಿರುವ ಸೂರಜ್ ರೇವಣ್ಣ ಕೂಡ ಸೇರಿ ಒಟ್ಟು ಎಂಟು ಮಂದಿ ದೊಡ್ಡಗೌಡರ ಕುಟುಂಬದಿಂದ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಈ ಮೂಲಕ 'ಗೌಡ ಆ್ಯಂಡ್ ಸನ್ಸ್' ಎಂಬ ಟೀಕೆ ಇದೀಗ ಸ್ಪಲ್ಪ ಬದಲಾವಣೆಯಾಗಿದ್ದು, 'ಗೌಡ ಆ್ಯಂಡ್ ಗ್ರ್ಯಾಂಡ್ ಸನ್ಸ್' ಆಗಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ಹಾಗಾದ್ರೆ ದೇವೇಗೌಡರ ಕುಟುಂಬ ರಾಜಕೀಯ ಹೇಗಿದೆ?

ದೇವೇಗೌಡರು ರಾಜ್ಯಸಭಾ ಸದಸ್ಯರು, ಪ್ರಜ್ವಲ್ ರೇವಣ್ಣ ಹಾಸನ ಲೋಕಸಭಾ ಸದಸ್ಯ, ನಿಖಿಲ್ ಕುಮಾರಸ್ವಾಮಿ ಮಂಡ್ಯ ಲೋಕಸಭೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದಾರೆ. ಹೆಚ್.ಡಿ. ಕುಮಾರಸ್ವಾಮಿ ಚನ್ನಪಟ್ಟಣ ಶಾಸಕ, ಪತ್ನಿ ಅನಿತಾ ಕುಮಾರಸ್ವಾಮಿ ರಾಮನಗರ ಕ್ಷೇತ್ರದ ಶಾಸಕಿ, ಹೆಚ್.ಡಿ. ರೇವಣ್ಣ ಹೊಳೆನರಸೀಪುರ ಪ್ರತಿನಿಧಿಸಿದರೆ, ಅವರ ಪತ್ನಿ ಭವಾನಿ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದವರು. ಭವಾನಿ ರೇವಣ್ಣ ಅವರೊಬ್ಬರು ಶಾಸಕರಾದರೆ ಬಹುತೇಕ ಕುಟುಂಬ ರಾಜಕಾರಣದಲ್ಲಿ ತೊಡಗಿದಂತಾಗುತ್ತದೆ.

ಪರಿಷತ್ ಚುನಾವಣೆ ಒಟ್ಟು 25 ಸ್ಥಾನಗಳಿಗೆ 20 ಸ್ಥಳೀಯ ಸಂಸ್ಥೆಗಳಿಂದ ನಡೆಯುತ್ತಿದೆ. ಈ ಪೈಕಿ ಜೆಡಿಎಸ್ ಕೇವಲ 7 ಸ್ಥಾನಗಳಿಗೆ ಮಾತ್ರ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, "ಸ್ಥಳೀಯ ನಾಯಕರ ಹಾಗೂ ಕಾರ್ಯಕರ್ತರ ಸಲಹೆ ಪಡೆದು ಪಕ್ಷ ಈ ನಿರ್ಧಾರಕ್ಕೆ ಬಂದಿದೆ. ಕಳೆದ ಬಾರಿ ಪಕ್ಷ 4 ಸ್ಥಾನಗಳನ್ನ ಗೆದ್ದಿತ್ತು. ಈ ಬಾರಿ ತನ್ನ ಸ್ಥಾನಗಳನ್ನು ಹೆಚ್ವಿಸಲು ಪ್ರಯತ್ನ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಭ್ಯರ್ಥಿಗಳ ಲಿಸ್ಟ್ ಬಿಡುಗಡೆ ಸಂದರ್ಭದಲ್ಲಿ ಹೇಳಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.