ETV Bharat / state

ಹಾಸನದಲ್ಲಿ ಸಿಎಂ ಮಾಡಿದ್ದ ಭಾಷಣಕ್ಕೆ ಸೂರಜ್ ರೇವಣ್ಣ ಕಿಡಿ: ಹೇಳಿಕೆ ಮರು ಪರಿಶೀಲಿಸಲು ಆಗ್ರಹ

author img

By

Published : Feb 23, 2023, 6:47 PM IST

ಬೇಲೂರು ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಹೇಳಿಕೆಗೆ ಸೂರಜ್​ ರೇವಣ್ಣ ಆಕ್ಷೇಪ - ಹೇಳಿಕೆ ಮರು ಪರಿಶೀಲನೆಗೆ ಆಗ್ರಹ

suraj-revanna-condemns-cm-bommais-statement
ಹಾಸನದಲ್ಲಿ ಸಿಎಂ ಮಾಡಿದ್ದ ಭಾಷಣಕ್ಕೆ ಸೂರಜ್ ರೇವಣ್ಣ ಕಿಡಿ: ಹೇಳಿಕೆ ಮರು ಪರಿಶೀಲಿಸಲು ಆಗ್ರಹ

ಬೆಂಗಳೂರು : ಹಾಸನ ಅಭಿವೃದ್ಧಿ ಆಗಿಲ್ಲ. ಅಲ್ಲಿ ಒಂದು ಕುಟುಂಬದ ಅಭಿವೃದ್ಧಿ ಆಗಿದೆ ಎನ್ನುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರ ಹೇಳಿಕೆ ಸರಿಯಲ್ಲ. ಈ ಕೂಡಲೇ ಅವರು ತಮ್ಮ ಹೇಳಿಕೆಯನ್ನು ಮರು ಪರಿಶೀಲನೆ ಮಾಡಬೇಕು ಎಂದು ಜೆಡಿಎಸ್ ಸದಸ್ಯ ಸೂರಜ್ ರೇವಣ್ಣ ಆಗ್ರಹಿಸಿದ್ದಾರೆ.

ವಿಧಾನ ಪರಿಷತ್ ನಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ’’ಬೇಲೂರಿನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ‌ ಅವರು ಹಾಸನ ಜಿಲ್ಲೆ ಅಭಿವೃದ್ಧಿಯಾಗಿಲ್ಲ. ಅಲ್ಲಿ ಒಂದು ಕುಟುಂಬದ ಪಾರಮ್ಯವಿದೆ ಎಂದು ಟೀಕಿಸಿದ್ದಾರೆ. ನಮ್ಮ ಕುಟುಂಬದ ಬಗ್ಗೆ ಅವರು ಮಾತನಾಡಿದ್ದಾರೆ. ಆದರೆ ಅವರ ಬಗ್ಗೆ ನಾವು ಗೌರವ ಇಟ್ಟುಕೊಂಡಿದ್ದೇವೆ. ಹಾಸನ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಸರ್ಕಾರ ಅನುದಾನ ನೀಡಿದೆ. ಹೈಟೆಕ್ ಆಸ್ಪತ್ರೆ, ಹೈಟೆಕ್ ಬಸ್ ನಿಲ್ದಾಣ ಸೇರಿದಂತೆ ಸಾಕಷ್ಟು ಅಭಿವೃದ್ಧಿಯನ್ನು ನಮ್ಮ ತಂದೆ ರೇವಣ್ಣ ಮಾಡಿದ್ದಾರೆ. ಹಾಗಾಗಿ ಬೊಮ್ಮಾಯಿ‌ ಅವರು ಬೇಲೂರಿನಲ್ಲಿ ನೀಡಿದ ಹೇಳಿಕೆಯನ್ನು ಮರು ಪರಿಶೀಲಿಸಬೇಕು‘‘ ಎಂದರು.

ಅಚ್ಚೇ ದಿನ ಅಚ್ಚೇ ದಿನ ಅಂತಾರೆ. ಯಾರಿಗೆ ಬಂದಿದೆ ಅಚ್ಚೇ ದಿನ್. ಕಾಂಗ್ರೆಸ್, ಜೆಡಿಎಸ್​​ಗೆ ಅಚ್ಚೇ ದಿನ ಬೇಡ ಜನರಿಗೆ ಅಚ್ಚೇ ದಿನ ಕೊಡಿ. ಈ ಸರ್ಕಾರ ಮಕ್ಕಳಿಗೆ ಅಚ್ಚೇ ದಿನ ಕೊಟ್ಟಿಲ್ಲ. ಜಾನುವಾರುಗಳಿಗೂ ಅಚ್ಚೇ ದಿನ ಕೊಟ್ಟಿಲ್ಲ.ಯಾರಿಗೆ ಅಚ್ಚೇ ದಿನ ಬಂದಿದೆ ಅಂತ ಜನ ತೀರ್ಮಾನ ಮಾಡುತ್ತಾರೆ ಎಂದು ಡಬಲ್ ಇಂಜಿನ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಪಹಣಿ ಗೊಂದಲ ಬಗೆಹರಿಸದ ಕಾರಣ ಡೀಸೆಲ್‌ ಗೆ ಸಹಾಯಧನ ನೀಡುವ ರೈತಶಕ್ತಿ ನಿಶ್ಯಕ್ತಿ ಯೋಜನೆಯಾಗಿದೆ. ಯಂತ್ರಧಾರೆ ಕೇಂದ್ರಗಳಲ್ಲಿ ಗುತ್ತಿಗೆ ಪಡೆದ ಸಂಸ್ಥೆಗಳ ಉದ್ಧಟತನ, ರೈತರಿಂದ ಸುಲಿಗೆಯಾಗುತ್ತಿದ್ದು, ಇದನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಗೆ ಕೊಡಬೇಕು ಎಂದು ಸೂರಜ್ ರೇವಣ್ಣ ಸಲಹೆ ನೀಡಿದರು. ಪಶು ಸಂಗೋಪನೆ ಇಲಾಖೆಯಲ್ಲಿ ಹುದ್ದೆಗಳು ಖಾಲಿಯಿವೆ. ಗೋಶಾಲೆಗಳಿಲ್ಲ, ಈ ಪರಿಸ್ಥಿತಿಯಲ್ಲಿ ಗೋಹತ್ಯೆ ನಿಷೇಧದ ಕಾನೂನು ಜಾರಿ ಅಗತ್ಯವೇನಿತ್ತು? ಎಂದು ಪ್ರಶ್ನಿಸಿದರು.

ಈ ಬಜೆಟ್ ನಲ್ಲಿ ಸಿರಿಧಾನ್ಯ ಬೀಜ ಇನ್ನಿತರ ಸವಲತ್ತುಗಳು, ಮಾರುಕಟ್ಟೆ ವ್ಯವಸ್ಥೆ ಮಾಹಿತಿ ಕೊರತೆ ಇದೆ. 75 ಯೂನಿಟ್ ಉಚಿತ ವಿದ್ಯುತ್ ಅನ್ನು ಎಸ್ ಸಿ, ಎಸ್ ಟಿ ಜತೆಗೆ ಬಿಪಿಎಲ್ ಕಾರ್ಡ್ ಹೊಂದಿರುವ ಎಲ್ಲರಿಗೂ ಕೊಡಬೇಕು, ತಾರತಮ್ಯ ನಿವಾರಿಸಬೇಕು ಎಂದು ಒತ್ತಾಯಿಸಿದರು.

ಕಾನೂನು ಉಲ್ಲಂಘಿಸಿ ಐದು ಸಾವಿರ ಕಾರ್ಖಾನೆ ಸ್ಥಾಪನೆ : ರಾಜ್ಯದಲ್ಲಿ ಕಾನೂನು ಉಲ್ಲಂಘಿಸಿ ಸ್ಥಾಪನೆಯಾಗಿರುವ ಕಾರ್ಖಾನೆಗಳಿಗೆ ಈಗಾಗಲೇ ದಂಡ ವಿಧಿಸಿರುವ ಹಿನ್ನೆಲೆಯಲ್ಲಿ ಮತ್ತೆ ಆ ಕಾರ್ಖಾನೆಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು ಮಾಡಲು ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಪಿ.ಆರ್. ರಮೇಶ್ ಪ್ರಶ್ನೆಗೆ ಉತ್ತರಿಸಿದ ಅವರು, ಹಸಿರು ಪೀಠ 2900 ಕೋಟಿ ದಂಡ ಹಾಕಿಲ್ಲ, ಒಂದು ಮಿಲಿಯನ್ ಲೀಟರ್ ನೀರನ್ನು ಪ್ರತಿ ದಿನ ಸಂಸ್ಕರಣೆ ಮಾಡಬೇಕು ಅದಕ್ಕಾಗಿ 2900 ಕೋಟಿ ವೆಚ್ಚದಲ್ಲಿ ಅಗತ್ಯ ಕ್ರಮ ವಹಿಸಿ ಎಂದು ಹಸಿರುಪೀಠ ಸೂಚಿಸಿದೆ. ಹಾಗಾಗಿ ಸಮಿತಿ ರಚಿಸಿ ಅದರ ಜಾರಿ ಕುರಿತು ಮುಂದುವರೆಯಲಿದ್ದೇವೆ ಎಂದರು.

ರಾಜ್ಯದಲ್ಲಿ ಕಾನೂನು ಉಲ್ಲಂಘಿಸಿ ಕಾರ್ಖಾನೆ ಸ್ಥಾಪನೆ ಮಾಡಿರುವುದು ಕಂಡು ಬಂದಿದೆ. 5 ಸಾವಿರ ಕಾರ್ಖಾನೆ ಕಾನೂನು ಉಲ್ಲಂಘಿಸಿ ಸ್ಥಾಪನೆಯಾಗಿದ್ದು ಅವುಗಳಿಗೆ ಐದು ಪಟ್ಟು ದಂಡ ಹಾಕಲಾಗಿದೆ. ಈಗ ಅವರ ವಿರುದ್ಧ ಮತ್ತೆ ಕ್ರಿಮಿನಲ್ ಕೇಸ್ ಹಾಕಲು ಸಾಧ್ಯವಿಲ್ಲ, ದಂಡ ಸಂಗ್ರಹದ ನಂತರ ಕೇಸ್ ಹಾಕಲು ಬರಲ್ಲ ಎಂದು ನಮ್ಮ ಕಾನೂನು ಸಲಹಾ ತಂಡ ಸಲಹೆ ನೀಡಿದೆ. ಹಾಗಾಗಿ ಕೇಸ್ ದಾಖಲಿಸಲು ಸಾಧ್ಯವಿಲ್ಲ ಎಂದರು.

ಇದನ್ನೂ ಓದಿ : ಕೆಆರ್​ಐಡಿಎಲ್​ ಮೂಲ ಉದ್ದೇಶ ಈಡೇರಿಸಲು ವಿಫಲ: ಸಿಎಜಿ ವರದಿಯಲ್ಲಿ ಬಹಿರಂಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.