ETV Bharat / state

ಎಲ್ಲ ಸಚಿವರು ವರ್ಗಾವಣೆ ದಂಧೆಯಲ್ಲಿದ್ದಾರೆ, ಅದನ್ನು ಮುಗಿಸಿ ಕಲಾಪಕ್ಕೆ ಬರಲಿ: ಸುನೀಲ್ ಕುಮಾರ್

ರಾಜ್ಯಪಾಲರ ಭಾಷಣದ ಮೇಲಿನ‌ ವಂದನಾ ನಿರ್ಣಯದ ಕುರಿತು ಬೇಳೂರು ಗೋಪಾಲಕೃಷ್ಣ ಅವರು ಅಭಿಪ್ರಾಯ ವ್ಯಕ್ತಪಡಿಸಲು ಮುಂದಾದಾಗ ಆಡಳಿತ ಪಕ್ಷದ ಯಾವೊಬ್ಬ ಸಚಿವರೂ ಸದನದಲ್ಲಿ ‌ಇಲ್ಲದ್ದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.‌

session
ಕಲಾಪ
author img

By

Published : Jul 6, 2023, 8:21 AM IST

ಬೆಂಗಳೂರು : ಎಲ್ಲ ಸಚಿವರು ವರ್ಗಾವಣೆ ದಂಧೆಯಲಿದ್ದಾರೆ, ಅದನ್ನು ಮುಗಿಸಿ ಕಲಾಪಕ್ಕೆ ಬರಲಿ ಎಂದು ಬಿಜೆಪಿ ಶಾಸಕ ಸುನೀಲ್ ಕುಮಾರ್ ಆಡಳಿತಾರೂಢ ಕಾಂಗ್ರೆಸ್ ಸಚಿವರ ವಿರುದ್ಧ ಸದನದಲ್ಲಿ ಟಾಂಗ್ ನೀಡಿದರು. ಬುಧವಾರ ವಿಧಾನಸಭೆಯಲ್ಲಿ ಬೇಳೂರು ಗೋಪಾಲಕೃಷ್ಣ ಅವರು ರಾಜ್ಯಪಾಲರ ಭಾಷಣದ ಮೇಲಿನ‌ ವಂದನಾ ನಿರ್ಣಯದ ಕುರಿತು ಮಾತನಾಡುತ್ತಿದ್ದರು. ಈ ವೇಳೆ ಆಡಳಿತ ಪಕ್ಷದ ಯಾವೊಬ್ಬ ಸಚಿವರೂ ಸದನದಲ್ಲಿ ‌ಇರಲಿಲ್ಲ. ಸಚಿವ ಚಲುವರಾಯಸ್ವಾಮಿ ಬಿಟ್ಟರೆ ಯಾರೂ ಇಲ್ಲದ್ದನ್ನು ಗಮನಿಸಿದ ಬಿಜೆಪಿ ಸದಸ್ಯರು ತೀವ್ರ ಟೀಕಾಪ್ರಹಾರ ನಡೆಸಿದರು.‌

ಬಿಜೆಪಿ ಸದಸ್ಯ ಸುನೀಲ್ ಕುಮಾರ್ ಮಾತನಾಡಿ, ಎಲ್ಲ ಸಚಿವರು ವರ್ಗಾವಣೆ ದಂಧೆಯಲಿದ್ದಾರೆ ಅಂದರೆ ಅದನ್ನು ಮುಗಿಸಿ ‌ಬರಲಿ. ಅವರು ಬಂದ ಮೇಲೆ ಮಾತನಾಡಿ. ಈಗ ಯಾರಿಗಾಗಿ ಮಾತನಾಡುತ್ತೀರಿ. ನಮ್ಮ ಮುಂದೆ ಭಾಷಣ ಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ : ಸರಿಯಾದ ಸಮಯಕ್ಕೆ ಸದನಕ್ಕೆ ಬರುವ ಸದಸ್ಯರಿಗೆ ಸೂಕ್ತ ಬಹುಮಾನ: ಸ್ಪೀಕರ್ ಯು.ಟಿ.ಖಾದರ್‌ ಘೋಷಣೆ

ಕಾಂಗ್ರೆಸ್ ಶಾಸಕ ಬೇಳೂರು ಮಾತನಾಡುತ್ತಾ, ಕೊರೊನಾ ಸಂದರ್ಭದಲ್ಲಿ ಅನ್ನ ಸಿಗದ ವೇಳೆ ಸಿದ್ದರಾಮಯ್ಯನವರು ಅನ್ನ ಕೊಟ್ಟರು, ‌ಒಂದು ಹೊತ್ತಿನ ಗಂಜಿ ಕೊಟ್ಟರು ಎಂದರು. ಇದಕ್ಕೆ ಆಕ್ಷೇಪಿಸಿದ ಬಿಜೆಪಿ ಸದಸ್ಯರು, ಕೊರೊನಾ ನಿರ್ವಹಣೆಗೂ ಕಾಂಗ್ರೆಸ್​ಗೂ ಸಂಬಂಧನೇ ಇಲ್ಲ.‌ ಅನ್ನ ಕೊಟ್ಟಿರುವುದು ಪ್ರಧಾನಿ ಮೋದಿ ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ : Legislative council Session: ಕಂದಾಯ ಭೂಮಿ ಒತ್ತುವರಿ ತೆರವಿಗೆ ಕ್ರಮ ಹಾಗು ಬಿಗಿ ವ್ಯವಸ್ಥೆ ಮಾಡಲಿದ್ದೇವೆ.. ಸಚಿವ ಕೃಷ್ಣ ಬೈರೇಗೌಡ

ಬಳಿಕ ಮಾತು ಮುಂದುವರಿಸಿದ ಬೇಳೂರು ಗೋಪಾಲಕೃಷ್ಣ, ಅನ್ನ ಭಾಗ್ಯ, ಯುವನಿಧಿ, ಗೃಹ ಲಕ್ಷ್ಮಿ ಯೋಜನೆ ರಾಜ್ಯದ ಜನರಿಗೆ ಸಿಗುವ ಕೆಲಸ ಆಗಬೇಕು. ಅದನ್ನು ಜಾರಿಗೊಳಿಸಬೇಕು. ಅದಕ್ಕೆ ಸಮಯ ತೆಗೆದುಕೊಳ್ಳುತ್ತದೆ. ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಆಗಬೇಕು ಎಂದರೆ ಹೇಗೆ? ಎಂದು ಇದೇ ವೇಳೆ ಪ್ರಶ್ನಿಸಿದರು.

ಇದನ್ನೂ ಓದಿ : ಬಿಜೆಪಿ ಸದನದ ಬಾವಿಗೆ ಬಿದ್ರೂ, ಯಾರ ನೇತೃತ್ವದಲ್ಲಿ ಅಂತ ಅವರಿಗೇ ಗೊತ್ತಿಲ್ಲ: ಪ್ರಿಯಾಂಕ್ ಖರ್ಗೆ ವ್ಯಂಗ್ಯ

ಪರೇಶ್ ಮೇಸ್ತಾ ನಿಗೂಢ ಸಾವನ್ನು ಕೊಲೆ ಎಂದು ಬಿಂಬಿಸಿ ನಮಗೆ ನಷ್ಟವಾಗಿದೆ. ಸಿಬಿಐ ತನಿಖೆ ಬಂದ ಬಳಿಕ ಅದು ಸಾಮಾನ್ಯ ಸಾವು ಎಂದು ಗೊತ್ತಾಯಿತು. ಪ್ರವೀಣ್ ನೆಟ್ಟಾರು ಪ್ರಕರಣವನ್ನು ಏನು ಅಂತ ಬಿಂಬಿಸಿದ್ದೀರಿ?. ಶಿವಮೊಗ್ಗದಲ್ಲಿ ಹರ್ಷ ಕೊಲೆಯಿಂದ ಸುಮಾರು 90 ದಿನಗಳ ಕಾಲ ಕರ್ಫ್ಯೂ ಇತ್ತು.‌ ಇದರಿಂದ ಶಿವಮೊಗ್ಗದ ಜನರಿಗೆ ಕಷ್ಟ ಆಯಿತು. ಈ ರೀತಿಯ ಘಟನೆ ಕಾಂಗ್ರೆಸ್ ಸರ್ಕಾರದಲ್ಲಿ ನಡೆಯಬಾರದು ಎಂದು ಒತ್ತಾಯಿಸಿದರು.

ಇದನ್ನೂ ಓದಿ : ಐದೂ ಗ್ಯಾರಂಟಿಯನ್ನು ಇದೇ ಆರ್ಥಿಕ ವರ್ಷದಲ್ಲಿ ಈಡೇರಿಸುತ್ತೇವೆ: ಸಿಎಂ ಸಿದ್ದರಾಮಯ್ಯ

ಇನ್ನು ಕೆಲ ಶಾಸಕರು, ಸಚಿವರು ಸದನಕ್ಕೆ ತಡವಾಗಿ ಬರುವುದನ್ನು ಗಮನಿಸಿದ ಸಭಾಧ್ಯಕ್ಷ ಯು.ಟಿ. ಖಾದರ್, ವಿಧಾನಸಭೆಯಲ್ಲಿ ನಿನ್ನೆ ಪ್ರತಿದಿನ ಸಕಾಲಕ್ಕೆ ಬಂದ ಸದಸ್ಯರ ಹೆಸರು ಪ್ರಕಟಿಸಿ ಪ್ರಮಾಣಪತ್ರ ಕೊಡುವುದಾಗಿ ಘೋಷಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.