ಬೆಂಗಳೂರು: ವಿಶೇಷ ತನಿಖಾ ತಂಡದ (ಎಸ್ಐಟಿ) ಮುಖ್ಯಸ್ಥ ಸೌಮೇಂದು ಮುಖರ್ಜಿ 90 ದಿನಗಳ ಸುದೀರ್ಘ ರಜೆ ಬಳಿಕ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಕಳೆದ ಮಾ.10 ರಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣರಕ್ಕೆ ಸಂಬಂಧಿಸಿಂತೆ ತನಿಖೆ ನಡೆಸುವಂತೆ ಎಸ್ಐಟಿ ತಂಡ ರಚಿಸಿ, ಅದರ ಮುಖ್ಯಸ್ಥರಾಗಿ ಸೌಮೇಂದು ಮುಖರ್ಜಿ ಅವರನ್ನು ನೇಮಿಸಿತ್ತು. ತನಿಖೆ ಪ್ರಗತಿ ಹಂತದಲ್ಲಿರುವಾಗಲೇ ಅನಾರೋಗ್ಯದ ಕಾರಣ ನೀಡಿ ಮೇ 1 ರಿಂದ ರಜೆ ಪಡೆದಿದ್ದ ಮುಖರ್ಜಿ ಇದೀಗ 3 ತಿಂಗಳ ಸುದೀರ್ಘ ರಜೆ ಬಳಿಕ ಮತ್ತೆ ಸೇವೆಗೆ ಹಾಜರಾಗಿದ್ದಾರೆ.
ಇದನ್ನೂ ಓದಿ: ಸಿಡಿ ಪ್ರಕರಣದ ತನಿಖೆಗೆ ಎಸ್ಐಟಿ ರಚನೆ: ಸೌಮೇಂದು ಮುಖರ್ಜಿಗೆ ತನಿಖೆ ಜವಾಬ್ದಾರಿ
ಇನ್ನು ಸೌಮೇಂದು ಮುಖರ್ಜಿ ಅನುಪಸ್ಥಿತಿ ಹಿನ್ನೆಲೆ ಸಿಡಿ ಪ್ರಕರಣರಕ್ಕೆ ಸಂಬಂಧಿಸಿಂತೆ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮುಂದಾಳತ್ವದಲ್ಲಿ ತನಿಖೆ ನಡೆಸಿ ಅಂತಿಮ ವರದಿಯನ್ನು ಹೈಕೋರ್ಟ್ಗೆ ಸಲ್ಲಿಸಲಾಗಿದೆ. ಎಸ್ಐಟಿ ಮುಖ್ಯಸ್ಥರ ಅನುಪಸ್ಥಿತಿ ವೇಳೆ ವರದಿ ಸಲ್ಲಿಸಿರುವುದಕ್ಕೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು.